ಚಿಂಚೋಳಿ ಇತಿಹಾಸದಲ್ಲೇ ದಾಖಲೆ ಮತದಾನ
ಮೊದಲ ಉಪಚುನಾವಣೆಯಲ್ಲಿ ಶೇ.70ಕ್ಕಿಂತಲೂ ಅಧಿಕ ಹಕ್ಕು ಚಲಾಯಿಸಿದ ಮತದಾರ
Team Udayavani, May 20, 2019, 2:38 PM IST
ಕಲಬುರಗಿ: ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಗೌತಮ ವೈಜನಾಥ್ ಪಾಟೀಲ್ ಅವರು ಚಿಂಚೋಳಿ ಕ್ಷೇತ್ರದ ತುಮಕುಂಟಾದಲ್ಲಿ ಮತದಾನಗೈದು ಬೆಂಬಲಿಗರೊಂದಿಗೆ ಬೆರಳಿನ ಶಾಹಿ ತೋರಿಸಿದರು.
ಕಲಬುರಗಿ: ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಮತದಾರರು ರವಿವಾರ ನಡೆದ ಉಪ ಚುನಾವಣೆಯಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 44 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲಿನ ನಡುವೆಯೂ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.70ಕ್ಕಿಂತ ಅಧಿಕ ಮತದಾನವಾಗಿದೆ. ಕಳೆದ 2018ರ ಚುನಾವಣೆಯಲ್ಲಿ ಅತ್ಯಧಿಕ ಶೇ.68.47ರಷ್ಟು ಮತದಾನವಾಗಿತ್ತು.
ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಾ| ಉಮೇಶ ಜಾಧವ್ ಅವರ ರಾಜೀನಾಮೆಯಿಂದ ಚಿಂಚೋಳಿ ವಿಧಾನಸಭೆ ಕ್ಷೇತ್ರ ತೆರವಾಗಿತ್ತು. ಇದರಿಂದಾಗಿ ಚಿಂಚೋಳಿ ಕ್ಷೇತ್ರ ಇದೇ ಮೊದಲ ಬಾರಿಗೆ ಉಪಚುನಾವಣೆಗೆ ಸಾಕ್ಷಿಯಾಗಿತ್ತು. 1957ರಿಂದ 2018ರವರೆಗೆ ಒಟ್ಟು 14 ಚುನಾವಣೆಗಳು ನಡೆದರೂ ಎಲ್ಲೂ ಉಪ ಚುನಾವಣೆ ನಡೆದಿರಲಿಲ್ಲ.
ಪ್ರಥಮ ಬಾರಿಗೆ ನಡೆದ ಉಪ ಚುನಾವಣೆಗೆ ಮತದಾನ ಮುಕ್ತಾಯದ ಸಮಯಕ್ಕೆ ಶೇ.70.75ರಷ್ಟು ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಚಿಂಚೋಳಿಯಲ್ಲಿ 99,047 ಪುರುಷ ಮತ್ತು 94,806 ಹಾಗೂ 16 ಇತರ ಮತದಾರರ ಸೇರಿ ಒಟ್ಟು 1,93,869 ಇದ್ದರು. ಇದರಲ್ಲಿ 70,223 ಪುರುಷ ಹಾಗೂ 66,938 ಮಹಿಳೆಯರು ಸೇರಿದಂತೆ 1,37,161 ಜನರು ಮತದಾನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.