ಕೆಸರಲ್ಲೇ ಓಡಿ ಮಿಂಚಿದ ಓಟಗಾರರು
ರಾಜ್ಯಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ ರಾಜ್ಯ ಪೊಲೀಸ್ ತಂಡ ಚಾಂಪಿಯನ್
Team Udayavani, Dec 2, 2019, 1:02 PM IST
ಚಿಕ್ಕಮಗಳೂರು: ರಾಜ್ಯಮಟ್ಟದ 54ನೇ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಬಂದಿದ್ದ ನೂರಾರು ಸ್ಪರ್ಧಾಳುಗಳು ಭಾನುವಾರ ತುಂತುರು ಮಳೆಯ ಮಧ್ಯೆ ಕಾಫಿನಾಡಿನ ಗುಡ್ಡಗಾಡಿನಲ್ಲಿ ಹೆಜ್ಜೆ ಹಾಕಿದರು.
ಶನಿವಾರ ರಾತ್ರಿ ಬಂದ ತುಂತುರು ಮಳೆಯಿಂದಾಗಿ ಕೆಲವೆಡೆ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಕೆಸರು ತುಂಬಿದ್ದ ರಸ್ತೆಯಲ್ಲಿಯೇ ಸ್ಪರ್ಧಾಳುಗಳು ಕಷ್ಟಪಟ್ಟು ಓಡುವಂತಾಗಿತ್ತು. ವಿವಿಧ ವಿಭಾಗದ ಸ್ಪರ್ಧಿಗಳಿಗೆ ಮಳಲೂರಮ್ಮ ದೇವಸ್ಥಾನ, ಸಾಯಿ ಏಂಜಲ್ಸ್ ಶಾಲೆ, ಬೆಟ್ಟದ ಆಂಜನೇಯ ದೇವಸ್ಥಾನ, ಸ್ವರ್ಣ ಭೂಮಿ ಸಿಲ್ವರ್ ಪ್ಲಾಂಟೇಶನ್ ಮತ್ತು ಕೋಟೆಯಿಂದ ಆರಂಭಗೊಂಡ ಓಟ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಅಂತ್ಯಗೊಂಡಿತು.
ಪುರುಷರ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡ ಚಾಂಪಿಯನ್ ಶಿಪ್ ಪಡೆದರೆ, ಮಹಿಳಾ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಪಾರಿತೋಷಕ ತನ್ನದಾಗಿಸಿಕೊಂಡಿತು. 20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಮೂಡಬಿದರೆ, ಬಾಲಕರ ವಿಭಾಗದಲ್ಲಿ ಧಾರವಾಡ, 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಡಿವೈಎಸ್‌ಎಸ್ ಬೆಂಗಳೂರು, ಬಾಲಕಿಯರ ವಿಭಾಗದಲ್ಲಿ ಮೂಡಬಿದರೆ ಆಳ್ವಾಸ್, 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಧಾರವಾಡ, ಬಾಲಕಿಯರ ವಿಭಾಗದಿಂದ ಮೂಡಬಿದರೆ ಆಳ್ವಾಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಮಳಲೂರಮ್ಮ ದೇವಸ್ಥಾನದ ಆವರಣದಿಂದ ಆರಂಭವಾದ ಪುರುಷರ 10 ಕಿಮೀ ಓಟದಲ್ಲಿ ಆಳ್ವಾಸ್‌ನ ಅನಿಲ್ ಕುಮಾರ್ (ಪ್ರಥಮ), ಧಾರವಾಡದ ಸುನೀಲ್ (ದ್ವಿತೀಯ), ಮಂಡ್ಯದ ಸಂದೀಪ್ (ತೃತೀಯ), ಆಳ್ವಾಸ್‌ನ ನವೀನ್ (4ನೇ), ತುಮಕೂರಿನ ಸಂದೀಪ್(5ನೇ), ಬೆಂಗಳೂರಿನ ಲಕ್ಷ್ಮಣ (6ನೇ) ಸ್ಥಾನ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಅರ್ಚನ (ಪ್ರಥಮ), ಚಿತ್ರದೇವಾಡಿಗ (ದ್ವಿತೀಯ), ಧಾರವಾಡದ ಶಾಹಿನ್ (ತೃತೀಯ), ಮೂಡಬಿದರೆಯ ಹರ್ಷಿತಾ(4ನೇ), ಜಯಲಕ್ಷ್ಮೀ (5ನೇ), ಧಾರವಾಡದ ಜ್ಯೋತಿ
(6ನೇ) ಬಹುಮಾನ ಪಡೆದುಕೊಂಡರು.
