ಕಾಂಗ್ರೆಸ್ ಭದ್ರಕೋಟೆ ಭೇದಿಸುತ್ತಾ ಬಿಜೆಪಿ?
•ಬಿಜೆಪಿ ಪರಾಜಿತ ಅಭ್ಯರ್ಥಿ ಕುಮಾರಸ್ವಾಮಿ ಜೆಡಿಎಸ್‌ಗೆ ಸೇರ್ಪಡೆಯಾದರೂ ಪಕ್ಷಕಿಲ್ಲ ಹಿನ್ನಡೆ
Team Udayavani, Apr 29, 2019, 3:43 PM IST
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ, ಆಂಧ್ರಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಳ್ಳಕೆರೆ ವಿಧಾನಸಭಾ ಎಸ್ಟಿ ಮೀಸಲು ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿದ್ದು, ಇದನ್ನು ಭೇದಿಸಲು ಬಿಜೆಪಿ ಲಗ್ಗೆ ಇಡಲು ಇನ್ನಿಲ್ಲದ ಪ್ರಯತ್ನ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿ ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿ ಅವರ ಪರಿವರ್ತನಾ ಸಮಾವೇಶದಲ್ಲಿ ವಿಧಾನಸಭಾ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಆದರೆ ಕಾಂಗ್ರೆಸ್ ಪಕ್ಷದ ಇಬ್ಬರು ಜಿಪಂ ಸದಸ್ಯರು ಬಹಿರಂಗವಾಗಿಯೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಪ್ರಚಾರ ಮಾಡಿ ಬಿಜೆಪಿಗೆ ಆಗಲಿದ್ದ ಹಿನ್ನಡೆ ತಪ್ಪಿಸಿದ್ದಾರೆ ಎಂದು ಬೂತ್ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ.
ಮೈತ್ರಿಗೆ ಬಂಪರ್: ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಪರಶುರಾಂಪುರ, ಚಳ್ಳಕೆರೆ ನಗರ, ಜಾಜೂರು ಸೇರಿದಂತೆ ಚಳ್ಳಕೆರೆ ಪೂರ್ವ ದಿಕ್ಕಿಗೆ ಬಂಪರ್ ಕ್ರಾಪ್ ಸಿಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಪ್ರತಿ ಬೂತ್‌ನಲ್ಲೂ ಪೈಪೋಟಿ: ಹಾಲಿ ಕಾಂಗ್ರೆಸ್ ಪಕ್ಷದ ಶಾಸಕ ಟಿ. ರಘುಮೂರ್ತಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರವಾಗಿ ಟೊಂಕಕಟ್ಟಿ ಹಗಲಿರುಳು ದುಡಿದಿದ್ದಾರೆ. ಇವರ ಜೊತೆಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಇನ್ನಿಲ್ಲದಂತೆ ಕ್ಷೇತ್ರದ ಪ್ರತಿ ಬೂತ್‌ನಲ್ಲೂ ತೀವ್ರ ಸ್ಪರ್ಧೆ ನೀಡಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಎನ್ನಲಾಗುತ್ತಿದೆ.
ಪಕ್ಷಾಂತರ ಪರ್ವ: ವಿಧಾನಸಭಾ ಚುನಾವಣೆಯ ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಚಳ್ಳಕೆರೆ ತಿಪ್ಪೇಸ್ವಾಮಿ ಪುತ್ರ ಕೆ.ಟಿ. ಕುಮಾರಸ್ವಾಮಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರೂ ಬಿಜೆಪಿ ಸಾಕಷ್ಟು ಬಲಿಷ್ಠವಾಗಿದೆ.
ಬಿಜೆಪಿ ಬಲಿಷ್ಠ: ಮಾಜಿ ಶಾಸಕ ಬಸವರಾಜ್ ಮಂಡಿಮs್ ಸೇರಿದಂತೆ ಸಂಘ ಪರಿವಾರದವರು, ಅಭ್ಯರ್ಥಿ ನಾರಾಯಣಸ್ವಾಮಿ ಅವರ ಸ್ನೇಹಿತರು, ಬಂಧುಗಳು ಮಾದಿಗ ಸಮುದಾಯದ ಹಟ್ಟಿಗಳಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಕೊನೆ ಕ್ಷಣದಲ್ಲಿ ಚಳ್ಳಕೆರೆಗೆ ಆಗಮಿಸಿ ಮತ ಯಾಚಿಸಿದ್ದರಿಂದ ಲಿಂಗಾಯತ ಮತಗಳು ಬಿಜೆಪಿ ಅಭ್ಯರ್ಥಿಗೆ ಹೆಚ್ಚಾಗಿ ಬೀಳಲಿವೆ.
