ಅನುಕಂಪದ ನೌಕರಿಗಾಗಿ ಯುವಕನ ಪ್ರತಿಭಟನೆ
18ವರ್ಷದಿಂದ ದೊರೆಯದ ನೌಕರಿಗಾಗಿ ಏಕಾಂಗಿ ಹೋರಾಟ
Team Udayavani, Jul 20, 2019, 11:47 AM IST
ಚಿಕ್ಕಮಗಳೂರು: ಅನುಕಂಪದ ಆಧಾರದ ಮೇಲೆ ಕೆಲಸ ನೀಡುವಂತೆ ಧರಣಿ ನಡೆಸಿದ ಜಗದೀಶ್ ಜತೆ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್ಕುಮಾರ್ ಹಾಗೂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿದರು.
ಚಿಕ್ಕಮಗಳೂರು: ತಮ್ಮ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ನೀಡಬೇಕಿದ್ದ ಸರ್ಕಾರಿ ಹುದ್ದೆಯನ್ನು 18 ವರ್ಷಗಳಾದರೂ ನೀಡದೆ ಅಲೆದಾಡಿಸುತ್ತಿರುವ ಶಿಕ್ಷಣ ಇಲಾಖೆ ಕ್ರಮ ಖಂಡಿಸಿ, ವ್ಯಕ್ತಿಯೊಬ್ಬರು ಡಿಡಿಪಿಐ ಕಚೇರಿ ಮುಂದೆ ಏಕಾಂಗಿಯಾಗಿ ಧರಣಿ ಆರಂಭಿಸಿದ್ದಾರೆ.
ಜಗದೀಶ್ ಎಂಬುವರು ಗಾಂಧೀಜಿ ಅವರ ಭಾವಚಿತ್ರ ಹಿಡಿದು ಧರಣಿ ನಡೆಸುತ್ತಿದ್ದು, ಇಲಾಖೆ ತಮಗೆ ಉದ್ಯೋಗ ನೀಡಲು ನಿರಾಕರಿಸುತ್ತಿರುವುದೇಕೆ ಎಂಬ ಬಗ್ಗೆ ಹಿಂಬರಹ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ತಮ್ಮ ತಾಯಿ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ತಮ್ಮ 56ನೇ ವಯಸ್ಸಿನಲ್ಲಿ 2001ರಂದು ಅಕಾಲಿಕವಾಗಿ ನಿಧನರಾದರು. ನಂತರ ಅನುಕಂಪದ ಆಧಾರದಲ್ಲಿ ತಮಗೆ ಉದ್ಯೋಗ ನೀಡಬೇಕೆಂದು ಕೆಸಿಎಸ್‌ಆರ್ ನಿಯಮದ ಪ್ರಕಾರ ಒಂದು ವರ್ಷದೊಳಗಾಗಿ ಅರ್ಜಿ ಜೊತೆಗೆ ಎಲ್ಲಾದಾಖಲೆಗಳನ್ನು ನೀಡಿದರೂ ಇಲಾಖೆ ಪರಿಗಣಿಸದೆ ತಮಗೆ ಅನ್ಯಾಯ ಮಾಡಿದೆ ಎಂದು ಜಗದೀಶ್ ದೂರಿದರು.
ತಾಯಿಯ ನಿಧನದ ನಂತರ ಬರಬೇಕಾದ ಉಪಧನ ಸೇರಿದಂತೆ ಎಲ್ಲ ಹಣವನ್ನು ಕಾನೂನು ಪ್ರಕಾರ ಮಹಾಲೇಖಪಾಲಕರ ಆದೇಶದಂತೆ ನಾನೇ ಪಡೆದುಕೊಂಡಿದ್ದೇನೆ. ಪರಿಸ್ಥಿತಿ ಹೀಗಿದ್ದರೂ 18 ವರ್ಷ ಕಳೆದರೂ ಅನುಕಂಪದ ಆಧಾರದಲ್ಲಿ ನೀಡಬೇಕಾದ ಉದ್ಯೋಗ ಕೊಡುತ್ತಿಲ್ಲ. ಇದನ್ನು ಪ್ರಶ್ನಿಸಿ ಶಾಲಾ ಮುಖ್ಯ ಶಿಕ್ಷಕರಿಂದ ಹಿಡಿದು ಇಲಾಖೆ ಮುಖ್ಯ ಕಾರ್ಯದರ್ಶಿ ಅವರನ್ನು ಪಾರ್ಟಿ ಮಾಡಿ ಕೋರ್ಟ್ ಮೆಟ್ಟಿಲೇರಿದ್ದೇನೆ. ಅಲ್ಲಿಯೂ ನನ್ನ ಪರವಾಗಿಯೇ ಆದೇಶಗಳು ಬಂದಿವೆ. ಆದರೂ, ಇಲಾಖೆ ಮಾನ್ಯ ಮಾಡುತ್ತಿಲ್ಲ ಎಂದು ಹೇಳಿದರು.
