ಬಾನಂಗಳದ ಆಟ ಕಣ್ತುಂಬಿಕೊಂಡ ಜನ
ಕಂಕಣ ಸೂರ್ಯಗ್ರಹಣದ ವಿಸ್ಮಯ ಕಂಡು ಖುಷಿಪಟ್ಟ ಮಕ್ಕಳು, ಮಹಿಳೆಯರು, ಯುವಕರು
Team Udayavani, Dec 27, 2019, 12:34 PM IST
ಚಿಕ್ಕಮಗಳೂರು: ನಗರದ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಿದ ಸಂದರ್ಭದಲ್ಲಿ, ಬೆಳಗ್ಗೆ 9.38ಕ್ಕೆ ತನ್ನ ಹೊಳಪನ್ನು ಮರೆಮಾಚುವಂತೆ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಗ್ರಹಾಧಿಪತಿ ಸೂರ್ಯ ತನ್ನ ಅಂಚುಗಳನ್ನು ಸ್ವರ್ಣಮಯವಾಗಿಸಿಕೊಂಡ.
ಸೌರ ಮಂಡಲದ ಈ ವಿದ್ಯಮಾನ ಹಾಗೂ ಖಗೋಳ ವಿಸ್ಮಯವನ್ನು ಜನ ಅನುಭವಿಸಿ ಖುಷಿಪಟ್ಟರು. ಸೂರ್ಯಗ್ರಹಣದ ಅಂಗವಾಗಿ ಸಂಪ್ರದಾಯವನ್ನು ಅನುಸರಿಸುವವರು ಗ್ರಹಣ ಹಿಡಿದ ಕಾಲ ಹಾಗೂ ಬಿಟ್ಟ ಕಾಲದಲ್ಲಿ ಸ್ನಾನ ಮಾಡಿ ಗ್ರಹಣ ಪೂರ್ವ ಹಾಗೂ ನಂತರದ ಆಚರಣೆಗಳನ್ನು ಮನೆಗಳಲ್ಲಿ ನಡೆಸಿದರು.
ಅನೇಕ ಜನ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೊರಬಂದು ಸೂರ್ಯನನ್ನು ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಹೇಗೆ ಮರೆಮಾಚುತ್ತದೆ ಎಂಬ ದೃಶ್ಯವನ್ನು ನೋಡಿ ನಭೋ ಮಂಡಲದಲ್ಲಿ ನಡೆದ ವಿದ್ಯಮಾನಕ್ಕೆ ಸಾಕ್ಷಿಭೂತರಾದರು. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರ ಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆ ಮಾಡಿತ್ತು. ಸಂಘದ ಗೌರವಾಧ್ಯಕ್ಷ ಎ.ಎನ್.ಮಹೇಶ್, ಅಧ್ಯಕ್ಷ ಎಚ್.ಎಂ.ನೀಲಕಂಠಪ್ಪ, ಕಾರ್ಯದರ್ಶಿ ಟಿ.ತ್ಯಾಗರಾಜ್, ಸಹ ಕಾರ್ಯದರ್ಶಿಗಳಾದ ಟಿಜಿಕೆ ಅರಸ್, ಕೆ.ಜಿ.ನೀಲಕಂಠಪ್ಪ ಬೆಳಗ್ಗೆ 7.45ಕ್ಕೆ ಆಜಾದ್ ವೃತ್ತಕ್ಕೆ ಆಗಮಿಸಿ ಗ್ರಹಣದ ವಿಶೇಷತೆಯನ್ನು, ಆ ಬಗ್ಗೆ ಇರುವ ಭಯದ ವಾತಾವರಣವನ್ನು ದೂರ ಮಾಡುವ ಬಗ್ಗೆ ವಿವರಗಳನ್ನು ನೀಡತೊಡಗಿದರು.
