ನಾಳೆ 54ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ
ಅಥ್ಲೆಟಿಕ್ಸ್ ಸಂಸ್ಥೆ ರಾಜ್ಯ ಹಿರಿಯ ಉಪಾಧ್ಯಕ್ಷ ಅಜಯ್‌ಕುಮಾರ್ ಮಾಹಿತಿ
Team Udayavani, Nov 30, 2019, 4:06 PM IST
ಚಿಕ್ಕಮಗಳೂರು: ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಡಿ.1ರಂದು 54ನೇ ರಾಜ್ಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ರಾಜ್ಯ ಹಿರಿಯ ಉಪಾಧ್ಯಕ್ಷ ಅಜಯ್ ಕುಮಾರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷ, ಮಹಿಳೆ, ಬಾಲಕ, ಬಾಲಕಿಯರು ಸೇರಿ ಒಟ್ಟು 8 ವಿಭಾಗಗಳಿಂದ ತಲಾ 6 ಜನರಂತೆ
48 ಮಂದಿ ಸ್ಪರ್ಧಿಗಳು ಪ್ರತಿ ಜಿಲ್ಲೆಯಿಂದ ಆಗಮಿಸಲಿದ್ದಾರೆ. 14 ವರ್ಷದೊಳಗಿನವರಿಗೆ ಅವಕಾಶವಿಲ್ಲ. ಎಂಇಜಿ, ಪೊಲೀಸ್ ತಂಡ, ರೈಲ್ವೆ ಮತ್ತಿತರೆ ತಂಡಗಳು ಭಾಗವಹಿಸಲಿವೆ ಎಂದರು.
ರಾಜ್ಯ ಮಟ್ಟದ ಗುಡ್ಡಗಾಡು ಸ್ಪರ್ಧೆಯ ಪುರುಷ ಮತ್ತು ಮಹಿಳೆಯರ ತಂಡ ಡಿ.1 ರಂದು ಬೆ. 6.45 ಕ್ಕೆ ಮಳಲೂರಮ್ಮ ದೇವಸ್ಥಾನದಿಂದ ಹೊರಟು 10 ಕಿ.ಮೀ. ಕ್ರಮಿಸಿ ಸುಭಾಷ್‌ಚಂದ್ರ ಬೋಸ್ ಆಟದ ಮೈದಾನ ತಲುಪಲಿದೆ. 20 ವರ್ಷದ ಬಾಲಕರ ತಂಡ ಬೆ.7.30ಕ್ಕೆ ಸಿರಾಗಪುರ ಶಾಲೆಯಿಂದ ಹೊರಟು 8 ಕಿ.ಮೀ. ಕ್ರಮಿಸಿ ಆಟದ ಮೈದಾನ ಸೇರಲಿದೆ. ಬಾಲಕಿಯರ ತಂಡ ಬೆ.8ಕ್ಕೆ ಬೆಟ್ಟದ ಆಂಜನೇಯ ದೇವಸ್ಥಾನದಿಂದ ಹೊರಟು 6 ಕಿ.ಮೀ. ಸಾಗಿ ಆಟದ ಮೈದಾನ ತಲುಪಲಿದೆ ಎಂದು ತಿಳಿಸಿದರು.
18 ವರ್ಷ ವಯೋಮಾನದ ಬಾಲಕರ ತಂಡ ಬೆಳಗ್ಗೆ 8ಕ್ಕೆ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಿಂದ, ಬಾಲಕಿಯರ ತಂಡ ಸ್ವರ್ಣಭೂಮಿ ಸಿಲ್ವರ್ ಪ್ಲಾಂಟೇಶನ್‌ನಿಂದ ಬೆ.6.45 ಕ್ಕೆ ಹೊರಟು ಗುರಿ ತಲುಪಲಿವೆ. 16ರ ವಯೋಮಾನದ ಬಾಲಕರ ತಂಡ ಬೆ.8 ಕ್ಕೆ ಮತ್ತು ಬಾಲಕಿಯರ ತಂಡ 7.30 ಕ್ಕೆ ಕೋಟೆಯ ಎಂ.ಎಲ್. ಮೂರ್ತಿ ಮನೆ ಆವರಣದಿಂದ 2 ಕಿ.ಮೀ. ಕ್ರಮಿಸಿ ಜಿಲ್ಲಾ ಆಟದ ಮೈದಾನ ತಲುಪಲಿದೆ ಎಂದರು.
