ಭಗವದ್ಗೀತೆ ನಿತ್ಯ ಪಠಣದಿಂದ ಮನಸ್ಸಿನ ಕಲ್ಮಶ ದೂರ
ಜೀವನದಲ್ಲಿ ಉತ್ತಮವಾದದ್ದನ್ನು ಸಾಧಿಸಬೇಕಾದರೆ ಮನಸ್ಸಿನ ಕಲ್ಮಶ ಖಾಲಿ ಮಾಡಿ: ಶಿವಲಿಂಗಾನಂದ ಶ್ರೀ
Team Udayavani, Jul 15, 2019, 4:30 PM IST
ಚಿತ್ರದುರ್ಗ: ಶ್ರೀ ಭಗವದ್ಗೀತಾ ಅಭಿಯಾನ ಕಾರ್ಯಕ್ರಮವನ್ನು ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಉದ್ಘಾಟಿಸಿದರು.
ಚಿತ್ರದುರ್ಗ: ಭಗವದ್ಗೀತೆ ಪಠಣ ಮಾಡುವುದರಿಂದ ಮನಸ್ಸಿನ ಕಲ್ಮಶ ದೂರವಾಗುತ್ತದೆ ಎಂದು ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ನಗರದ ಶ್ರೀಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿನ ಶಾರದ ಸಭಾಭವನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ ಜಿಲ್ಲಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಪವಿತ್ರವಾದ ನೀರು ಮೈ ಕೊಳೆ ಕಳೆಯುತ್ತದೆ. ಆದರೆ ಮನಸ್ಸಿನ ಕೊಳೆ ತೊಳೆಯಬೇಕಾದರೆ ಭಗವದ್ಗೀತೆ ಪಠಣ ಮಾಡಬೇಕು. ಭಗವದ್ಗೀತೆಯ 18 ಪಠಣಗಳನ್ನು ಪರ್ವ ಕಾಲದಲ್ಲಿ ಓದಿದರೆ ಮನಸ್ಸಿನ ದೋಷ ದೂರವಾಗಿ ಶ್ರೇಯಸ್ಸು ದೊರೆಯಲಿದೆ ಎಂದರು.
ಜೀವನದಲ್ಲಿ ಸುಖ ಬೇಕು ಎಂದರೆ ನಮ್ಮಲ್ಲಿನ ಕಾಮನೆಗಳನ್ನು ದೂರ ಮಾಡಬೇಕು. ಜೀವನದಲ್ಲಿ ಉತ್ತಮವಾದದ್ದನ್ನ ಸಾಧಿಸಬೇಕಾದರೆ ಮನಸ್ಸಿನ ಕಲ್ಮಶ ಖಾಲಿ ಮಾಡಿಕೊಳ್ಳಬೇಕು. ಆಗ ಉತ್ತಮವಾದದ್ದನ್ನು ಸುಲಭವಾಗಿ ಸಾಧಿಸಬಹುದಾಗಿದೆ. ಭೋಗಮಯ ಜೀವನದ ಎಂದು ಹಂಬಲ ಬಿಡಬೇಕು. ಎಲ್ಲಿ ಭೋಗ ಇರುತ್ತೂ ಅಲ್ಲಿ ರೋಗ ಇರುತ್ತೆ. ದುಃಖದಿಂದ ಪಾರಾಗಬೇಕು ಎಂದರೆ ಗೀತ ಚಿಂತನೆ ಮಾಡಿ ಎಂದು ಕರೆ ನೀಡಿದರು.
ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನವನ್ನು ಈ ವರ್ಷ ಚಿತ್ರದುರ್ಗದಲ್ಲಿ ಆಯೋಜಿಸುತ್ತಿರುವುದು ಸಂತಸದ ವಿಷಯ. ಪೋಷಕರು ತಮ್ಮ ಮಕ್ಕಳಿಗೆ ನಿತ್ಯ ಗೀತೆಯ ಒಂದೊಂದು ಶ್ಲೋಕ ಹೇಳಿಕೊಡಿ. ದೇವರು ನಂಬಿದವರಿಗೆ ಕೈಬಿಡುವುದಿಲ್ಲ, ಯಾರು ಭಗವಂತನನ್ನು ಮನಸಾರೆ ನಂಬಿರುತ್ತಾರೊ ಆ ದೇವರು ಯೋಗ್ಯರಿಗೆ ಒಳಿತು ಮಾಡಲಿದ್ದಾನೆ ಎಂದು ತಿಳಿಸಿದರು.
ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಮಾತನಾಡಿ, ಭಗವದ್ಗೀತಾ ಪಠಣ ಕಾರ್ಯಕ್ರಮ 2007ರಲ್ಲಿ ಹುಬ್ಬಳ್ಳಿಯಲ್ಲಿ ಉದ್ಘಾಟನೆಗೊಂಡು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ವರ್ಷದ ರಾಜ್ಯಮಟ್ಟದ ಭಗವದ್ಗೀತಾ ಸಮರ್ಪಣಾ ಸಮಾರಂಭ ಡಿ.7ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. ಅದಕ್ಕಾಗಿ ಆ.30ರ ಒಳಗೆ ಎಲ್ಲ ಶ್ಲೋಕ ಕೇಂದ್ರ ಉಪನ್ಯಾಸ ಕೇಂದ್ರಗಳನ್ನು ಗುರುತಿಸಬೇಕಾಗಿದೆ. ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಶ್ರೀ ಭಗವದ್ಗೀತಾ ಅಭಿಯಾನದ ಮುಖ್ಯ ರೂವಾರಿಗಳು ಎಂದು ಹೇಳಿದರು.
ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಲಕ್ಷ್ಮಿಕಾಂತರೆಡ್ಡಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ, ಪರಿಮಳ ಚಾರಿಟಬಲ್ ಟ್ರಸ್ಟ್ ಮಾರುತಿ ಮೋಹನ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.