ಬರ ಹೊಡೆತದಲ್ಲೂ ಸಹಕಾರದ ಛಾಪು

ಡಿಸಿಸಿ ಬ್ಯಾಂಕ್‌ಗೆ ರಾಜ್ಯಮಟ್ಟದ ಪ್ರಶಸ್ತಿ ಗೌರವವಾರ್ಷಿಕ ವಹಿವಾಟು 500 ಕೋಟಿಗೂ ಹೆಚ್ಚು

Team Udayavani, Nov 15, 2019, 3:13 PM IST

15-November-14

„ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಬಿಡದೆ ಕಾಡುವ ಬರದ ಅಸಹಕಾರ ನಡುವೆಯೂ ಜಿಲ್ಲೆಯಲ್ಲಿ ಸಹಕಾರ ಸಂಘಗಳು ತಮ್ಮದೇ ಆದ ಛಾಪು ಮೂಡಿಸುತ್ತಿವೆ. ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಸಹಕಾರ ಚಾಲ್ತಿಯಲ್ಲಿದೆ. ಒಂದು ಕಾಲಕ್ಕೆ ಮಿಂಚಿದ ಕೆಲ ವರ್ಗದ ಸಹಕಾರ ಸಂಘಗಳು ಕ್ರಮೇಣ ಕಾಲದ ಹೊಡೆತಕ್ಕೆ ಸಿಲುಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಕೆಲ ಸಹಕಾರ ಸಂಘಗಳು ಸಾಧನೆ ಹಾದಿಯಲ್ಲಿ ಸಾಗುತ್ತಿವೆ.

ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಡಿಸಿಸಿ ಬ್ಯಾಂಕ್‌ನ ಆಧುನೀಕರಣ, ದಿನೇ ದಿನೇ ಜನರನ್ನು ತಲುಪುತ್ತಿರುವುದು ಸಹಕಾರ ಕ್ಷೇತ್ರಕ್ಕೆ ಭವಿಷ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಂತೆ ಈ ಕ್ಷೇತ್ರದಲ್ಲಿ ಎಲ್ಲವೂ ಸರಿಯಿದೆ ಎಂದರ್ಥವಲ್ಲ. ನೂರಾರು ಸಹಕಾರ ಸಂಘಗಳು ನಷ್ಟದ ಹಾದಿಯಲ್ಲಿವೆ. ಕೆಲವು ಮುಚ್ಚುವ ಸ್ಥಿತಿಯಲ್ಲಿವೆ.

ಬದಲಾದ ಕಾಲಮಾನಕ್ಕೆ ಸರಿಯಾಗಿ ಹೊಂದಿಕೊಳ್ಳಲು ಈ ಕ್ಷಣಕ್ಕೂ ಸಹಕಾರ ಸಂಘಗಳು ಹೆಣಗಾಡುತ್ತಿವೆ. ಬೆರಳೆಣಿಕೆ ಸಹಕಾರ ಸಂಘಗಳು ಮಾತ್ರ ಗಣಿಕೀಕರಣಗೊಂಡಿವೆ. ಸರ್ಕಾರದಿಂದ ಸಂಘಗಳಿಗೆ ಸಂಬಂ ಧಿಸಿದ ಮೇಲ್‌ ಬಂದರೆ ಅದನ್ನು ನೋಡುವಷ್ಟು, ಪ್ರಿಂಟ್‌ ಮಾಡಿಕೊಳ್ಳುವ ವ್ಯವಸ್ಥೆಯೂ ಇಲ್ಲದಂತಹ ಸಂಘಗಳು ಇರುವುದು ನಷ್ಟದ ಹಾದಿಗೆ ಕಾರಣವಾಗಿರಬಹುದು.

