ಜೀವನದ ಅನುಭವ ಸಾರವೇ ಜಾನಪದ
ಬದುಕಿನ ನಿಜ ಮೌಲ್ಯ ಬುಡಕಟ್ಟು ಸಂಸ್ಕೃತಿಯಲ್ಲಿದೆ ಎಂಬುದರ ತಿಳಿವಳಿಕೆ ಅಗತ್ಯ: ನ್ಯಾ| ಬಿಲ್ಲಪ್ಪ
Team Udayavani, Dec 29, 2019, 4:45 PM IST
ಚಿತ್ರದುರ್ಗ: ಕಷ್ಟದ ಸಂದರ್ಭಗಳನ್ನು ಸುಖಮಯವಾಗಿಸುವ ಶಕ್ತಿ ಜಾನಪದಕ್ಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.
ನಗರದ ಶ್ರೀ ಕಬೀರಾನಂದಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಾನಪದ ಜ್ಞಾನ ಸಂಪದ ಕಾರ್ಯಕ್ರಮದಲ್ಲಿ ಡಾ| ಎಸ್.ಎಂ. ಮುತ್ತಯ್ಯ ಬರೆದ “ಬುಡಕಟ್ಟು ಜ್ಞಾನ ಪರಂಪರೆ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಾನಪದ ಜೀವನದ ಅನುಭವವೇ ಆಗಿದೆ. ನೈಜ ಮತ್ತು ಸಹಜ ಬದುಕಿಗೆ ಅರ್ಥ ಅಲ್ಲಿ ಸಿಗುತ್ತದೆ. ನಮ್ಮ ದೇಶದ ವೈವಿಧ್ಯತೆ ಅರಿಯಲು ಇಲ್ಲಿನ ಬುಡಕಟ್ಟು ಜೀವನವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ವೇದಕ್ಕೆ ಸರಿ ಸಮಾನವಾದುದು ಗಾದೆ. ಜಾನಪದರಲ್ಲಿ ಗಾದೆಗೆ ಕೊರತೆಯಿಲ್ಲ. ಬುಡಕಟ್ಟು ಜನತೆ ಅಪಾರ ಕಲೆ, ಸಾಹಿತ್ಯ ಹೊಂದಿದ್ದಾರೆ. ಇವರು ನಿಜವಾದ ಪ್ರಕೃತಿಯ ಆರಾಧಕರು. ನಿಸರ್ಗದ ಜೊತೆಗೆ ಜೀವಾನುನುಭವ ಹಾಗೂ ಸಾಮಾಜಿಕ ಪ್ರಜ್ಞೆ ಹೊಂದಿದವರಾಗಿದ್ದಾರೆ ಎಂದು ಶ್ಲಾಘಿಸಿದರು.
ನಿಜವಾದ ಬದುಕಿನ ಮೌಲ್ಯ ಬುಡಕಟ್ಟಿನಲ್ಲಿದೆ. ಬೆಳೆ ಬೆಳೆಯುವುದು, ಬೆಳೆದ ಬೆಳೆಗಳನ್ನು ಸುಸಜ್ಜಿತವಾಗಿ ಸಂಗ್ರಹಿಸಿಸುವುದು, ಪ್ರಾಣಿಗಳ ಸಾಕಾಣೆ, ಮನೆ ಮದ್ದು ಸಂಸ್ಕೃತಿ, ಗಿಡಮೂಲಿಕೆಗಳ ಸಂರಕ್ಷಣೆ ಯಾವ ಶೈಕ್ಷಣಿಕ ಜ್ಞಾನಕ್ಕೂ ಕಡಿಮೆ ಇಲ್ಲ. ಅಕ್ಷರದ ಅರಿವಿಲ್ಲದ ನಮ್ಮ ಸಿರಿಯಜ್ಜಿ ಸಾವಿರಾರು ಜಾನಪದ ಹಾಡುಗಳನ್ನು ಹಾಡಿದ್ದಾರೆ. ಈ ಹಾಡುಗಳನ್ನಿಟ್ಟುಕೊಂಡು ಅನೇಕರು ಸಂಶೋಧನೆ ಮಾಡಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಅದೇ ರೀತಿ ಸಾಲುಮರದ ತಿಮ್ಮಕ್ಕ ಅವರ ಯಶಸ್ಸು ಓದಿನಿಂದ ಬಂದಿದ್ದಲ್ಲ.