ಕಾಫಿನಾಡಲ್ಲಿ ಅಷ್ಟ ಮಹಾಲಕ್ಷ್ಮೀ ದೇಗುಲ ನಿರ್ಮಾಣ

ವಿಶಿಷ್ಟ ವಾಸ್ತುಶೈಲಿಯ ದೇಗುಲಶ್ರೀರಾಮ, ಆಂಜನೇಯ, ಗಣಪತಿ, ಕಾರ್ತಿಕೇಯ ದೇಗುಲವೂ ಸಿದ್ಧ

Team Udayavani, Dec 9, 2019, 3:29 PM IST

December-13

ಚಿಕ್ಕಮಗಳೂರು: ದಕ್ಷಿಣ ಭಾರತದಲ್ಲೇ ಮೊದಲನೆಯದು ಎನ್ನಲಾದ ವಿಶಾಲ ಅಷ್ಟಲಕ್ಷ್ಮೀ ಸಹಿತ ಮಹಾಲಕ್ಷ್ಮೀ ದೇವಾಲಯ ನಗರದಲ್ಲಿ ಶಿಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ನಗರದ ಕಡೂರು-ಮಂಗಳೂರು ರಸ್ತೆಯಲ್ಲಿ ಹಿಂದಿನ “ಮೈಸೂರು ಕಾಫಿ ಕ್ಯೂರಿಂಗ್‌ ವರ್ಕ್ಸ್’ ಇದ್ದ ಜಾಗದ ಎದುರು ಅಷ್ಟಲಕ್ಷ್ಮೀಯರ ದೇಗುಲದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಪ್ರಧಾನ ದೇವತೆ ಮಹಾಲಕ್ಷ್ಮೀ ವಿಗ್ರಹ ಹಾಗೂ ಅಷ್ಟಲಕ್ಷ್ಮಿಯರಾದ ವಿಜಯಲಕ್ಷ್ಮೀ, ಆದಿಲಕ್ಷ್ಮೀ, ಧಾನ್ಯಲಕ್ಷ್ಮೀ, ಧನಲಕ್ಷ್ಮೀ, ಗಜಲಕ್ಷ್ಮೀ, ವೀರಲಕ್ಷ್ಮೀ, ಐಶ್ವರ್ಯಲಕ್ಷ್ಮೀ, ಸಂತಾನಲಕ್ಷ್ಮೀ ವಿಗ್ರಹಗಳು ಸಿದ್ಧಗೊಂಡಿವೆ.

ಕಪ್ಪು ಶಿಲೆಯಲ್ಲಿ ಸುಂದರವಾಗಿ ಅರಳಿರುವ ಮಹಾಲಕ್ಷ್ಮೀಯರ ವಿಗ್ರಹದ ಜತೆಗೆ ಶ್ರೀರಾಮ, ಲಕ್ಷ್ಮಣ, ಸೀತಾ, ಆಂಜನೇಯ, ಗಣಪತಿ, ಕಾರ್ತಿಕೇಯನ ವಿಗ್ರಹಗಳ ಪ್ರತಿಷ್ಠಾಪನೆಯೂ ನಡೆಯಲಿದ್ದು, ಎಲ್ಲ ದೇವತಾ ವಿಗ್ರಹಗಳನ್ನು ಈಗಾಗಲೇ ದೇವಾಲಯದಲ್ಲಿ ಜಲಾವಾಸದಲ್ಲಿಡಲಾಗಿದೆ.

1996ರಲ್ಲೇ ಶಿಲಾನ್ಯಾಸ: ಮೈಸೂರು ಕಾಫಿ ವೆಲ್ಫೇರ್‌ ಟ್ರಸ್ಟ್‌ 1996 ರಲ್ಲೇ ಚಂದ್ರದ್ರೋಣ ಪರ್ವತಗಳ ತಪ್ಪಲಿನಲ್ಲಿ ಹಸಿರಿನಿಂದ ಆವೃತ್ತವಾಗಿರುವ ಚಿಕ್ಕಮಗಳೂರು ನಗರದಲ್ಲಿ ಮಹಾಲಕ್ಷ್ಮಿಯ ವಿಶಿಷ್ಟ ಶೈಲಿಯ ದೇವಾಲಯ ನಿರ್ಮಾಣಕ್ಕೆ ನಾಂದಿ ಹಾಡಲಾಗಿತ್ತು. ಅಂದಿನ ಮೈಸೂರು ಕಾಫಿ ಕ್ಯೂರಿಂಗ್‌ನ ಆಡಳಿತ ನಿರ್ದೇಶಕರಾಗಿದ್ದ ವಿ.ರಾಮರಾವ್‌ ಅವರು ದೇವಾಲಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರ ಅಮೃತ ಹಸ್ತದಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.

