ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ‘ಕಳಸಪ್ರಾಯ’
1905ರಲ್ಲಿ ಮೊದಲ ಸಹಕಾರ ಸಂಘ ಆರಂಭ 1910ರಲ್ಲಿ ಚಿಕ್ಕಮಗಳೂರಲ್ಲಿ ಮೊದಲ ಸಂಘ ಆರಂಭ
Team Udayavani, Nov 15, 2019, 3:00 PM IST
ಎಸ್.ಕೆ.ಲಕ್ಷ್ಮೀ ಪ್ರಸಾದ್
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಶತಮಾನಕ್ಕೂ ಹಿಂದೆಯೇ ಹಿರಿಯ ಸಹಕಾರಿಗಳ ದೂರದೃಷ್ಟಿಯ ಫಲವಾಗಿ ಆರಂಭಗೊಂಡ ಸಹಕಾರ ಸಂಘಗಳು ಇಂದು ಬೃಹದಾಕಾರವಾಗಿ ಬೆಳೆದು ನಿಲ್ಲುವ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲಿ ಮುಕುಟಪ್ರಾಯವಾಗಿ ಕಂಗೊಳಿಸುತ್ತಿವೆ.
ಜಿಲ್ಲೆಯಲ್ಲಿ 1905ರಲ್ಲಿ ಮೊದಲ ಸಹಕಾರ ಸಂಘ ಆರಂಭವಾಗಿದ್ದು, ತರೀಕೆರೆ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ “ಆ ದಿ ಕರ್ನಾಟಕ ಕೋ ಆಪರೇಟಿವ್ ಸೊಸೈಟಿ’ ಹೆಸರಿನಲ್ಲಿ ಮೊದಲ ಸಹಕಾರ ಸಂಘ ಆರಂಭವಾಯಿತು. ಆ ನಂತರ ಮೂಡಿಗೆರೆ ತಾಲೂಕಿನ ಕಳಸದಲ್ಲಿ 1906ರಲ್ಲಿ ಗಜಾನನ ಸಹಕಾರ ಸಂಘ, ಅದೇ ವರ್ಷ ಕಡೂರಿನಲ್ಲಿ ಪಟ್ಟಣ ಸಹಕಾರ ಸಂಘ ಆರಂಭವಾಯಿತು.
ಚಿಕ್ಕಮಗಳೂರಿನಲ್ಲಿ ಪ್ರಥಮ ಸಹಕಾರ ಸಂಘ ಆರಂಭವಾಗಿದ್ದು 1910ರಲ್ಲಿ. ಈ ಪೈಕಿ ಮೊದಲ ಎರಡು ಸಹಕಾರ ಸಂಘಗಳು ಈ ಹಿಂದೆಯೇ ಸಮಾಪನೆಗೊಂಡಿದ್ದು, ಉಳಿದ ಸಂಘಗಳು ಈಗಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟಾರೆ 561 ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಸಹಕಾರಿ ಸಾರಿಗೆ, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಹಾಗೂ ಕರ್ನಾಟಕ ಮಹಿಳಾ ಸಹಕಾರಿ ಬ್ಯಾಂಕ್‌ಗಳು ಪ್ರಮುಖವಾಗಿವೆ.
ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಹಾಮಂಡಳ 1, ರಾಜ್ಯಮಟ್ಟದ ಒಳಗಿರುವ ಸಹಕಾರ ಸಂಘಗಳು 2, ಜಿಲ್ಲಾಮಟ್ಟದ ಸಹಕಾರ ಸಂಘಗಳು 20, ತಾಲೂಕು ಮಟ್ಟ ಮೀರಿ ಜಿಲ್ಲಾಮಟ್ಟದೊಳಗಿನ 14, ತಾಲೂಕು ಮಟ್ಟದ ಸಹಕಾರ ಸಂಘಗಳು 56, ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ ಸಹಕಾರ ಸಂಘಗಳು 561 ಇವೆ.
ಈ ಪೈಕಿ 48 ಸಹಕಾರ ಸಂಘಗಳು “ಎ’ ಗ್ರೇಡ್ ಆಗಿದ್ದರೆ, 72 ಬಿ, 389 ಸಿ, 20 ಡಿ ಹಾಗೂ 32 ಎನ್ ಗ್ರೇಡ್‌ನ ಸಹಕಾರ ಸಂಘಗಳಾಗಿವೆ. ಇವುಗಳಲ್ಲಿ 387 ಸಹಕಾರ ಸಂಘಗಳು ಲಾಭದಾಯಕವಾಗಿವೆ. 144 ಸಹಕಾರ ಸಂಘಗಳು ನಷ್ಟದಲ್ಲಿದ್ದರೆ, 30 ಸಹಕಾರ ಸಂಘಗಳು ಲಾಭ-ನಷ್ಟ ಎರಡೂ ಇಲ್ಲದ ಸಹಕಾರ ಸಂಘಗಳಾಗಿವೆ.
561 ಸಹಕಾರ ಸಂಘಗಳಲ್ಲಿ 23 ಸಹಕಾರ ಸಂಘಗಳು ಸಮಾಪನೆ ಗೊಂಡಿವೆ. ಪರಿಶಿಷ್ಟ ಜಾತಿ ವರ್ಗದ 10, 134 ಮಹಿಳಾ ಸಹಕಾರ ಸಂಘಗಳು, 3 ಪರಿಶಿಷ್ಟ ಜಾತಿ, 3 ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ 5 ಹಾಗೂ 406 ಸಾಮಾನ್ಯ ಸಹಕಾರ ಸಂಘಗಳಿವೆ.
ಹಳ್ಳಿಗಳಲ್ಲೂ ಡಿಸಿಸಿ ಬ್ಯಾಂಕ್ ಶಾಖೆ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಡೆಸುತ್ತಿದ್ದು, ಪ್ರತಿ ವರ್ಷ “ಎ’ ದರ್ಜೆ ಪಡೆಯುತ್ತಿದೆ. ಡಿಸಿಸಿ ಬ್ಯಾಂಕ್ ಈಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಶಾಖೆಗಳನ್ನು ತೆರೆಯುತ್ತಿದ್ದು, ಎಲ್ಲ ಶಾಖೆಗಳೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ ಮತ್ತೂಂದು ಪ್ರಮುಖ ಸಹಕಾರ ಸಂಸ್ಥೆ ಎಂದರೆ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್. ಈ ಬ್ಯಾಂಕ್ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ನಗರದಲ್ಲಿ ಮುಖ್ಯ ಕಚೇರಿ ಹಾಗೂ ಶಾಖೆ ಇದ್ದರೆ, ಕಡೂರಿನಲ್ಲಿ ಮತ್ತೂಂದು ಶಾಖೆ ತೆರೆಯಲಾಗಿದೆ. ಮಹಿಳಾ ಸಹಕಾರ ಬ್ಯಾಂಕ್ ಜಿಲ್ಲೆಯ ಹೊರಗೂ ತನ್ನ ಶಾಖೆ ತೆರೆದಿದ್ದು, ಶಿವಮೊಗ್ಗದಲ್ಲೂ ಬ್ಯಾಂಕ್ ಶಾಖೆ ಕಾರ್ಯ ನಿರ್ವಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.