ಕಣ್ಮನ ಸೆಳೆಯುತ್ತಿದೆ ಗೊಟ್ಟಂಗೊಟ್ಟ
ಎತ್ತಪೋತಾ' ಜಲಪಾತ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ ಪ್ರವಾಸಿಗರು
Team Udayavani, Sep 4, 2019, 11:35 AM IST
ಚಿಂಚೋಳಿ: ಕುಂಚಾವರಂ ವನ್ಯಜೀವಿ ಧಾಮ ಅರಣ್ಯಪ್ರದೇಶದಲ್ಲಿನ ಐತಿಹಾಸಿಕ ಗೊಟ್ಟಂಗೊಟ್ಟ ಬಕ್ಕಪ್ರಭು ದೇವಸ್ಥಾನ ಹಸಿರಿನ ಮಧ್ಯೆ ಕಂಗೊಳಿಸುತ್ತಿದೆ.
ಶಾಮರಾವ ಚಿಂಚೋಳಿ
ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಅರಣ್ಯ ಪ್ರದೇಶದಲ್ಲಿ ಇತ್ತೀಚೆಯ ದಿನಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ವಿವಿಧ ಹಕ್ಕಿಗಳ ಚಿಲಿಪಿಲಿ ಕಲರವ. ಜಲಪಾತಗಳ ಜುಳು ಜುಳು ನೀರಿನ ನೀನಾದ, ಹಚ್ಚ ಹಸಿರು ಬೆಟ್ಟಗಳ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ತಾಲೂಕಿನ ಸೇರಿಭಿಕನಳ್ಳಿ, ಚಿಕ್ಕನಿಂಗದಳ್ಳಿ, ಕುಸರಂಪಳ್ಳಿ, ಸಂಗಾಪುರ, ಧರ್ಮಸಾಗರ, ಭೋಗಾಲಿಂಗದಳ್ಳಿ, ಚಂದ್ರಂಪಳ್ಳಿ, ಸೋಮಲಿಂಗದಳ್ಳಿ, ಐನೋಳಿ ಗ್ರಾಮಗಳ ಹತ್ತಿರ ಬೆಳೆದಿರುವ ಕಾಡಿನಿಂದ ಮಲೆನಾಡಿನಂತ ವಾತಾವರಣ ನಿರ್ಮಾಣವಾಗಿದೆ. ಈ ಭಾಗ ಒಟ್ಟು 44 ಸಾವಿರ ಹೆಕ್ಟೇರ್ ಅರಣ್ಯಪ್ರದೇಶ ಒಳಗೊಂಡಿದೆ. ವನ್ಯಜೀವಿಧಾಮ ಅರಣ್ಯ ಪ್ರದೇಶದೊಳಗೆ ಇರುವ ಐತಿಹಾಸಿಕ ಗೊಟ್ಟಂಗೊಟ್ಟ ಅರಣ್ಯ ಪ್ರದೇಶದಲ್ಲಿ ಕಂಗೊಳಿಸುವ ಬಕ್ಕಪ್ರಭು ದೇವಸ್ಥಾನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ವನ್ಯಜೀವಿಧಾಮದಲ್ಲಿ ಇರುವ ಮಾಣಿಕಪುರ ಜಲಪಾತ, ಗೋಪುನಾಯಕ ತಾಂಡಾ ಬಳಿ ಹರಿಯುವ ‘ಎತ್ತಪೋತ’ ನೋಡಲು ತೆಲಂಗಾಣ, ಆಂಧ್ರಪ್ರದೇಶ ರಾಜ್ಯದ ಅನೇಕ ಜಿಲ್ಲೆಗಳಿಂದ ನೂರಾರು ಪ್ರವಾಸಿಗಳು ಆಗಮಿಸಿ ಧುಮ್ಮಿಕ್ಕಿ ಹರಿಯುವ ಜಲಪಾತ ನೋಡಿ ಆನಂದಿಸುತ್ತಿದ್ದಾರೆ.
ಚಂದ್ರಂಪಳ್ಳಿ ಪ್ರವಾಸಿ ತಾಣ ಎಲ್ಲರ ಅಚ್ಚುಮೆಚ್ಚಿನದ್ದಾಗಿದೆ. ಬೆಟ್ಟಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವನ್ನು ಮಳೆಗಾಲದಲ್ಲಿ ನೋಡಲು ಪ್ರವಾಸಿಗರು ಆಗಮಿಸುತ್ತಾರೆ. ಕುಂಚಾವರಂ ವನ್ಯಜೀವಿಧಾಮದಲ್ಲಿ ಲಾಲ ತಲಾಬ, ಹಾಥಿ ಪಗಡಿ, ಮೋಟಿಮೋಕ ತಾಂಡಾ ಬಳಿ ಇರುವ ಕೋತ್ವಾಲ್ ನಾಲಾದಲ್ಲಿ ಬೆಳೆದಿರುವ ಸಾಗುವಾನಿ ಮರಗಳು ನಯನ ಮನೋಹರವಾಗಿ ಕಾಣಿಸುತ್ತವೆ.
ವನ್ಯಜೀವಿಧಾಮ ಅರಣ್ಯ ಪ್ರದೇಶದಲ್ಲಿ ಪ್ರಸಿದ್ಧ ಭೋಗಲಿಂಗೇಶ್ವರ ದೇವಾಲಯ, ಬಕ್ಕಪ್ರಭು ದೇವಸ್ಥಾನಗಳಿಗೆ ಹುಣ್ಣಿಮೆ, ಅಮವ್ಯಾಸೆ ದಿವಸ ಭಕ್ತರು ಆಗಮಿಸಿ, ನೈಸರ್ಗಿಕ ಸೊಬಗನ್ನು ಸವಿಯುತ್ತಾರೆ. ಕುಂಚಾವರಂ ಅರಣ್ಯಪ್ರದೇಶವನ್ನು 2011ರಲ್ಲಿ ವನ್ಯಜೀವಿಧಾಮವೆಂದು ಘೋಷಿಸಿದ ಬಳಿಕ ಕಾಡಿನಲ್ಲಿ ನವಿಲು, ಜಿಂಕೆ, ಕಾಡು ಕುರಿ, ಮೊಲ, ಕಾಡು ಹಂದಿ, ಚಿಪ್ಪು ಹಂದಿ, ಚುಕ್ಕೆ ಜಿಂಕೆ ಸಂಖ್ಯೆ ಹೆಚ್ಚಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Maharstra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.