ಜಾಗೃತಿ ಮೂಡಿಸಿದ್ರೂ ಹೆಚ್ಚಲಿಲ್ಲ ಮತ ಪ್ರಮಾಣ
Team Udayavani, Apr 19, 2019, 1:16 PM IST
ಚಿತ್ರದುರ್ಗ: ಮಧ್ಯ ಕರ್ನಾಟಕದ ಚಿತ್ರದುರ್ಗ ಮೀಸಲು ಕ್ಷೇತ್ರದಲ್ಲಿ ನೀರಸ ಮತದಾನವಾಗಿದೆ. ಈ ಬಾರಿ ಮತದಾನ ಹೆಚ್ಚಳ ಮಾಡಲೇಬೇಕೆಂಬ ಗುರಿ ಇಟ್ಟುಕೊಂಡಿದ್ದ ಚುನಾವಣಾ ಆಯೋಗ
ಹಾಗೂ ಸ್ವೀಪ್ ಸಮಿತಿ ಪ್ರಯತ್ನ ಅಷ್ಟೊಂದು ಫಲಕಾರಿಯಾಗಿಲ್ಲ.
ಜಿಲ್ಲೆಯ ಕೆಲವು ಭಾಗಗಳಲ್ಲಿ ಬೆಳಿಗ್ಗೆ 8 ಗಂಟೆಯಾದರೂ ಮತದಾನ ಆರಂಭವಾಗಿರಲಿಲ್ಲ. ಚಿತ್ರದುರ್ಗದ ಚೋಳಗಟ್ಟ ಮತದಾನ ಕೇಂದ್ರದ ಮತಗಟ್ಟೆ ಸಂಖ್ಯೆ 77ರಲ್ಲಿ ವಿವಿ ಪ್ಯಾಟ್‌ನಲ್ಲಿ ದೋಷ ಕಂಡು ಬಂದಿತ್ತು. ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ರಿಪೇರಿ ಮಾಡಿದ್ದರಿಂದ ಮತದಾನ ವಿಳಂಬವಾಗಿ ಆರಂಭವಾಯಿತು.
ಹಿರಿಯೂರು ನಗರದ ಮತಗಟ್ಟೆ ಸಂಖ್ಯೆ 157ರಲ್ಲಿ ಮತದಾನ ಆರಂಭವಾಗಿ 10 ನಿಮಿಷ ಕಳೆದ ಮೇಲೆ ಮತಯಂತ್ರ ಕೈಕೊಟ್ಟಿತ್ತು. ಬದಲಿ ಮತಯಂತ್ರ ವ್ಯವಸ್ಥೆ ಮಾಡಿದ ಮೇಲೆ ಮತದಾನ ಶುರುವಾಯಿತು.
ಮತದಾನ ಬಹಿಷ್ಕಾರ: ಕುಡಿಯುವ ನೀರು, ಮೂಲ ಸೌಕರ್ಯ
ಕಲ್ಪಿಸುವಂತೆ ಒತ್ತಾಯಿಸಿ ಚಿತ್ರದುರ್ಗ ತಾಲೂಕಿನ ಪಂಜಯ್ಯನಹಟ್ಟಿ ಗ್ರಾಮದ ಬೂತ್ ನಂ.29, ಓಬಣ್ಣಹಳ್ಳಿ ಹಾಗೂ
ಹೊಳಲ್ಕೆರೆ ತಾಲೂಕಿನ ನಗರಗಟ್ಟ ಗ್ರಾಮಗಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.
ನಗರದ ಹಲವು ಬಡಾವಣೆಗಳು ಸೇರಿದಂತೆ ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು.
ಇದರಿಂದಾಗಿ ಮಚತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಚುನಾವಣಾ ಆಯೋಗವೇ ಮತದಾರರಿಗೆ ಓಟರ್ ಸ್ಲಿಪ್ ನೀಡಿದ್ದರಿಂದ ಬಹುತೇಕ ಕಡೆ ಬೂತ್ ಏಜೆಂಟರು ಕೂಡ ಕಂಡು ಬರಲಿಲ್ಲ. ಮತದಾರರು ನೇರವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬರುತ್ತಿದ್ದರು. ಮತದಾರರನ್ನು ಮತಗಟ್ಟೆಗೆ ಕರೆತರಲು ವಾಹನಗಳ ವ್ಯವಸ್ಥೆ ಮಾಡದ ಕಾರಣ ವಯೋವೃದ್ಧರು ಮತಗಟ್ಟೆಗಳತ್ತ ಅಷ್ಟಾಗಿ ಸುಳಿಯಲಿಲ್ಲ.
ಮತದಾರರ ಪರದಾಟ: ಓಟರ್ ಸ್ಲಿಪ್ ಮತ್ತು ಮತದಾನ ಗುರುತಿನ ಚೀಟಿ ಕಳೆದುಕೊಂಡ ಮತದಾರರು ಚೀಟಿಗಾಗಿ ಪರದಾಡಿದರು. ಮತಗಟ್ಟೆ ಅಧಿಕಾರಿಗಳು ನಾಲ್ಕೈದು ದಿನಗಳ ಮುಂಚಿತವಾಗಿ ಗುರುತಿನ ಚೀಟಿ ವಿತರಿಸಿದ್ದರು. ಕೆಲವು ಮತ ದಾರರು ಚೀಟಿ ಕಳೆದುಕೊಂಡ ಕಾರಣ ಅಧಿಕಾರಿಗಳು ಬದಲಿ ಗುರುತಿನ ಚೀಟಿ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.