ಓದುಗರಿದ್ದಾರೆ-ಸಿಬ್ಬಂಧಿಯೇ ಇಲ್ಲ!
ಜ್ಞಾನ ದೇಗುಲದಲ್ಲಿ ಶೇ.50 ಅಧಿಕಾರಿ, ಸಿಬ್ಬಂದಿ ಹುದ್ದೆ ಖಾಲಿಪ್ರತಿವರ್ಷ 2.10ಲಕ್ಷ ರೂ. ಅನುದಾನ
Team Udayavani, Oct 26, 2019, 7:15 PM IST
ಚಿಕ್ಕಮಗಳೂರು: ನಗರದಲ್ಲಿ ಗ್ರಂಥಾಲಯ ಗಳಿಗೆ ಭೇಟಿ ನೀಡುವ ಸಾರ್ವಜನಿಕರ ಸಂಖ್ಯೆ ಉತ್ತಮವಾಗಿದೆ. ಆದರೆ, ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸ ಬೇಕಾದ ಅಧಿಕಾರಿ, ಸಿಬ್ಬಂದಿ ಹುದ್ದೆ ಶೇ.50 ರಷ್ಟು ಖಾಲಿ ಉಳಿದಿರುವುದೇ ದೊಡ್ಡ ಸಮಸ್ಯೆಯಾಗಿದೆ. ನಗರ ವ್ಯಾಪ್ತಿಯಲ್ಲಿ ಕೇಂದ್ರ ಗ್ರಂಥಾಲಯವೂ ಸೇರಿದಂತೆ ಒಟ್ಟಾರೆ 7 ಗ್ರಂಥಾಲಯಗಳಿವೆ. ಇವುಗಳಿಗೆ ಸರ್ಕಾರ ಮಂಜೂರಾತಿ ನೀಡಿರುವ ಹುದ್ದೆಗಳು 20. ಆದರೆ, ಈಗ ಕರ್ತವ್ಯ ನಿರ್ವಹಿಸುತ್ತಿರುವವರು ಕೇವಲ 10 ಜನ. ಬರೋಬ್ಬರಿ ಶೇ.50 ರಷ್ಟು ಹುದ್ದೆಗಳು ಖಾಲಿ ಇವೆ.
ಅದರಲ್ಲೂ ಪ್ರಮುಖವಾಗಿ ಮುಖ್ಯ ಗ್ರಂಥಾಲಯಾಧಿಕಾರಿ ಹುದ್ದೆಯೇ ಖಾಲಿ ಇದ್ದು, ಪ್ರಸ್ತುತ ಬೇರೆ ಜಿಲ್ಲೆಯ ಮುಖ್ಯ ಗ್ರಂಥಾಲಯಾಧಿಕಾರಿ ನಿಯೋಜನೆ ಮೇರೆಗೆ ವಾರಕ್ಕೆ ಮೂರು ದಿನ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಗ್ರಂಥಾಲಯದ ಕಟ್ಟಡವು ಸ್ವಂತದ್ದಾಗಿದೆ. 3 ಶಾಖಾ ಗ್ರಂಥಾಲಯಗಳು, 2 ಸೇವಾ ಗ್ರಂಥಾಲಯಗಳು ನಗರಸಭೆ ಸೇರಿದಂತೆ ಇನ್ನಿತರೆ ಸರ್ಕಾರಿ ಕಟ್ಟಡಗಳಲ್ಲಿ ಉಚಿತವಾಗಿ ನಡೆಯುತ್ತಿವೆ. ಕಟ್ಟಡಗಳು ಸುಸ್ಥಿತಿಯಲ್ಲಿವೆಯಾದರೂ ಕೆಲವು ಶಾಖಾ ಗ್ರಂಥಾಲಯಗಳಲ್ಲಿ ಭಾರೀ ಮಳೆಯಾದಾಗ ಸೋರುತ್ತವೆ.
ಒಂದು ಸಂಚಾರಿ ಗ್ರಂಥಾಲಯವೂ ಇದ್ದು, ವಾಹನ ಸ್ವಂತದ್ದಾಗಿದೆ. ಉತ್ತಮ ಪ್ರತಿಕ್ರಿಯೆ: ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಉತ್ತಮವಾಗಿದೆ. ಪ್ರತಿನಿತ್ಯ 1500 ಜನರು ಗ್ರಂಥಾಲಯಕ್ಕೆ ಭೇಟಿ ನೀಡಿ ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.
