14ನೇ ಸ್ಥಾನಕ್ಕೆ ಜಿಗಿದ ಕಾಫಿನಾಡು
ಜಿಲ್ಲೆಯಲ್ಲಿ ಶೃಂಗೇರಿ ಪ್ರಥಮ, ಚಿಕ್ಕಮಗಳೂರು ಲಾಸ್ಟ್•ಯುಕ್ತ ಜಿ.ಸ್ವಾಮಿ ಜಿಲ್ಲೆಗೆ ಪ್ರಥಮ
Team Udayavani, May 1, 2019, 4:12 PM IST
ಚಿಕ್ಕಮಗಳೂರು: ಕಂಪ್ಯೂಟರಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು.
ಚಿಕ್ಕಮಗಳೂರು: ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆ ರಾಜ್ಯದಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಫಲಿತಾಂಶ ಪಡೆದಿದ್ದು, ಕಳೆದ ಬಾರಿ ರಾಜ್ಯದಲ್ಲಿ 26ನೇ ಸ್ಥಾನದಲ್ಲಿತ್ತು.
ಕಳೆದ ಬಾರಿ ಶೇ.72.47 ರಷ್ಟು ಫಲಿತಾಂಶ ಗಳಿಸಿದ್ದ ಜಿಲ್ಲೆ ಈ ಬಾರಿ 82.76ರಷ್ಟು ಫಲಿತಾಂಶ ದಾಖಲಿಸಿದೆ. ಜಿಲ್ಲೆಯಲ್ಲಿ 5993 ಬಾಲಕರು, 6112 ಬಾಲಕಿಯರು ಸೇರಿ ಒಟ್ಟಾರೆ 12,105 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 4895 ಬಾಲಕರು (ಶೇ.81.67) 5238 ಬಾಲಕಿಯರು (ಶೇ.85.70) ಸೇರಿ ಒಟ್ಟಾರೆ 10,133 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಶೃಂಗೇರಿ ಪ್ರಥಮ: ಜಿಲ್ಲೆಯಲ್ಲಿ ಶೇ.90.96ರಷ್ಟು ಫಲಿತಾಂಶ ಪಡೆದ ಶೃಂಗೇರಿ ಬ್ಲಾಕ್ ಪ್ರಥಮ ಸ್ಥಾನದಲ್ಲಿದ್ದು ಶೇ.74.06ರಷ್ಟು ಫಲಿತಾಂಶ ಪಡೆದ ಚಿಕ್ಕಮಗಳೂರು 8ನೇ ಸ್ಥಾನದಲ್ಲಿದೆ. ಶೇಕಡಾವಾರು ಫಲಿತಾಂಶದಲ್ಲಿ ಕೊಪ್ಪ ಬ್ಲಾಕ್ ಎರಡನೇ ಸ್ಥಾನದಲ್ಲಿ ಇದ್ದು, ಶೇ.85.87ರಷ್ಟು ಫಲಿತಾಂಶ ಬಂದಿದೆ. ಉಳಿದಂತೆ ಮೂಡಿಗೆರೆ ಬ್ಲಾಕ್‌ನಲ್ಲಿ ಶೇ.82.54, ನರಸಿಂಹರಾಜಪುರ ಬ್ಲಾಕ್ ಶೇ.81.67, ಬೀರೂರು ಬ್ಲಾಕ್ ಶೇ.81.12, ಕಡೂರು ಬ್ಲಾಕ್ 78.09, ತರೀಕೆರೆ ಬ್ಲಾಕ್ 76.52, ಚಿಕ್ಕಮಗಳೂರು ಬ್ಲಾಕ್ ಶೇ.74.06 ರಷ್ಟು ಫಲಿತಾಂಶ ಪಡೆದು ಜಿಲ್ಲೆಯ ಕೊನೆಯ ಸ್ಥಾನದಲ್ಲಿದೆ.
