ರಾಮಮಂದಿರ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿ
Team Udayavani, Nov 25, 2019, 5:55 PM IST
ಚಿಕ್ಕಮಗಳೂರು: ರಾಮನವಮಿ ಸಂದರ್ಭದ ಲ್ಲಾದರೂ ಅಯೋಧ್ಯೆಯ ಜನ್ಮಭೂಮಿಯಲ್ಲಿ ಭವ್ಯಮಂದಿರ ನಿರ್ಮಾಣದ ಶಂಕುಸ್ಥಾಪನೆ ನೆರವೇರಬೇಕು. ಶೀಘ್ರದಲ್ಲೆ ಕೆಲಸ ಆರಂಭಗೊಂಡು ನಮ್ಮ ಜೀವಿತಾವಧಿಯಲ್ಲೆ ಪೂರ್ಣಗೊಳ್ಳಬೇಕೆಂಬುದು ದೇಶವಾಸಿಗಳ ಆಶಯ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನುಡಿದರು.
ಸಾಯಿ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿಬಾಬಾರ 94ನೆಯ ವರ್ದ್ಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಶ್ರೀರಾಮ ಪಟ್ಟಾಭಿಷೇಕದ ನಂತರ ಮಾತನಾಡಿದ ಅವರು, ಶ್ರೀರಾಮಚಂದ್ರ ಪುರುಷೋತ್ತಮ, ಸದ್ವಿಚಾರಗಳ ಗಣಿ. ಅವನ ಕಥೆ ಮಾಯಣ, ಮಹಾಭಾರತ, ಭಾಗವತ ನಮ್ಮ ಅಸ್ಮಿತೆ. ವಾಲ್ಮೀಕಿ ಮಹರ್ಷಿಯ ರಾಮಾಯಣದ ನಂತರ ಅನೇಕ ಕವಿ, ಸಾಹಿತಿ, ಚಿಂತಕರು ಇದೇ ಕೃತಿಯನ್ನು ತಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸಿ ಬರೆದಿದ್ದಾರೆ. ಕಂಬರ, ತುಳಸಿ, ಸಾಕೇತ ಮತ್ತಿತರರ ರಾಮಾಯಣಗಳು ಜನಪ್ರಿಯ. ರಾಮನ ಹೆಸರಿಗೆ ದೊಡ್ಡಶಕ್ತಿ ಇದೆ. ಉಕ್ರೇನ್ ದೇಶ ಸೇರಿದಂತೆ ಅನೇಕ ದೇಶದ ಜನ ರಾಮ ತಮ್ಮ ದೇಶದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದರು.
ವಾಲ್ಮೀಕಿ ರಾಮಾಯಣದಲ್ಲಿ ಬದುಕು ಕಟ್ಟಿಕೊಟ್ಟರೆ, ವ್ಯಾಸ ಮಹಾಭಾರತದಲ್ಲಿ ಬದುಕು ಬಿಚ್ಚಿಟ್ಟರು. ಇವೆರಡೂ ಬದುಕಿಗೆ ಮಾರ್ಗದರ್ಶಿ. ರಾಮಚಂದ್ರ ಶಾಮ, ಸೋಮೇಶ್ವರರ ರೂಪಗಳು ಸೃಷ್ಟಿ-ಸ್ಥಿತಿ-ಲಯದ ಪ್ರತೀಕ. ತ್ರಿನೇತ್ರರನ್ನು ಸ್ಮರಿಸಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ರಾಮ ರಮಣೀಯ. ಕೃಷ್ಣ ಸ್ಮರಣೀಯ ಎಂಬ ಡಿವಿಜಿ ಮಾತುಗಳನ್ನು ಉಲ್ಲೇಖೀಸಿದರು.
ರಾಮ ಅಂದರೆ ಸಂಸ್ಕೃತಿ, ಸಂಸ್ಕಾರ, ಧರ್ಮ, ಪುರುಷೋತ್ತಮ, ಭಕ್ತಿ, ಯುಕ್ತಿ, ಉಕ್ತಿ, ಶಕ್ತಿ ಎಲ್ಲವೂ ಹೌದು. ಶ್ರೀರಾಮನ ದಶಗುಣಗಳನ್ನು ಚಾಣಕ್ಯ ವಿವರಿಸಿದ್ದು ಧರ್ಮ ತತ್ಪರತೆ, ಮಧುರಮುಖ, ದಾನಗುಣ, ಸುಂದರರೂಪ ಪ್ರಮುಖ ಎಂದರು. ಔದಾರ್ಯ, ಶಾಂತಿಯ ಗಣಿ. ಮಿತಭಾಷಿ, ಜ್ಞಾನಿ, ಸುವಿಚಾರಿ, ಸಜ್ಜನ ಪ್ರೇಮಿ, ಪ್ರಜಾಪ್ರೇಮಿ, ಸಹಜಕವಿ ಮತ್ತಿತರ ಗುಣಗಳನ್ನು ರಾಮನಲ್ಲಿ ಕಾಣಬಹುದು ಎಂದರು.