ವಂಶವೃಕ್ಷ ನೀಡಬೇಕೆಂದು 2004ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೇಳಿದರು. ಅದರಲ್ಲೂ ನನ್ನ ತಾಯಿಗೆ ನಾನೊಬ್ಬನೇ ಮಗ ಎಂದು ಸ್ಪಷ್ಟವಾಗಿ ಹೇಳಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಲಾಖೆಗೆ ಬಂದಾಗಲೆಲ್ಲ ಅದನ್ನು ತನ್ನಿ, ಇದನ್ನು ತನ್ನಿ ಎನ್ನುತ್ತ ಸಾಗಹಾಕುತ್ತಾರೆ. ಈ ಸಂಬಂಧ ಡಿಡಿಪಿಐ ಅವರು ಈ ಹಿಂದೆಯೇ ಡಿಒ ಪತ್ರ ನೀಡಿದ್ದರೂ ಕ್ರಮ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 1957ರ ಅಡಿ ನಿರ್ವಾಹಕರು, ಅಧೀಕ್ಷಕರು ಹಾಗೂ ಪತ್ರಾಂಕಿತ ಅಧಿಕಾರಿ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು ಎಂದು ಪ್ರಶ್ನಿಸಿದರು.
18 ವರ್ಷ ಕಳೆದರೂ ಇಲಾಖೆ ಅನುಕಂಪ ತೋರದಿದ್ದರೆ ನಾನೇನು ಮಾಡಬೇಕು. ನನಗೂ ಒಂದು ಜೀವನ ಇದೆ. ಇಲಾಖೆ ಸಿಬ್ಬಂದಿ ಕಡತಗಳು ಎಂದರೆ ಒಂದು ಘನವಸ್ತು ಎಂದಷ್ಟೇ ತಿಳಿದಂತಿದೆ. ಪ್ರತಿಯೊಂದು ಕಡತದ ಹಿಂದೆ ಪ್ರತಿಯೊಬ್ಬರ ಜೀವನದ ಜೀವನಾಡಿ ಇದೆ. ಈ ಹಿನ್ನೆಲೆಯಲ್ಲಿ ನನಗಾದ ಅನ್ಯಾಯವನ್ನು ತಕ್ಷಣ ಪರಿಹರಿಸಬೇಕು. ಈ ಬಗ್ಗೆ ಎಲ್ಲಾ ರೀತಿಯ ಹೋರಾಟ ನಡೆಸಿ ಸಾಕಾಗಿ ಈಗ ಶಾಂತಿಯುತವಾಗಿ ಮೌನ ಪ್ರತಿಭಟನೆಗೆ ಮುಂದಾಗಿದ್ದೇನೆ ಎಂದರು.
ವಿಷಯ ತಿಳಿದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತ ಅನಿಲ್ಕುಮಾರ್ ಮತ್ತು ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಸ್ಥಳಕ್ಕೆ ಆಗಮಿಸಿ ಜಗದೀಶ್ ಅವರ ಅಹವಾಲು ಆಲಿಸಿದರು. ಜಗದೀಶ್ ಅವರ ವಿಚಾರದಲ್ಲಿ ರೆಕಾರ್ಡ್ ಸೆಕ್ಷನ್ ಸಂಬಂಧ ಏನೋ ಸಮಸ್ಯೆ ಇದೆ. ಡಿಡಿಪಿಐ ಕಚೇರಿ, ಜೆಡಿ ಕಚೇರಿಯಿಂದ ಡಿಸಿ ಕಚೇರಿಗೆ ಬಂದಿರುವ ಪತ್ರಗಳು ಅವರ ಬಳಿ ಇವೆ. ಇದೆಲ್ಲದಕ್ಕೂ ಸಂಬಂಧಿಸಿದಂತೆ ಜಗದೀಶ್ ಅವರಿಗೆ ಸ್ಪಷ್ಟನೆ ಕೊಡುವಂತೆ ಡಿಡಿಪಿಐ ಅವರಿಗೆ ಸೂಚಿಸಿದ್ದೇವೆ ಎಂದು ರವೀಂದ್ರ ಬೆಳವಾಡಿ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಜಗದೀಶ್, ಬಿಇಒ ಹಿಂಬರಹ ನೀಡಿದ್ದಾರೆ. ಒಂದು ವಾರ ಸಮಯಾವಕಾಶ ನೀಡುತ್ತೇನೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜು.26 ರಿಂದ ವಿಷದ ಬಾಟಲಿಯೊಂದಿಗೆ ಡಿಡಿಪಿಐ ಕಚೇರಿ ಎದುರು ಬದುಕು ಇಲ್ಲ ಸಾವು ಎಂದು ಧರಣಿ ಆರಂಭಿಸುವುದಾಗಿ ಹೇಳಿದರು.
ಜಗದೀಶ್ ಅವರಿಗೆ ಶುಕ್ರವಾರ ಹಿಂಬರಹ ನೀಡಲಾಗಿದೆ. ಮೇಲಧಿಕಾರಿಗಳ ಸೂಚನೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
•ಜಯರಾಂ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.