ಶೃಂಗೇರಿ ಬ್ಲಾಕ್‌ನಲ್ಲಿ ಪರೀಕ್ಷೆ ಬರೆದಿದ್ದ 575 ವಿದ್ಯಾರ್ಥಿಗಳಲ್ಲಿ 523 ಮಂದಿ ಉತ್ತೀರ್ಣರಾಗಿದ್ದಾರೆ. ಕೊಪ್ಪದಲ್ಲಿ 1026 ರಲ್ಲಿ 881, ಮೂಡಿಗೆರೆ 1317 ರಲ್ಲಿ 1087, ನರಸಿಂಹರಾಜಪುರದಲ್ಲಿ 1004 ರಲ್ಲಿ 820, ಬೀರೂರಿನಲ್ಲಿ 1361 ರಲ್ಲಿ 1104, ಕಡೂರಿನಲ್ಲಿ 2455 ರಲ್ಲಿ 1917, ತರೀಕೆರೆಯಲ್ಲಿ 1951 ರಲ್ಲಿ 1493 ಹಾಗೂ ಚಿಕ್ಕಮಗಳೂರು ಬ್ಲಾಕ್‌ನಲ್ಲಿ ಪರೀಕ್ಷೆ ಬರೆದಿದ್ದ 3740 ವಿದ್ಯಾರ್ಥಿಗಳಲ್ಲಿ 2770 ಮಂದಿ ಉತ್ತೀರ್ಣರಾಗಿದ್ದಾರೆ.
ಶೇ.100 ಫಲಿತಾಂಶ: ಜಿಲ್ಲೆಯಲ್ಲಿ ಒಟ್ಟಾರೆ 61 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಶೂನ್ಯ ಫಲಿತಾಂಶ ಪಡೆದ ಶಾಲೆಗಳು ಯಾವುದೂ ಇಲ್ಲ. ಒಟ್ಟಾರೆ 26 ಸರ್ಕಾರಿ, 2 ಅನುದಾನಿತ ಪ್ರೌಢಶಾಲೆಗಳು ಹಾಗೂ 33 ಅನುದಾನ ರಹಿತ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿವೆ.
ಜಿಲ್ಲೆಗೆ ಮೊದಲ ಸ್ಥಾನ: ನಗರದ ಸಂತ ಮೇರಿಸ್ ಪ್ರೌಢಶಾಲೆ ವಿದ್ಯಾರ್ಥಿನಿ ಯುಕ್ತ ಜಿ.ಸ್ವಾಮಿ 622 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 2ನೇ ಸ್ಥಾನವನ್ನು ಇಬ್ಬರು ವಿದ್ಯಾರ್ಥಿನಿಯರು ಹಂಚಿಕೊಂಡಿದ್ದು, ಸಂತ ಮೇರಿಸ್ ಪ್ರೌಢಶಾಲೆಯ ಭೂಮಿಕಾ ನಾಯ್ಡು ಹಾಗೂ ನರಸಿಂಹರಾಜಪುರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ 621 ಅಂಕಗಳಿಸಿದ್ದಾರೆ.
ಅನುದಾನ ರಹಿತ ಶಾಲೆಗಳ ಮೇಲುಗೈ: 5471 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ 4468 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.81.67 ಫಲಿತಾಂಶ ಪಡೆದಿದ್ದಾರೆ. 3852 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ 3048 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.79.73 ಫಲಿತಾಂಶ, 2782 ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ 2617ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 94.07 ಫಲಿತಾಂಶ ಪಡೆದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 6579 ವಿದ್ಯಾರ್ಥಿಗಳಲ್ಲಿ 5024 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.76.36 ಫಲಿತಾಂಶ ಪಡೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 5466 ವಿದ್ಯಾರ್ಥಿಗಳಲ್ಲಿ 5078 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.92.90 ಫಲಿತಾಂಶ ಹಾಗೂ ಉರ್ದು ಮಾಧ್ಯಮದಲ್ಲಿ 60 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.51.67 ಫಲಿತಾಂಶ ಪಡೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.