ವಿಜ್ಞಾನ ಕೇಂದ್ರದ ವತಿಯಿಂದ ಸೂರ್ಯ ಗ್ರಹಣ ವೀಕ್ಷಣೆಗೆ ಕಣ್ಣಿಗೆ ಯಾವುದೇ ರೀತಿ ಹಾನಿಯಾಗದಂತೆ ವೀಕ್ಷಿಸಲು ಸೌರ ಸೋಸುಕಗಳನ್ನು ಆಸಕ್ತ ಜನತೆಗೆ ನೀಡಿ ಗ್ರಹಣ ವೀಕ್ಷಿಸಲು ಪ್ರೇರೇಪಿಸಲಾಯಿತು. ಬೆಳಗ್ಗೆ 8.04 ಗಂಟೆಗೆ ಚಂದ್ರನ ನೆರಳು ಭೂಮಿಯನ್ನು ತಾಕಿದಾಕ್ಷಣ ಸೂರ್ಯನ ಮೇಲ್ಭಾಗದಿಂದ ಗ್ರಹಣ ಆವರಿಸಲಾರಂಭಿಸಿತು. 9 ಗಂಟೆಯ ವೇಳೆಗೆ ಅರ್ಧ ಸೂರ್ಯಾಕೃತಿ ಕಂಡುಬಂತು. ಪ್ರಖರವಾಗಿದ್ದ ಸೂರ್ಯ ಕಿರಣಗಳು ಕ್ಷೀಣವಾಗುತ್ತಾ ಏರಿದ ಬಿಸಿಲು ಮಾಯವಾಯಿತು.
ಮೊದಲ ಬಾರಿಗೆ ಈ ಆಕಾಶದ ವಿದ್ಯಮಾನವನ್ನು ವೀಕ್ಷಿಸಿದ ಪುಟಾಣಿಗಳಾದ ಪೂರ್ವಿ, ಪ್ರಚುರ, ಲೋಕೇಶ್‌ರಾಜು, ಮಹೇಶ್, ಪ್ರಶಿಕ್ಷ, ಸೌರ ಸೋಸುಕಗಳನ್ನು ತಮ್ಮ ಮೂಗಿನ ಮೇಲಿಟ್ಟು ಚಂದ್ರನಿಂದ ಮುಚ್ಚಿ ಹೋಗುತ್ತಿರುವ ಸೂರ್ಯನನ್ನು ನೋಡುತ್ತಾ ಅಚ್ಚರಿಯಿಂದ ಸೌರ ಸಂಭ್ರಮವನ್ನು ವೀಕ್ಷಿಸಿದರು.
ಗ್ರಹಣ ವೀಕ್ಷಿಸುವ ತವಕವಿದ್ದರೂ ಏನಾದರೂ ಕೆಟ್ಟದಾದರೆ? ಈ ಸಂಶಯ ಹೊತ್ತ ಕೆಲವರು ಗುಂಪಿನಲ್ಲಿದ್ದು, ನೋಡುತ್ತಿದ್ದವರ ಉತ್ಸಾಹ ಹಾಗೂ ಕುತೂಹಲದಿಂದ ಪ್ರೇರಿತರಾಗಿ ಸೋಸುಕಗಳನ್ನು ಪಡೆದು ಸೂರ್ಯ ಗ್ರಹಣದ ಸವಿಗೆ ಒಳಗಾದರು.
ಹೆಸರು ಹೇಳಲಿಚ್ಛಿಸದ ಮಹಿಳೆಯೋರ್ವರಿಗೆ ಗ್ರಹಣ ನೋಡುವ ಆಸೆ. ಆದರೆ, ನೋಡಿದರೆ ಏನಾಗುತ್ತದೋ ಎಂಬ ಭಯ. ನೋಡಿದರೆ ಏನೂ ಆಗಲ್ವಾ ಎನ್ನುತ್ತಲೇ ಸೋಸುಕವನ್ನು ಕಣ್ಣಿಗೆ ಅಡ್ಡ ಹಿಡಿದು ಗ್ರಹಣ ವೀಕ್ಷಿಸಿ ತೃಪ್ತಿಯ ನಗೆ ಹೊರಹಾಕಿದರು.