ಮುನ್ನಡೆ ತಪ್ಪಿಸುವಲ್ಲಿ ಬಿಜೆಪಿ ಸೋತಿದೆ: ತುರುವನೂರು ಹೋಬಳಿಯಲ್ಲಿ ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಿಂಚಿನಂತೆ ಓಡಾಡಿ ಬಿಜೆಪಿ ಪರ ಕೆಲಸ ಮಾಡಿ ಅಭ್ಯರ್ಥಿಗೆ ಅನುಕೂಲ ಮಾಡಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಅಭ್ಯರ್ಥಿಗೂ ಸಾಕಷ್ಟು ಮತಗಳು ಬಂದಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ಅಷ್ಟು ಸುಲಭವಾಗಿ ಮತಗಳು ಜಾರಲು ಬಿಜೆಪಿ ಕಾರ್ಯಕರ್ತರು ಬಿಟ್ಟಿಲ್ಲ. ಹಾಗಾಗಿ ಸಮ ಬಲದ ಹೋರಾಟ, ಮೋದಿ ಅಲೆಯ ನಡೆವೆಯೂ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಆಗುವುದನ್ನು ತಪ್ಪಿಸಲು ಬಿಜೆಪಿ ಮುಖಂಡರು, ಕಾರ್ಯಕರ್ತರು ಸೋತಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಹಾಲಿ ಶಾಸಕರ ಬಿಗಿಹಿಡಿತ: ಕಾಂಗ್ರೆಸ್ ಪಕ್ಷದ ಶಾಸಕ ಟಿ. ರಘುಮೂರ್ತಿ ಸಾಕಷ್ಟು ಹಿಡಿತ ಇಟ್ಟುಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 72,874 ಮತ ಪಡೆದು ಆಯ್ಕೆಯಾಗಿದ್ದರು. ಜೆಡಿಎಸ್ ಅಭ್ಯರ್ಥಿ ತೀವ್ರ ಸ್ಪರ್ಧೆ ನೀಡಿ 59,335 ಮತ ಗಳಿಸಿ 13,539 ಮತಗಳಿಂದ ಸೋಲು ಕಂಡಿದ್ದರು. ಬಿಜೆಪಿ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ 33,471 ಮತ ಗಳಿಸಿದ್ದರು.
ನಿರೀಕ್ಷೆ ಉಲ್ಟಾವಾಗಲಿದೆಯೇ?: ಲೋಕಸಭಾ ಚುನಾವಣೆಯಲ್ಲಿ ಶೇ. 72.22ರಷ್ಟು ಮತದಾನವಾಗಿದ್ದು, ಸರಾಸರಿಗಿಂತ 1.58ರಷ್ಟು ಮತದಾನ ಹೆಚ್ಚಳಾಗಿದ್ದರೂ, ಕಾಂಗ್ರೆಸ್ ಚಳ್ಳಕೆರೆ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ. 80.29 ಮತದಾನವಾಗಿತ್ತು. ವಿಧಾನಸಭಾ ಮತದಾನಕ್ಕಿಂತ ಶೇ. 8.07ರಷ್ಟು ಕಡಿಮೆ ಮತದಾನವಾಗಿರುವುದು ಅಭ್ಯರ್ಥಿಗಳ ನಿರೀಕ್ಷೆಗಳನ್ನು ಉಲಾr ಮಾಡಲಿದೆ.
ಅತಿ ಹೆಚ್ಚು-ಕಡಿಮೆ ಮತದಾನ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ಇಮಾಮ್‌ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 125 ರಲ್ಲಿ ಶೇ.88.33 ರಷ್ಟು ಮತದಾನವಾಗಿದೆ. ಈ ಮತಗಟ್ಟೆಯಲ್ಲಿ ಪುರುಷ-242, ಮಹಿಳೆ- 212, ಒಟ್ಟು- 454 ಮತದಾರರ ಪೈಕಿ ಪುರುಷ- 209, ಮಹಿಳೆ- 192 ಒಟ್ಟು 401 ಮತದಾರರು ಸಂವಿಧಾನಾತ್ಮಕ ಹಕ್ಕು ಚಲಾಯಿಸಿದ್ದಾರೆ.