20 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವೆಂಕಟೇಶ್ (ಪ್ರಥಮ), ಮೈಸೂರಿನ ಅಶುತೋಷ್ (ದ್ವಿತೀಯ), ಧಾರವಾಡದ ಪ್ರತಾಪ್ (ತೃತೀಯ), ಪ್ರಕಾಶ್ (4ನೇ), ಶಿವಮೊಗ್ಗದ ನರಸಿಂಹ (5ನೇ), ಬೆಂಗಳೂರಿನ ಸಾಹಿಲ್ (6ನೇ) ಸ್ಥಾನ ತಮ್ಮದಾಗಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ಮೂಡಬಿದರೆಯ ಪ್ರಿಯಾ (ಪ್ರಥಮ), ಬೆಂಗಳೂರಿನ ಸ್ಮಿತಾ (ದ್ವಿತೀಯ), ಧಾರವಾಡದ ಅನಿತಾ (ತೃತೀಯ), ಮೂಡಬಿದರೆಯ ಮಾಲಾಶ್ರೀ (4ನೇ), ಮೈಸೂರಿನ ಚಿತ್ರಾ (5ನೇ), ಬೆಂಗಳೂರಿನ ಮಲ್ಲೇಶ್ವರಿ (6ನೇ) ಸ್ಥಾನ ಪಡೆದರು.
18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವೈಭವ್ ಎಂ. ಪಾಟೀಲ(ಪ್ರಥಮ), ಬೆಳಗಾವಿ ಅರುಣ್ (ದ್ವಿತೀಯ), ಮೂಡಬಿದರೆ ಸತೀಶ್ (ತೃತೀಯ), ರಾಹುಲ್ (4ನೇ), ಬಾಗಲಕೋಟೆ ಸಂಗಮೇಶ (5ನೇ), ಬೆಂಗಳೂರಿನ ಮಾರುತಿ (6ನೇ) ಸ್ಥಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ರಾಶಿ (ಪ್ರಥಮ), ಮೂಡಬಿದರೆ ಚಿತ್ರಾ (ದ್ವಿತೀಯ), ಕಾವ್ಯ (ತೃತೀಯ), ಮೈಸೂರಿನ ತೇಜಸ್ವಿನಿ, ಮೂಡಬಿದರೆ ಚಿಕ್ಕಮ್ಮ (5ನೇ), ಅಂಜಲಿ (6ನೇ), ಬೆಳಗಾವಿಯ ಶ್ರಾವಣಿ(7ನೇ), ಮೈಸೂರಿನ ಮೊನಿಕಾ (8ನೇ)ಸ್ಥಾನ ಪಡೆದುಕೊಂಡರು. 16 ವರ್ಷದೊಳಗಿನ ಬಾಲಕರಲ್ಲಿ
ಧಾರವಾಡದ ಶಿವಾಜಿ (ಪ್ರಥಮ), ಮೂಡಬಿದರೆಯ ಸುಪ್ರಿತ್(ದ್ವಿತೀಯ), ಬೆಂಗಳೂರಿನ ಆದಿತ್ಯ (ತೃತೀಯ), ಧಾರವಾಡದ ಸಂಕೇತ್ ಶೆಟ್ಟಿ (4ನೇ) ಸ್ಥಾನ ಪಡೆದರು. ಬಾಲಕಿಯರಲ್ಲಿ ಬೆಂಗಳೂರಿನ ಸಂಜನಾ (ಪ್ರಥಮ) ವರ್ಷಿತಾ (ದ್ವಿತೀಯ), ಕೊಪ್ಪಳ ಬಾಲಮ್ಮ (ತೃತೀಯ), ಉಡುಪಿಯ ಪ್ರತೀಕ್ಷಾ (4ನೇ)
ಸ್ಥಾನ ತಮ್ಮದಾಗಿಸಿಕೊಂಡರು.
ಜಿಲ್ಲಾಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ದರ್ಶನ್ (ಪ್ರಥಮ), ನರಸಿಂಹ (ದ್ವಿತೀಯ), ವಿರಾಟ್ (ತೃತೀಯ), ಬಾಲಕಿಯರ ವಿಭಾಗದಲ್ಲಿ ಅಮೃತ (ಪ್ರಥಮ), ಸುಪ್ರಿಯಾ (ದ್ವಿತೀಯ), ಮೌಲ್ಯ ತೃತೀಯ ಸ್ಥಾನ ಪಡೆದುಕೊಂಡರು. ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಉಪಾಧ್ಯಕ್ಷ ಮಹದೇವ, ಸಹ ಕಾರ್ಯದರ್ಶಿ ಅಜಯ್ ಕುಮಾರ್, ಜಿಲ್ಲಾಧ್ಯಕ್ಷ ಉದಯ್ ಪೈ, ಕಾರ್ಯದರ್ಶಿ ಮಂಜುನಾಥ, ಉಪಾಧ್ಯಕ್ಷೆ ಯಶೋಧಾ, ಲವಿನಾಲೋಬೋ, ಲಕ್ಷ್ಮಣಕುಮಾರ್, ಜಿಆರ್‌ಬಿ ಸಂಸ್ಥೆ ವ್ಯವಸ್ಥಾಪಕ ಭಾಸ್ಕರರೆಡ್ಡಿ ಮತ್ತಿತರರು ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.
ವಿವಿಧ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 5 ಸಾವಿರ, 4 ಸಾವಿರ, 3 ಸಾವಿರ ರೂ. ದ್ವಿತೀಯ 3 ಸಾವಿರ, ತೃತೀಯ 2 ಸಾವಿರ, 4,5 ಮತ್ತು 6 ನೇ ಬಹುಮಾನವಾಗಿ ತಲಾ 1 ಸಾವಿರ ರೂ. ನೀಡಲಾಯಿತು. ಇಲ್ಲಿ ಆಯ್ಕೆಯಾದ
28 ಮಂದಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.