ಸೋಸುಕಗಳ ಕೊರತೆ: ವಿಜ್ಞಾನ ಕೇಂದ್ರ ಗ್ರಹಣದ ಬಗ್ಗೆ ಇರುವ ಭಯದಿಂದ ಹೆಚ್ಚು ಜನ ಗ್ರಹಣ ವೀಕ್ಷಿಸಲು ಬರುವುದಿಲ್ಲವೆಂದು ಭಾವಿಸಿತ್ತು. ಹಾಗಾಗಿ, ಹೆಚ್ಚು ಸೌರ ಸೋಸುಕಗಳನ್ನು ತರಿಸಿರಲಿಲ್ಲ.
ಆದರೆ, ಗ್ರಹಣ ಆರಂಭದ ನಂತರ ವೀಕ್ಷಕರ ಸಂಖ್ಯೆ ಹೆಚ್ಚಾಯಿತು. ಹಾಗಾಗಿ, ಇರುವಷ್ಟು ಸೋಸುಕಗಳಲ್ಲೆ ಅವರಿಂದ ಇವರು ಅದನ್ನು ಪಡೆದುಕೊಂಡು ಗ್ರಹಣ ಪ್ರಕ್ರಿಯೆಯನ್ನು ನೋಡಿ ಆನಂದಿಸಬೇಕಾಯಿತು.
ಕೆಲವರು ಹೆಚ್ಚು ಸೋಸುಕಗಳನ್ನು ತರಿಸಿದ್ದರೆ ಖರೀದಿಸಿ ನಾವೂ ನೋಡಿ ಮನೆಯವರಿಗೂ ತೋರಿಸ ಬಹುದಾಗಿತ್ತು ಎಂದು ಹೇಳುತ್ತಿದ್ದುದು ಕೇಳಿಬಂತು.
ಮಕ್ಕಳ ಅನಿಸಿಕೆ: ಗ್ರಹಣ ವೀಕ್ಷಿಸಿದ ಕೆಲವು ವಿದ್ಯಾರ್ಥಿಗಳು ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ನಾನು ಮೊದಲ ಬಾರಿಗೆ ಸೂರ್ಯ ಗ್ರಹಣ ನೋಡಿದೆ. ತುಂಬಾ ಸಂತೋಷವಾಯಿತು. ನನಗೇನು ಹೆದರಿಕೆ ಆಗಲಿಲ್ಲ ಎಂದು ಪೂರ್ವಿ ಹೇಳಿದರು.
ಗ್ರಹಣ ನೋಡಲು ನನಗೆ ಭಯವಿಲ್ಲ. ಮನೆಯಲ್ಲೂ ಯಾರೂ ಹೋಗಬೇಡ ಎಂದು ಹೇಳಲಿಲ್ಲ, ಆದರೆ ಬರಿಗಣ್ಣಿನಲ್ಲಿ ನೋಡಬೇಡ ಎಂದಿದ್ದಾರೆ. ನೋಡಿ ಖುಷಿಯಾಯಿತು ಎಂದು ಸಮಿತ್ ಶಾಲೆ ಪ್ರಚುರ ತಿಳಿಸಿದರು.
ಗ್ರಹಣ ನೋಡಿದರೆ ಏನೂ ಆಗಲ್ಲ. ಈಗ ನೋಡಿದೆ. ಖುಷಿಯಾಯಿತು. ಮತ್ತೆ-ಮತ್ತೆ ನೋಡಬೇಕು ಅನ್ಸುತ್ತೆ. ಮನೆಯಲ್ಲೂ ಹೋಗಿ ನೋಡು ಅಂತ ಮಹೇಶ್ ಹೊಸಮನೆ ಹೇಳಿದರು. ನಾನು ಗ್ರಹಣ ನೋಡುತ್ತಿರುವುದು ಇದೇ ಫಸ್ಟ್. ಸೂರ್ಯಗ್ರಹಣ ನೋಡಿ ಸಂತೋಷವಾಯಿತು. ತುಂಬಾ ಚೆನ್ನಾಗಿದೆ. ಇನ್ನು ನೋಡ್ತಾ ಇರೋಣ ಅನ್ಸುತ್ತೆ ಎಂದು ಸಂತ ಜೋಸೆಫರ ಕಾನ್ವೆಂಟ್‌ನ ಪ್ರೇಶಿಕ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.