ಅತಿ ಕಡಿಮೆ ಚಳ್ಳಕೆರೆಯ ಬಾಪೂಜಿ ಪಿಯು ಕಾಲೇಜು ಮತಗಟ್ಟೆ ಸಂ. 95 ರಲ್ಲಿ- ಶೇ. 50.45 ರಷ್ಟು ಮತದಾನದಲ್ಲಿ ಪುರುಷ-600, ಮಹಿಳೆ- 613 ಒಟ್ಟು- 1213 ಮತದಾರರ ಪೈಕಿ ಪುರುಷ- 305, ಮಹಿಳೆ- 307 ಒಟ್ಟು 612 ಮತದಾರರು ಮತದಾನ ಮಾಡಿದ್ದಾರೆ.
ಮತದಾನದಲ್ಲಿ ಪುರುಷರ ಮೇಲುಗೈ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 259 ಮತಗಟ್ಟೆಗಳಲ್ಲಿ 2,11,388 ಮತದಾರರ ಪೈಕಿ 152668 ಜನ ಮತ ಚಲಾಯಿಸಿದ್ದು, ಶೇ. 72.22 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 77611 ಪುರುಷರು ಹಾಗೂ 75057 ಮಹಿಳೆಯರು ಮತದಾನ ಮಾಡಿದ್ದಾರೆ.
ಬಿಜೆಪಿಗಿದೆ ಭದ್ರ ನೆಲೆ
ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆಯಿದೆ. ಪಕ್ಷವನ್ನು ಯಾರೇ ತೊರೆದರೂ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರು ಸೇರಿದಂತೆ ಮತ್ತಿತರರು ಪಕ್ಷತೀತವಾಗಿ ಮತ ಹಾಕಿರುವುದರಿಂದ ಸಮಬಲದ ಮತಗಳನ್ನು ಪಡೆಯಲಿದ್ದೇವೆ.
•ಸಿರಿಯಪ್ಪ, ಅಧ್ಯಕ್ಷರು, ಬಿಜೆಪಿ.
ಮೈತ್ರಿಗೆ ಭಾರೀ ಮುನ್ನಡೆ
ಪ್ರತಿ ಬೂತ್ ನಲ್ಲಿ ಕನಿಷ್ಠ ನೂರು ಮತಗಳ ಸರಾಸರಿ ಲೀಡ್ ಲೆಕ್ಕಾ ಹಾಕಲಾಗಿದೆ. ಹಾಗಾಗಿ ಇಡೀ ಕ್ಷೇತ್ರದಲ್ಲಿ 25 ಸಾವಿರಕ್ಕಿಂತ ಹೆಚ್ಚಿನ ಲೀಡ್ ಮೈತ್ರಿ ಅಭ್ಯರ್ಥಿಗೆ ಸಿಗಲಿದೆ. ಜೆಡಿಎಸ್ ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡಿರುವುದು ಹೆಚ್ಚಿನ ಲಾಭವಾಗಿದೆ.
•ತಿಪ್ಪೇಸ್ವಾಮಿ,
ಅಧ್ಯಕ್ಷರು, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್
30 ಸಾವಿರ ಲೀಡ್
ಕ್ಷೇತ್ರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ನೂರಕ್ಕೆ ನೂರಷ್ಟು ಶ್ರಮ ಹಾಕಿ ಕೆಲಸ ಮಾಡಿದ್ದೇವೆ. ಶಾಸಕರು ಸಾಕಷ್ಟು ಸಹಕಾರ ನೀಡಿದ್ದಾರೆ. ಕನಿಷ್ಠ 30 ಸಾವಿರ ಲೀಡ್ ಬರುವ ಸಾಧ್ಯತೆ ಇದೆ. ಲೀಡ್ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.
•ಪಿ.ತಿಪ್ಪೇಸ್ವಾಮಿ,
ಅಧ್ಯಕ್ಷರು, ಜೆಡಿಎಸ್.
ಹರಿಯಬ್ಬೆ ಹೆಂಜಾರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.