ಜಾನಪದದ ಮೂಲಕ ಅವರ ಸ್ಥಾನ ಔನ್ನತ್ಯಕ್ಕೇರಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಇಂದಿನ ಯುವ ಪೀಳಿಗೆ ಆಧುನಿಕತೆಯ ಆಕರ್ಷಣೆಗೆ ಒಳಗಾಗಬಾರದು. ಪಾರಂಪರಿಕ ಜ್ಞಾನವನ್ನು ಅರಿತರೆ ಬದುಕಿನ ಸವಾಲುಗಳಿಗೆ ಉತ್ತರ ಸಿಗುತ್ತದೆ. ಜಾನಪದ ಕೇವಲ ಮನೋರಂಜನೆಯಲ್ಲ. ಅದರಲ್ಲಿ ಬದುಕಿನ ಮೌಲ್ಯಗಳಿವೆ. ನೀತಿ, ಧರ್ಮ, ಸಾಮರಸ್ಯ, ಸೌಹಾರ್ದತೆಯ ಗುಣಗಳಿಂದ ಆದಿಯಿಂದ ಇಂದಿನವರೆಗೆ ಉಳಿದಿವೆ. ಅದನ್ನು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಜಾನಪದ ಚಿಂತಕ ಡಾ| ಅರುಣ್ ಜೋಳದಕೂಡ್ಲಗಿ ಮಾತನಾಡಿ, ಜಾನಪದ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಜಾರಿಯಾಗಬೇಕು. ಜಾನಪದ ವೈದ್ಯಕೀಯವನ್ನು ಇಂದಿನ ಮೆಡಿಕಲ್ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜಾನಪದರ ವಾಸ್ತುಶಾಸ್ತ್ರವನ್ನು ತಿಳಿದುಕೊಳ್ಳಬೇಕು. ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ ದೇಶಿ ಜ್ಞಾನವನ್ನು ಪರ್ಯಾಯವಾಗಿ ಕಲಿಸಲು, ಪಠ್ಯ ಹಾಗೂ ಐಚ್ಛಿಕ ವಿಷಯವನ್ನಾಗಿ ಇಡಬೇಕು ಎಂದು ಅಭಿಪ್ರಾಯಪಟ್ಟರು.
ತತ್ವಪದಗಾರ ಯುಗಧರ್ಮ ರಾಮಣ್ಣ, ವೀರಗಾಸೆ ಕಲಾವಿದ ಬೊಮ್ಮಲಿಂಗಪ್ಪ, ಲಾವಣಿ ತತ್ವ ಪದಗಾರ ಗುರುಸಿದ್ಧನಾಯಕ, ಜಾನಪದ ಗಾಯಕ ಆಯತೋಳ್ ವಿರೂಪಾಕ್ಷಪ್ಪ, ರಂಗಭೂಮಿ ಸಂಗೀತಗಾರ ವಿದ್ವಾನ್ ತಿಪ್ಪೇಸ್ವಾಮಿ, ನೃತ್ಯ ತರಬೇತುಗಾರ್ತಿ ಶ್ವೇತ ಭಟ್ ಅವರಿಗೆ “ಲೋಕೋತ್ಸವ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ. ಶಿವಮೂರ್ತಿ, ಪ್ರಾಧ್ಯಾಪಕ ಡಾ| ಎಸ್.ಎಂ. ಮುತ್ತಯ್ಯ, ವಕೀಲ ವೈ.ತಿಪ್ಪೇಸ್ವಾಮಿ,
ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಮಲಿಂಗ ಶೆಟ್ಟಿ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್, ಮಾತೃಶ್ರೀ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಎಲ್. ಪ್ರಶಾಂತ್, ಗಾಯಕ ಡಿ.ಒ. ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.