ಗ್ರಂಥಾಲಯಗಳ ನಿರ್ವಹಣೆಗೆಂದು ಸರ್ಕಾರದಿಂದ ಪ್ರತಿವರ್ಷ 2.10 ಲಕ್ಷ ರೂ. ಅನುದಾನ ಬರುತ್ತಿದೆ. ಸಂಚಾರಿ ಗ್ರಂಥಾಲಯಕ್ಕೆ ಪ್ರತ್ಯೇಕವಾಗಿ ನಿರ್ವಹಣೆಗೆಂದು 70 ಸಾವಿರ ರೂ. ಅನುದಾನ ಬರುತ್ತಿದೆ. ಇದಲ್ಲದೆ ನಗರಸಭೆಯಿಂದ ಸಂಗ್ರಹವಾಗುವ ಸೆಸ್ ಹಣದಲ್ಲಿ ಗ್ರಂಥಾಲಯ ನಿರ್ವಹಣೆಗೆ ಶೇ.6ರಷ್ಟು ಅನುದಾನವನ್ನು ಪ್ರತಿವರ್ಷ ಕೊಡಬೇಕಿದೆ. ಕಳೆದ ಹಲವು ವರ್ಷಗಳಿಂದ ಭಾರೀ ಕಡಿಮೆ ಹಣವನ್ನು ನಗರಸಭೆಯಿಂದ ನೀಡಲಾಗುತ್ತಿತ್ತು. ರಾಜ್ಯ ಮಟ್ಟದಲ್ಲಿಯೇ ತೀರ್ಮಾನವಾದಂತೆ ಈ ವರ್ಷ ಹಳೆಯ ಬಾಕಿಯೂ ಸೇರಿ 65 ಲಕ್ಷ ರೂ.ಅನ್ನು ಗ್ರಂಥಾಲಯಕ್ಕೆ ನಗರಸಭೆ ಪಾವತಿಸಿದೆ.
ಜಿಲ್ಲಾ ಕೇಂದ್ರದಲ್ಲಿರುವ ಈ ಸುಂದರ ಗ್ರಂಥಾಲಯ ಕಟ್ಟಡವನ್ನು ವಿಸ್ತರಿಸುವ ಆಲೋಚನೆಯನ್ನು ಜಿಲ್ಲಾಡಳಿತ ಸೇರಿದಂತೆ ಯಾವ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡಿಲ್ಲ. ಗ್ರಂಥಾಲಯದ ಕಟ್ಟಡದ ಹಿಂಭಾಗದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲು ಸಾಕಷ್ಟು ಜಾಗವಿದೆ. ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳ ಪ್ರಕಾರ ವಿಸ್ತರಣಾ ಕಟ್ಟಡ ನಿರ್ಮಿಸಲು 3 ಕೋಟಿ ರೂ. ಪ್ರಸ್ತಾವನೆ ಹಾಗೂ ನೀಲ ನಕ್ಷೆ ಸಿದ್ಧವಾಗಿದೆ. ಗ್ರಂಥಾಲಯಕ್ಕೆ ಬರುವ ಸೆಸ್ ಹಣ ಬಳಸಿಕೊಂಡು ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ. ಮೀಸಲಿಡಲಾಗಿದೆ.
ಈ ಹಣದ ಜೊತೆಗೆ ಜಿಲ್ಲೆಯ ಓರ್ವ ಸಂಸದರು, 5 ಮಂದಿ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು ಸೇರಿ ತಲಾ 25 ರಿಂದ 30 ಲಕ್ಷ ರೂ. ಅನ್ನು ವಿಸ್ತರಣಾ ಕಟ್ಟಡ ನಿರ್ಮಾಣಕ್ಕೆ ನೀಡಿದರೆ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಈ ಸಂಬಂಧ ಓದುಗರು ಸಹ ಅಭಿವೃದ್ಧಿ ನಿಧಿಯಿಂದ ಹಣ ನೀಡಲು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ, ಈವರೆಗೂ ಯಾವ ರೀತಿಯ ಸ್ಪಂದನೆಯೂ ದೊರೆತಿಲ್ಲ. ಜ್ಞಾನದ ಖಜಾನೆಯಾದ ಗ್ರಂಥಾಲಯ ಯಾರಿಗೂ ಬೇಡವಾಗಿದೆ.
ಒಟ್ಟಾರೆಯಾಗಿ ನಗರದಲ್ಲಿರುವ ಗ್ರಂಥಾಲಯಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ನಗರದ ಜನತೆ ಸುಳ್ಳಾಗಿಸಿದ್ದಾರೆ. ಇಲ್ಲಿ ಖಾಲಿ ಇರುವ ಅಧಿ ಕಾರಿ, ಸಿಬ್ಬಂದಿ ಕೊರತೆಯೇ ಪ್ರಮುಖವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.