ಸಾವಿರ ಸಮೀಪ ಇವೆ: ಜಿಲ್ಲೆಯಲ್ಲಿ ಇದುವರೆಗೆ 989 ಸಹಕಾರ ಸಂಘಗಳು ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 3.25ಲಕ್ಷ ಸದಸ್ಯರಿದ್ದಾರೆ. ಇದರಲ್ಲಿ 753 ಸಂಘಗಳು ಚಾಲ್ತಿಯಲ್ಲಿದ್ದು, 50 ಸ್ಥಗಿತಗೊಂಡಿವೆ. 186 ಸಂಘಗಳು ಸಮಾಪನೆ ಹಂತದಲ್ಲಿವೆ. ಸಹಕಾರ ಸಂಘಗಳ ನೋಂದಣಿ ಮಾತ್ರ ಆನ್‌ ಲೈನ್‌ನಲ್ಲಿದೆ. ಉಳಿದಂತೆ ಗಣಕೀಕರಣ ಇನ್ನಷ್ಟೇ ಆಗಬೇಕಷ್ಟೆ. ಚಾಲ್ತಿಯಲ್ಲಿರುವ 753 ಸಹಕಾರ ಸಂಘಗಳಲ್ಲಿ 325 ಲಾಭದಲ್ಲಿವೆ.

635 ಸಂಸ್ಥೆಗಳು ನಷ್ಟದಲ್ಲಿವೆ. 29 ಸಂಸ್ಥೆಗಳು ಲಾಭ, ನಷ್ಟ ಎರಡೂ ಅಲ್ಲದ ಸ್ಥಿತಿಯಲ್ಲಿವೆ. ಈ ಎಲ್ಲಾ ಸಹಕಾರ ಸಂಘಗಳ ಒಟ್ಟಾರೆ ವಾರ್ಷಿಕ ವಹಿವಾಟು 500 ಕೋಟಿಗೂ ಹೆಚ್ಚು. “ಸಿ’ ಗ್ರೇಡ್‌ ಸಂಘಗಳೇ ಹೆಚ್ಚು: ಸಂಘಗಳ ಆಡಿಟ್‌ ವೇಳೆ ಜಿಲ್ಲೆಯಾದ್ಯಂತ ಯಾವ್ಯಾವ ಸಹಕಾರ ಸಂಘಗಳು ಯಾವ ಸ್ಥಿತಿಯಲ್ಲಿವೆ ಎಂದು ಲೆಕ್ಕ ಪರಿಶೋಧನಾ ವರ್ಗೀಕರಣ ಮಾಡಲಾಗಿದೆ.

ಇದರಲ್ಲಿ “ಸಿ’ ಮತ್ತು “ಡಿ’ ಗ್ರೇಡ್‌ ಸಂಘಗಳೇ ಹೆಚ್ಚಾಗಿವೆ. “ಎ’ ಗ್ರೇಡ್‌ ನಲ್ಲಿ 6, “ಬಿ’ ಗ್ರೇಡ್‌ನ‌ಲ್ಲಿ 30 ಸಂಘಗಳಿದ್ದರೆ “ಸಿ’ ಗ್ರೇಡ್‌ನ‌ಲ್ಲಿ 687 ಸಂಘಗಳಿವೆ. “ಡಿ’ ಗ್ರೇಡ್‌ನ‌ಲ್ಲಿ 237 ಸಂಘಗಳಿರುವ ಬಗ್ಗೆ ಜಿಲ್ಲಾ ಸಹಕಾರ ಯೂನಿಯನ್‌ ಅಂಕಿ-ಅಂಶ ಹೇಳುತ್ತದೆ.

ರಾಜ್ಯಮಟ್ಟದಲ್ಲಿರೋದು ಒಂದೇ ಸಹಕಾರ ಸಂಘ: ಜಿಲ್ಲೆಯಿಂದ ರಾಜ್ಯಮಟ್ಟವನ್ನು ಪ್ರತಿನಿಧಿಸುವ ಸಂಘ ಕೆಒಎಫ್‌ ಮಾತ್ರ. ಉಳಿದಂತೆ ರಾಜ್ಯದ ಒಳಗೆ ಜಿಲ್ಲೆಯನ್ನು ಮೀರಿದ 8 ಸಂಘಗಳು, ಜಿಲ್ಲಾಮಟ್ಟದಲ್ಲಿ 20, ತಾಲೂಕು ಮೀರಿದ, ಜಿಲ್ಲೆಯ ಕೆಳಗಿರುವ 9, ತಾಲೂಕು ಮಟ್ಟದಲ್ಲಿ 111 ಹಾಗೂ ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ 840 ಸಹಕಾರ ಸಂಘಗಳಿವೆ.

ಟಾಪ್ ನ್ಯೂಸ್

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.