ರಾಮಜನ್ಮಭೂಮಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಗೆಹರಿದಿದ್ದು ಸಂತಸ ತಂದಿದೆ. ರಾಮನವಮಿಯಲ್ಲಾದರೂ ಭವ್ಯಮಂದಿರಕ್ಕೆ ಜನ್ಮಸ್ಥಳದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಶೀಘ್ರ ಕಾರ್ಯಪೂರ್ಣಗೊಂಡು ಸಂತಸ ತರಲೆಂದ ಹಿರೇಮಗಳೂರು ಕಣ್ಣನ್, ಸಂಸ್ಕೃತಿ ಉಳಿಸುವಲ್ಲಿ ಶ್ರೀರಾಮ ಪಟ್ಟಾಭಿಷೇಕ ಸ್ಮರಣೀಯ. ಆದರ್ಶ ಕಾವ್ಯ ರಾಮಾಯಣ ನಮ್ಮೆಲ್ಲರ ಬದುಕಿಗೆ ದಿಕ್ಸೂಚಿ ಎಂದರು.
ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಮಾತನಾಡಿ, ಪುಟಪರ್ತಿಯಲ್ಲಿ ಜನಿಸಿದ 14 ವರ್ಷದ ನಂತರ ಅವತಾರ ಘೋಷಿಸಿಕೊಂಡವರು ಬಾಬಾ. ನಂತರ ಲೀಲೆ ಮಹಿಮೆಗಳನ್ನು ಪ್ರಾರಂಭಿಸಿ ಜನರಿಗೆ ಸಂಸ್ಕಾರ ಕೊಡುವ ಕಾರ್ಯ ಮಾಡಿದವರು. ನಮ್ಮೊಳಗಿನ ದೈವತ್ವ ಉದ್ದೀಪನೆಗೆ ಕೊಟ್ಟ ಸಂಸ್ಥೆ ಇದು. ಪುಟಪರ್ತಿ ವಿಶ್ವದ ಪ್ರಮುಖ ಆಧ್ಯಾತ್ಮಿಕ ಕ್ಷೇತ್ರವಾಗಿ ವಿಕಾಸಗೊಂಡಿದೆ. ಎಲ್ಲ ಭಾಷೆ, ಧರ್ಮ ನಂಬಿಕೆಯ ಜನ ಇಲ್ಲಿಗೆ ಬರುತ್ತಾರೆ. ದೈವ ಪ್ರೀತಿ, ಪಾಪ ಭೀತಿ ನಮ್ಮಲ್ಲಿರಬೇಕು. ಆಧ್ಯಾತ್ಮಿಕ ಪಥದ ಮೂಲವೇ ಧರ್ಮ. ನಮ್ಮೆಲ್ಲರ ಅಂತಿಮ ಗುರಿ ಮೋಕ್ಷಪ್ರಾಪ್ತಿ ಹಾಗೂ ಆನಂದ.
ಸಂತೋಷ ಅಷ್ಟೇ ಅಲ್ಲ ಆನಂದ ಅನುಭವಿಸಲು ಮಂದಿರಕ್ಕೆ ಬರಬೇಕು. ಪ್ರೀತಿ, ಧರ್ಮ, ನಮ್ಮ ಆದ್ಯತೆಯಾಗಬೇಕು ಎಂದರು.
ಸಮಿತಿಯ ಮುಖಂಡರಾದ ಎಂ.ಆರ್ .ನಾಗರಾಜ್, ಎಲ್.ಎನ್.ಅಂಕೋಲೇಕರ್, ಶ್ರೀನಿವಾಸ, ಭೋಜೇಗೌಡ, ವಾಸು, ರವಿ, ಮಲ್ಲಿಕಾರ್ಜುನ ಮತ್ತಿತರರು ಪಾಲ್ಗೊಂಡಿದ್ದರು. ವಿದ್ವಾನ್ ವೈಷ್ಣವಸಿಂಹ ನೇತೃತ್ವದಲ್ಲಿ ಶ್ರೀಮದ್ ರಾಮಾಯಣ ಪಾರಾಯಣ, ವಿವರಣೆ ಪುಷ್ಪಾಭಿಷೇಕ, ಮಂಗಲ ನೀಲಾಂಜನ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.