ಕೋಟೆನಾಡಲ್ಲಿ ಹೆಚ್ಚಾಯ್ತು ನೇತ್ರದಾನ ಜಾಗೃತಿ
chitradurga news
Team Udayavani, Nov 8, 2021, 2:47 PM IST
ಚಿತ್ರದುರ್ಗ: ಇಡೀ ಜಗತ್ತಿನಲ್ಲಿ ನೇತ್ರದಾನಕ್ಕೆಎಲ್ಲಿಲ್ಲದ ಮಹತ್ವ ಇದೆ. ನೇತ್ರದಾನವೇ ಅತ್ಯಂತಶ್ರೇಷ್ಠ ದಾನ ಎಂಬ ಮಾತಿದೆ. ಈ ನಿಟ್ಟಿನಲ್ಲಿದೊಡ್ಡವರು ತೆಗೆದುಕೊಳ್ಳುವ ಸಮಯೋಚಿತಹಾಗೂ ಅರ್ಥಪೂರ್ಣ ನಿರ್ಧಾರಗಳುಮತ್ತೂಬ್ಬರ ಬಾಳನ್ನು ಬೆಳಗಿಸುತ್ತವೆ. ಈ ಮಾತುಡಾ| ರಾಜ್‌ಕುಮಾರ್ ಹಾಗೂ ಪುನೀತ್‌ರಾಜ್‌ಕುಮಾರ್ ವಿಷಯದಲ್ಲಿ ಅಕ್ಷರಶಃಸತ್ಯವಾಗಿದೆ.
ಅಂದು ಡಾ| ರಾಜ್‌ಕುಮಾರ್‌ನೇತ್ರದಾನ ಮಾಡಿದ ಪರಿಣಾಮ ಅವರಅಭಿಮಾನಿಗಳು ಪ್ರೇರಣೆ ಪಡೆದು ನೇತ್ರದಾನಮಾಡುತ್ತಲೇ ಇದ್ದಾರೆ. ಈಗ ಡಾ| ರಾಜ್ ಪುತ್ರಪುನೀತ್ ರಾಜ್‌ಕುಮಾರ್ ಕೂಡ ಅಂಥದ್ದೇನಿರ್ಧಾರ ತೆಗೆದುಕೊಂಡು ತಮ್ಮ ಕಣ್ಣುಗಳನ್ನುದಾನ ಮಾಡಿದ್ದು ನೇತ್ರದಾನಕ್ಕೆ ಮಹತ್ವತಂದುಕೊಟ್ಟಿದೆ.ಅಪ್ಪು ದಾನ ಮಾಡಿದ ಕಣ್ಣುಗಳಿಂದ ನಾಲ್ವರು ಅಂಧರ ಬಾಳು ಬೆಳಕಾಗಿದೆ ಎಂಬ ಸುದ್ದಿಮಿಂಚಿನಂತೆ ಹರಿದಾಡುತ್ತಿದೆ.
ಇದಾದ ನಂತರಜಿಲ್ಲಾ ಕೇಂದ್ರಗಳಲ್ಲಿರುವ ಐ ಬ್ಯಾಂಕುಗಳಿಗೆಕಣ್ಣು ದಾನ ಮಾಡುವ ಒಪ್ಪಂದಕ್ಕೆ ಸಹಿಹಾಕಲು ನಿತ್ಯವೂ ಹತ್ತಾರು ಕರೆಗಳು ಬರುತ್ತಿವೆ.ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ನೇತ್ರದಾನಚಟುವಟಿಕೆಗಳು ಒಮ್ಮೆಲೆ ಗರಿಗೆದರಿವೆ.
ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್ ಸಾರ್ಥಕ ಸೇವೆ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿಗಾಯತ್ರಿ ಶಿವರಾಂ ಸ್ಥಾಪಿಸಿರುವ ಬಸವೇಶ್ವರಪುನರ್‌ಜ್ಯೋತಿ ಐ ಬ್ಯಾಂಕ್ ಸಾರ್ಥಕ ಸೇವೆನೀಡುತ್ತಿದೆ. ಜಿಲ್ಲೆಯಲ್ಲಿ ಕಣ್ಣು ಕಸಿಗೆ ಯಾವುದೇಆಸ್ಪತ್ರೆ ಇಲ್ಲ. ಆದರೆ ಐ ಬ್ಯಾಂಕ್ ಕಣ್ಣುಗಳನ್ನುಸಂಗ್ರಹಿಸಿ ಬೆಂಗಳೂರಿನ ಮಿಂಟೋ ಹಾಗೂನೇತ್ರಧಾಮ ಆಸ್ಪತ್ರೆಗಳಿಗೆ ರವಾನಿಸುವಕೆಲಸವನ್ನು ಕಳೆದ ಒಂದು ದಶಕಕ್ಕಿಂತ ಹೆಚ್ಚುಕಾಲದಿಂದ ಮಾಡಿಕೊಂಡು ಬರುತ್ತಿದೆ.
ಈವರೆಗೆ1500 ಕಣ್ಣುಗಳನ್ನು ದಾನವಾಗಿ ಪಡೆದುಅಗತ್ಯ ಇರುವವರಿಗೆ ಅಳವಡಿಸುವ ಕೆಲಸಮಾಡಲಾಗಿದೆ. ನೇತ್ರದಾನದ ವಿಚಾರದಲ್ಲಿಬಸವೇಶ್ವರ ಐ ಬ್ಯಾಂಕ್ ರಾಜ್ಯದಲ್ಲಿ ಮೂರನೇಸ್ಥಾನದಲ್ಲಿದೆ. ಸದ್ಯ ಬಸವೇಶ್ವರ ಐ ಬ್ಯಾಂಕಿನ ಬಳಿಕಣ್ಣು ಕಸಿಗಾಗಿ ಬಂದಿರುವ ಅರ್ಜಿಗಳು 300ರಷ್ಟಿವೆ ಎಂದು ಐ ಬ್ಯಾಂಕ್ ನಿರ್ದೇಶಕ ಎಸ್.ವೀರೇಶ್ ಮಾಹಿತಿ ನೀಡಿದ್ದಾರೆ.
ಕಣ್ಣಿನ ಅಗತ್ಯತೆ ಎಷ್ಟಿದೆ ಗೊತ್ತಾ?: ಜಗತ್ತಿನಾದ್ಯಂತ3.9 ಕೋಟಿ ಅಂಧರಿದ್ದಾರೆ. ಭಾರತದಲ್ಲಿ ಈಸಂಖ್ಯೆ 68 ಲಕ್ಷದಷ್ಟಿದೆ. 10.60 ಲಕ್ಷದಷ್ಟು ಜನರಿಗೆಕರಿಗುಡ್ಡೆ ಸಮಸ್ಯೆ ಬಾ ಧಿಸುತ್ತಿದೆ. ಈ ಸಂಖ್ಯೆಪ್ರತಿ ವರ್ಷ 30 ಸಾವಿರದಷ್ಟು ಹೆಚ್ಚಾಗುತ್ತಿದೆ.ಸದ್ಯ 15 ಲಕ್ಷಕ್ಕೂ ಹೆಚ್ಚು ಜನ ಕಣ್ಣುಗಳಿಗಾಗಿಕಾಯುತ್ತಿದ್ದಾರೆ. ಆದರೆ ದೇಶದಲ್ಲಿ ಪ್ರತಿ ವರ್ಷ35 ಸಾವಿರದಷ್ಟು ಮಾತ್ರ ಕಣ್ಣು ಕಸಿ ಶಸ್ತ್ರಚಿಕಿತ್ಸೆನಡೆಯುತ್ತಿದೆ.
ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.