ಅಧಿಕಾರಕ್ಕೆ ಬಂದ ವರ್ಷದಲ್ಲೇ ಸಕ್ಕರೆ ಕಾರ್ಖಾನೆ
ದತ್ತಾತ್ರೇಯನಿಗೆ ಪೂಜೆ ಸಲ್ಲಿಸಿದ್ರೆ ಅಪ್ಪ, ಮಗ, ಅಣ್ಣನ ಮಗ ಗೆಲ್ತಾರೆ ಅಂತ ಸಿಎಂ ಬಂದಿದ್ರು: ಯತ್ನಾಳ
Team Udayavani, May 16, 2019, 10:14 AM IST
ಕಾಳಗಿ: ಬಹಿರಂಗ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾಳಗಿ: ಅಧಿಕಾರಕ್ಕೆ ಬಂದ ವರ್ಷದಲ್ಲಿ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಮಾಡ್ತೇವೆ. ಕೋಲಿ ಸಮಾಜವನ್ನು ಎಸ್‌ಟಿ ಸಮಾಜಕ್ಕೆ ಸೇರಿಸೋ ಜವಾಬ್ದಾರಿ ನನ್ನದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಪಟ್ಟಣದಲ್ಲಿ ಚಿಂಚೋಳಿ ವಿಧಾನಸಭೆ ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು,
ರಾಜ್ಯದಲ್ಲಿ ತುಘಲಕ್ ದರ್ಬಾರ್, ಹಗಲು ದರೋಡೆ ಮಾಡೋ ಸರ್ಕಾರ ಅಧಿಕಾರದಲ್ಲಿ ಬಂದಿದೆ. ಹಣದ ಕೊರತೆ ನಮ್ಮ ಕಾಲದಲ್ಲಿ ಕಾಣಲಿಲ್ಲ. ಇವರು ಹಣ ಇಲ್ಲ ಅಂತಾರೆ. ಬಜೆಟ್‌ನಲ್ಲಿಟ್ಟ ಹಣ ಏನಾಯ್ತು ಎಂದು ಪ್ರಶ್ನಿಸಿದರು. ಹಣಕಾಸಿನ ಕೊರತೆ ರಾಜ್ಯದಲ್ಲಿಲ್ಲ, ಪ್ರಾಮಾಣಿತ ಕೈಗಳ ಕೊರತೆಯಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿಯ 22 ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಬಾರಿ 25 ಸಾವಿರ ಮತಗಳ ಅಂತರದಿಂದ ಖರ್ಗೆ ಮನೆಗೆ ಹೋಗೋದು ಖಚಿತವಾಗಿದೆ. ದೇವೇಗೌಡ, ವೀರಪ್ಪ ಮೊಯ್ಲಿ ಸೋಲುವುದು ನಿಶ್ಚಿತ. ಮಂಡ್ಯದಲ್ಲಿ ಸುಮಲತಾ ಗೆಲ್ಲಲಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಕೊಟ್ಟ ಕೊಡುಗೆ ಮತದಾನ. ಪ್ರತಿಬೂತ್ ಮತದಾರರನ್ನು ಬದಲಾಯಿಸಿ ಡಾ| ಅವಿನಾಶ ಜಾಧವ ಅವರನ್ನು ಗೆಲ್ಲಿಸಿ. ನಿಮ್ಮ ಕ್ಷೇತ್ರಕ್ಕೆ ಬೇಕಾದ ಅಭಿವೃದ್ಧಿ ಮಾಡಿ ಚಿಂಚೋಳಿಯನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇವೆ ಎಂದು ಅಶ್ವಾಸನೆ ನೀಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಈ ಭಾಗದ ಜನರ ಕಷ್ಟ ಕೇಳಲಿಕ್ಕಾಗಲಿ, ಪ್ರಚಾರಕ್ಕಾಗಿ ಆಗಲಿ ಕಲಬುರಗಿಗೆ ಬಂದಿಲ್ಲ. ದತ್ತಾತ್ರೇಯ ದೇವಸ್ಥಾನದಲ್ಲಿ ಪೂಜೆ ಮಾಡಿದ್ರೆ ಮಗ, ಅಣ್ಣನ ಮಗ, ಅವರಪ್ಪ ಗೆಲ್ತಾರೆ ಅಂತಾ ಜ್ಯೋತಿಷ್ಯ ಹೇಳಿದ್ದಾರೆ ಅದಕ್ಕೆ ಬಂದಿದ್ದಾರೆ ಎಂದು ವ್ಯಂಗವಾಡಿದರು.
ಶಾಸಕ ಪಿ. ರಾಜೀವ ಮಾತನಾಡಿ, ಖರ್ಗೆ ಕುಟುಂಬ ಪೋಲಿಸರು ಹಾಗೂ ಚುನಾವಣೆ ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡ್ತಾರೆ. ಪೊಲೀಸರ ಗಾಡಿಯಲ್ಲೇ ಹಣ, ಹೆಂಡ ಸಾಗಿಸ್ತಿರಿ. ಅದರ ದಾಖಲೆ ಸಿಕ್ರೆ ಆರು ಗಂಟೆಯಲ್ಲಿ ಸೀಜ್ ಮಾಡಿಸ್ತೇನೆ ಎಂದರು.
ಜಾಧವ ಪಕ್ಷ ಬಿಟ್ಟ ಮೇಲೆ ಖರ್ಗೆ ಕೋಟೆ ಬಿರುಕು ಬಿಟ್ಟಿದೆ. ಮೇ 23ರಂದು ಆ ಕೋಟೆ ಒಡೆಯಲಿದೆ. ರೆಸಾರ್ಟ್ ರಾಜಕೀಯ ಮಾಡೋ ಸಿಎಂ ಅವರಿಂದ ಅಪವಿತ್ರ ಮೈತ್ರಿ ಯಾವಾಗ ಮುರಿಯುತ್ತದೆ ಎಂದು ಕಾಯುತ್ತಿದ್ದೆವೆ ಎಂದು ಹೇಳಿದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರ, ಸುನೀಲ ವಲ್ಯಾಪುರೆ, ಮಾಜಿ ಶಾಸಕ ಡಾ| ಉಮೇಶ ಜಾಧವ, ಅಭ್ಯರ್ಥಿ ಅವಿನಾಶ ಜಾಧವ, ಶಾಸಕ ಎ.ಎಸ್ ನಡಹಳ್ಳಿ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿದರು.
ಶಾಸಕ ವಿ. ಸೋಮಣ್ಣ, ಸಂಸದ ಭಗವಂತ ಖೂಬಾ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಸವರಾಜ ಮತ್ತಿಮಡು, ಸುಭಾಷ ಗುತ್ತೇದಾರ, ಸುವರ್ಣಾ ಮಲಾಜಿ, ದಿವ್ಯಾ ಹಾಗರಗಿ, ಶಶಿಲ್ ನಮೋಶಿ, ಅಮರನಾಥ ಪಾಟೀಲ, ವಾಲ್ಮೀಕಿ ನಾಯಕ, ಸಂತೋಷ ಪಾಟೀಲ ಮಂಗಲಗಿ, ರಮೇಶ ಕಿಟ್ಟದ, ಪ್ರಶಾಂತ ಕದಂ, ಶರಣು ಚಂದಾ, ಗಂಗಾಧರ ಮೈಲಾರ, ಶೇಖರ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.