ಬಸವಣ್ಣ ವ್ಯಕ್ತಿಯಲ್ಲ ದೊಡ್ಡ ಶಕ್ತಿ: ಮುರುಘಾ ಶ್ರೀ
Team Udayavani, May 9, 2019, 5:49 PM IST
ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರನ್ನು ಗೌರವಿಸಲಾಯಿತು.
ಚಿತ್ರದುರ್ಗ: ಬಸವ ಜಯಂತಿ ಆಚರಣೆ ಹಾಗೂ ಬಸವಣ್ಣನ ವಿಚಾರಗಳ ಕಡೆಗೆ ಒಟ್ಟಾಗಿ ಮುಖ ಮಾಡಿ ನಿಂತಿರುವುದು ಪ್ರಗತಿಪರ ಮತ್ತು ಬೆಳಕಿನೆಡೆಗೆ ಸಾಗುವ ಹೆಜ್ಜೆಯಾಗಿದೆ. ಇದರಿಂದ ನಿಮ್ಮ ಜೀವನ ಸಾರ್ಥಕತೆಯತ್ತ ಸಾಗುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶರಣರು ಆಶೀರ್ವಚನ ನೀಡಿದರು. ಬಸವಣ್ಣ ಕೇವಲ ವ್ಯಕ್ತಿಯಷ್ಟೇ ಅಲ್ಲ, ಅವರೊಂದು ದೊಡ್ಡ ಶಕ್ತಿ. ಸಮಸ್ಯೆಗಳ ನಿವಾರಕ ಹಾಗೂ ಸಮಾಜದ ವ್ಯಾಧಿಗಳ ಪರಿಹಾರಕ. ಸಮಾಜದಲ್ಲಿ ನಾವು ಬದುಕಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂದರು.
ಮುರುಘಾಮಠದ ಶಾಖಾ ಮಠ ದಾವಣಗೆರೆಯ ವಿರಕ್ತಮಠದಿಂದ 108 ವರ್ಷಗಳ ಹಿಂದೆ ಮೊಟ್ಟ ಮೊದಲು ಬಸವ ಜಯಂತಿ ಆಚರಣೆ ಪ್ರಾರಂಭಿಸಲಾಯಿತು. ಈಗ ಅದು ಅನೇಕ ದೇಶಗಳಲ್ಲಿ ಆಚರಿಸಲ್ಪಡುತ್ತಿದೆ ಎಂದು ತಿಳಿಸಿದರು. ಮದ್ದೇರು ಭಾಗದ ನೀರಾವರಿ ಹೋರಾಟಕ್ಕೆ ಮುರುಘಾ ಮಠ ಸದಾ ಸಿದ್ಧ. ರೈತರಿಗೆ ನೀರು ಲಭ್ಯವಾದರೆ ಬೆಳೆದು ಸಮೃದ್ಧ ಜೀವನ ನಡೆಸಲಿದ್ದಾರೆ ಎಂದರು.
ಭಂಡಾರಿ ಎಂ.ಎಂ. ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರ ತತ್ವಗಳು ಇಂದಿನ ಕಾಲಕ್ಕೆ ಅತ್ಯಗತ್ಯ. ಅವುಗಳನ್ನು ನಾವೆಲ್ಲರೂ ಪಾಲಿಸಬೇಕು.ಈ ಹಿನ್ನೆಲೆಯಲ್ಲಿ ಮದ್ದೇರು ಗ್ರಾಮದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮಲ್ಲಿ ಸಮರ್ಥ ಯುವಪಡೆ ಇದೆ. ಆ ಎಲ್ಲಾ ಯುವಕರಿಗೆ ಮತ್ತು ಗ್ರಾಮಸ್ಥರಿಗೆ ಶರಣರ ಮಾರ್ಗದರ್ಶನ ಸದಾ ಇರಲಿ. ಮದ್ದೇರು ಗ್ರಾಮಕ್ಕೂ ಚಿತ್ರದುರ್ಗದ ಮುರುಘಾ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇದು ಬಹಳ ಹಿಂದಿನ ಸಂಬಂಧ ಎಂದು ಹೇಳಿದರು.
ಹೊಳಲ್ಕೆರೆಯ ಮಾಜಿ ಶಾಸಕ ಎಂ.ಬಿ. ತಿಪ್ಪೇರುದ್ರಪ್ಪ, ಜಿಪಂ ಮಾಜಿ ಸದಸ್ಯ ಎಲ್.ಬಿ. ರಾಜಶೇಖರ್, ತಾಳ್ಯದ ಟಿ. ಹನುಮಂತಪ್ಪ, ಚಂದ್ರಶೇಖರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಇದ್ದರು.
ಮಾರುತಿ ಭಜನಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಡಾ| ಎಸ್.ಎಚ್. ಪಂಚಾಕ್ಷರಿ ಸ್ವಾಗತಿಸಿದರು. ಸ್ವಾಮಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು
World Rapid Chess: ಕಡೆಗೂ ಅರ್ಜುನ್ ಎರಿಗೈಸಿಗೆ ಅಮೆರಿಕ ವೀಸಾ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.