ಗುಡ್ಡಗಾಡು ಓಟಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲೆಯ 14 ವಯೋಮಿತಿಯ ಬಾಲಕರ ತಂಡ ಬೆ.8.45ಕ್ಕೆ ಹಾಗೂ ಬಾಲಕಿಯರ ತಂಡಗಳಿಗೆ ಬೆ.9 ಕ್ಕೆ ನಗರದ ಹನುಮಂತಪ್ಪ ವೃತ್ತದಿಂದ ಜಿಲ್ಲಾ ಆಟದ ಮೈದಾನದವರೆಗೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ರಾಜ್ಯ ಮಟ್ಟದ ಪುರುಷ ಮತ್ತು ಮಹಿಳಾ ವಿಭಾಗದ ವಿಜೇತರಿಗೆ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ, ತೃತೀಯ 2ಸಾವಿರ, 4, 5 ಮತ್ತು 6 ನೇ ಬಹುಮಾನವಾಗಿ ತಲಾ 1 ಸಾವಿರ ರೂ. ನೀಡಲಾಗುವುದು. 20 ವರ್ಷದ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ, ತೃತೀಯ 2 ಸಾವಿರ, 4, 5, 6 ನೇ ಬಹುಮಾನವಾಗಿ ತಲಾ 1 ಸಾವಿರ ರೂ. ನೀಡಲಾಗುವುದು. 18 ವರ್ಷದ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ 4 ಸಾವಿರ ರೂ., ದ್ವಿತೀಯ 3 ಸಾವಿರ, ತೃತೀಯ 2 ಸಾವಿರ, 4ನೇ ಬಹುಮಾನವಾಗಿ 1 ಸಾವಿರ, 16 ವರ್ಷ ವಯೋಮಾನದ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ 4 ಸಾವಿರ, ದ್ವಿತೀಯ 3ಸಾವಿರ, ತೃತೀಯ 2 ಸಾವಿರ ಹಾಗೂ 4 ನೇ ಬಹುಮಾನವಾಗಿ 1 ಸಾವಿರ ರೂ. ನೀಡಲಾಗುವುದು. ಜಿಲ್ಲಾ ಮಟ್ಟದ 14 ವರ್ಷದ ಬಾಲಕ, ಬಾಲಕಿಯರ ಸ್ಪರ್ಧೆಯಲ್ಲಿ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಈಗಾಗಲೇ ಆನ್ ಲೈನ್‌ನಲ್ಲಿ ನೋಂದಣಿ ನಡೆಯುತ್ತಿದೆ. ಜಿಲ್ಲೆಯವರಿಗೆ 30 ರವರೆಗೆ ಅವಕಾಶವಿದೆ. ಬಹುಮಾನ ನೀಡಲು ಜಿಆರ್‌ಬಿ ಮತ್ತು ಸಿರಿ ಕೆಫೆ ಉದ್ದಿಮೆಗಳು ಹಣಕಾಸಿನ ನೆರವು ನೀಡಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಉದಯ್ ಪೈ, ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷರಾದ ಯಶೋಧಾ, ಲಕ್ಷ¾ಣಕುಮಾರ, ತರಬೇತುದಾರ ಫ್ರಾನ್ಸಿಸ್ ಹಾಜರಿದ್ದರು.
ಈಗಾಗಲೇ ಆನ್ ಲೈನ್‌ನಲ್ಲಿ ನೋಂದಣಿ ನಡೆಯುತ್ತಿದೆ. ಜಿಲ್ಲೆಯ ವರಿಗೆ 30 ರವರೆಗೆ ಅವಕಾಶವಿದೆ. ಬಹುಮಾನ ನೀಡಲು ಜಿಆರ್‌ಬಿ ಮತ್ತು ಸಿರಿ ಕೆಫೆ ಉದ್ದಿಮೆಗಳು ಹಣಕಾಸಿನ ನೆರವು ನೀಡಿವೆ.
ಅಜಯ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.