ನಂತರ ಕಾಫಿ ಮಾರುಕಟ್ಟೆಯಲ್ಲಿ ಆದ ಏರಿಳಿತದಿಂದ ದೇವಾಲಯದ ಪಂಚಪ್ರಾಕಾರ ನಿರ್ಮಾಣವಾದರೂ ಉಳಿದ ಕಾರ್ಯ ಸ್ಥಗಿತಗೊಂಡಿತ್ತು. ಬೇರೆ ಆದಾಯ ಮೂಲದಿಂದ ದೇಗುಲದ ನಿರ್ಮಾಣ ಮುಗಿಸುವ ಪ್ರಯತ್ನಕ್ಕೆ ಮುಂದಾಗಿ ನಂತರ ಕೈಬಿಡಲಾಗಿತ್ತು.

ಆದರೆ ಈಗ ಸುಂದರ ದೇವಾಲಯ ನಿರ್ಮಾಣವಾಗಿದೆ. ಶೃಂಗೇರಿ ಶ್ರೀಗಳು “ನಿನ್ನ ಕೈಯಲ್ಲಿಯೇ ನಿರ್ಮಾಣ ಪೂರ್ಣಗೊಳ್ಳಲಿದೆ’ ಎಂದು ಹೇಳಿದ್ದು, ಆ ವಾಕ್ಯವೀಗ ನಿಜವಾಗಿದೆ. ದೇವಾಲಯ ನಿರ್ಮಾಣ ಕಾರ್ಯ ಶೇ.90 ರಷ್ಟು ಮುಗಿದಿದೆ ಎಂದು ರಾಮರಾವ್‌ ಹಿಂದಿನದ್ದನ್ನು ನೆನಪಿಸಿಕೊಳ್ಳುತ್ತಾರೆ.

ಒಟ್ಟು 104*104 ಉದ್ದಗಲದ ವಿಶಾಲ ನಿವೇಶನದಲ್ಲಿ ಉತ್ತರಾಭಿಮುಖವಾಗಿ ಮಹಾದ್ವಾರ, ಭಕ್ತರು ಮಹಾಲಕ್ಷ್ಮೀ ಸೇರಿದಂತೆ ಅಷ್ಟಲಕ್ಷ್ಮಿಯರಿಗೆ ಪ್ರದಕ್ಷಿಣೆ ಬರಲು 5 ಪ್ರಾಕಾರಗಳು, ಅದಕ್ಕೆ ಸೂಕ್ತ ನೆಲಹಾಸು ಹಾಕಲಾಗಿದೆ. ದೇಗುಲದ ಮಧ್ಯದಲ್ಲಿ ಪ್ರಧಾನ ದೇವತೆ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪನೆಗೆ ಗರ್ಭಗುಡಿ ಸಿದ್ಧಗೊಂಡಿದೆ.

ನಾಲ್ಕು ಉಪದಿಕ್ಕಿನಲ್ಲೂ ದೇಗುಲ: ಭಕ್ತರ ನಿತ್ಯಾರಾಧನೆಗೆ ಅನುಕೂಲವಾಗುವಂತೆ 4 ಉಪದಿಕ್ಕುಗಳಲ್ಲೂ ದೇವಾಲಯ ನಿರ್ಮಿಸಲಾಗಿದೆ. ಈಶಾನ್ಯದಲ್ಲಿ ಶ್ರೀರಾಮ ಸೀತಾಲಕ್ಷ್ಮಣ ಸಮೇತನಾಗಿ ಪ್ರತಿಷ್ಠಾಪನೆಗೊಳ್ಳಲಿದ್ದರೆ, ಆಗ್ನೇಯದಲ್ಲಿ ಆಂಜನೇಯ, ನೈಋತ್ಯದಲ್ಲಿ ಗಣಪತಿ, ವಾಯವ್ಯದಲ್ಲಿ ಕಾರ್ತಿಕೇಯ ದೇವಾಲಯಗಳಿವೆ.

