ಮೊದಲ ಬಾರಿ ಬಸ್ ಬಂದ ಖುಷಿ!
•ಇನ್ನಿಲ್ಲ ವಿದ್ಯಾರ್ಥಿಗಳಿಗೆ ನಡೆಯೋ ಸಂಕಷ್ಟ•ಸಮಸ್ಯೆಗೆ ಸ್ಪಂದಿಸಿದ ಸಂಸದರು-ಶಾಸಕರು
Team Udayavani, Jul 13, 2019, 10:11 AM IST
ಚಿಂಚೋಳಿ: ಗಡಿಭಾಗದ ಜವಾಹರ ನಗರ ತಾಂಡಾಕ್ಕೆ ಮೊದಲ ಬಾರಿ ಬಸ್ ಆಗಮಿಸಿದ ಖುಷಿಯಲ್ಲಿ ಜನತೆ ಹಾಗೂ ವಿದ್ಯಾರ್ಥಿಗಳು.
ಚಿಂಚೋಳಿ: ಕುಂಚಾವರಂ ಗಡಿಭಾಗದ ಜವಾಹರ ನಗರ ತಾಂಡಾಕ್ಕೆ ಮೊದಲ ಸಲ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಿರುವುದರಿಂದ ತಾಂಡಾದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಂಡಾದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಅನೇಕ ವರ್ಷಗಳಿಂದ ನಮ್ಮ ಜವಾಹರ ನಗರ ತಾಂಡಾಕ್ಕೆ ಬಸ್ಸಿನ ಸಂಚಾರ ಇಲ್ಲದ ಕಾರಣ ಚಿಂಚೋಳಿ, ಕುಂಚಾವರಂ, ಶಾದೀಪುರದಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗಿ ಬರಲು ಬಸ್ಸು ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲು ದಾರಿಯಲ್ಲಿಯೇ ನಡೆದುಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ಇತ್ತು.
ತಾಂಡಾಕ್ಕೆ ಬಸ್ಸಿನ ಸಂಚಾರ ಪ್ರಾರಂಭಿಸುವಂತೆ ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಅವರಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರಿಂದ ಚಿಂಚೋಳಿ ಸಾರಿಗೆ ಘಟಕದಿಂದ ಮುಂಜಾನೆ ಮತ್ತು ಸಂಜೆ ಬಸ್ಸಿನ ಸಂಚಾರವನ್ನು ಶುಕ್ರವಾರ ಪ್ರಾರಂಭಿಸಲಾಗಿದೆ. ಇದರಿಂದ ನಮಗೆ ಬಹಳ ಸಂತಸವಾಗಿದೆ. ನಮ್ಮ ಸಮಸ್ಯೆ ಅರಿತು ಬಸ್ಸಿನ ಸಂಚಾರ ಪ್ರಾರಂಭಿಸಲು ಹೆಚ್ಚಿನ ಆಸಕ್ತಿ ವಹಿಸಿದ ಡಿಪೋ ಮ್ಯಾನೇಜರ್ ವಿಜಯಕುಮಾರ ಹೊಸಮನಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ತಾಂಡಾಕ್ಕೆ ಮೊದಲ ಸಲ ಸಾರಿಗೆ ಬಸ್ ಸಂಚಾರ ಪ್ರಾರಂಭ ಆಗಿರುವುದರಿಂದ ಬಸ್ ಚಾಲಕನಿಗೆ ಮತ್ತು ನಿರ್ವಾಹಕನಿಗೆ ತಾಂಡಾದ ಜನರು ಶಾಲು, ಹೂಮಾಲೆ ಹಾಕಿ ಅಭಿನಂದಿಸಿದರು. ನಂತರ ಬಸ್ಸಿಗೆ ತಳಿರು-ತೋರಣಗಳಿಂದ ಸಿಂಗರಿಸಿ ಸ್ವಾಗತಿಸಲಾಯಿ ತು. ವಿದ್ಯಾರ್ಥಿ ಮುಖಂಡ ವಿಜಯಕುಮಾರ ಜಾಧವ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.