ನಾಲ್ಕು ಮೂಲೆಯಲ್ಲೂ ಅಮೃತ ಶಿಲೆಯಿಂದ ನಿರ್ಮಿಸಿರುವ ಅಷ್ಟಲಕ್ಷ್ಮಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಪ್ರತಿ ಉಪಮೂಲೆಯಲ್ಲಿ 2 ಅಷ್ಟಲಕ್ಷ್ಮಿ ವಿಗ್ರಹಗಳು ಸ್ಥಾಪನೆಗೊಳ್ಳಲಿವೆ. ಭಕ್ತರಿಗೆ ಯಾವುದೇ ರೀತಿ ಇಕ್ಕಟ್ಟಾಗದಂತೆ ಪೂಜೆ ಮಾಡಿಸಿಕೊಂಡು ಹೋಗಲು 4 ದಿಕ್ಕುಗಳಲ್ಲೂ ಅವಕಾಶ ಮಾಡಿಕೊಡಲಾಗಿದೆ. ಹೊನ್ನಿನ ಬಣ್ಣದ ಮಹಾಗೋಪುರವು ಸಿದ್ಧಗೊಂಡು ಕಳಸ ಪ್ರತಿಷ್ಠಾಪನೆಗೆ ಕಾಯುತ್ತಿದೆ.

ದೇವಾಲಯದ ಪೂರ್ಣ ನೀಲನಕ್ಷೆ ಹಾಗೂ ನಿರ್ಮಾಣದ ಹೊಣೆಯನ್ನು ಅಂತಾರಾಷ್ಟ್ರೀಯ ಖ್ಯಾತಿ ಶಿಲ್ಪಿ ಡಾ.ವಿ.ಗಣಪತಿ ಸ್ತಪತಿ ವಾಸ್ತುಶಾಸ್ತ್ರದ ಪ್ರಕಾರ ಸಿದ್ಧಪಡಿಸಿದ್ದು, ಅವರ ಮಾರ್ಗದರ್ಶನದಲ್ಲೆ ದೇವಾಲಯ ಹಾಗೂ ದೇವರ ವಿಗ್ರಹಗಳ ಕೆತ್ತನೆ ಪೂರ್ಣಗೊಂಡಿದೆ.

ಹೊರಗೆ ದ್ವಾರಗಣಪತಿ ಮೂರ್ತಿ ನೆಲೆಗೊಳ್ಳಲಿದ್ದು, ನಾಗದೇವರಿಗಾಗಿ ಪ್ರತ್ಯೇಕ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ದೇವಾಲಯದ ಆರಂಭೋತ್ಸವ ಹಾಗೂ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವವನ್ನು ಶೃಂಗೇರಿ ಉಭಯಶ್ರೀಗಳ ಸೂಚನೆ ಅನುಸರಿಸಿ ದಿನ ನಿಗದಿ ಮಾಡಿ ಕೈಗೊಳ್ಳಲಾಗುವುದು ಎಂದು ರಾಮರಾವ್‌ ಹೇಳಿದರು.

ಸಂಪತ್ತಿನ ಸಕಲ ಕಾರ್ಯ ಸಿದ್ಧಿಯ ಮಹಾಲಕ್ಷ್ಮೀ ದೇವಾಲಯವನ್ನು ವಿಶಿಷ್ಟ ವಿಭಿನ್ನ ವಾಸ್ತು ಶೈಲಿಯಲ್ಲಿ ನಿರ್ಮಿಸುವ ಪ್ರೇರಣೆಯಾಗಿದ್ದು, ಅದು ಈಗ ಕಾರ್ಯಗತಗೊಳ್ಳುವ ಹಂತಕ್ಕೆ ಬಂದಿದೆ. ಮಹಾಲಕ್ಷ್ಮಿ ದೇಗುಲ ನಿರ್ಮಿಸಿ ನಗರದ ಹಲವಾರು ದೇವಸ್ಥಾನಗಳ ಸಾಲಿಗೆ ಮತ್ತೂಂದನ್ನು ಸೇರಿಸುವ ಯೋಚನೆ ಮಾಡದೆ, ವಾಸ್ತು ಶಾಸ್ತ್ರದ ಆಧಾರದ ಮೇಲೆ ವಿಶಿಷ್ಟ ವಿನ್ಯಾಸದಲ್ಲಿ ಇನ್ನೆಲ್ಲೂ ಕಂಡುಬರದ ದೇವಸ್ಥಾನ ಇದಾಗಿದೆ. ವಿ.ರಾಮರಾವ್‌,
ಆಡಳಿತ ನಿರ್ದೇಶಕರು,
ಮೈಸೂರು ಕಾಫಿ ವೆಲ್ಫೇರ್‌ ಟ್ರಸ್ಟ್‌. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.