ರಂಗಭೂಮಿ ಭಾರತೀಯ ಸಂಸ್ಕೃತಿಯ ಪ್ರತೀಕ; ಡಾ| ಪ್ರೇಮಪಲ್ಲವಿ
ಇಂದಿನ ಕಾಲದಲ್ಲಿ ಮೊಬೈಲ್, ಟಿವಿಯಿಂದ ನಾಶವಾಗುತ್ತಾರಾ ಎನ್ನುವ ಭಯ ಕಾಡುತ್ತಿದೆ.
Team Udayavani, Jan 12, 2022, 6:08 PM IST
ಚಿತ್ರದುರ್ಗ: ರಂಗಭೂಮಿ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸರ್ಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ| ಪ್ರೇಮಪಲ್ಲವಿ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ಯುವರಂಗ ಜಿಲ್ಲಾ ಕಾಲೇಜು ರಂಗೋತ್ಸವದಲ್ಲಿ ಅವರು ಮಾತನಾಡಿದರು.
ಮನುಷ್ಯ ಹುಟ್ಟಿದಾಗಲೇ ರಂಗಭೂಮಿ ಉದಯವಾಗಿದೆ. ಜನಸಾಮಾನ್ಯರ ಜೀವನ ಚಿತ್ರಣವನ್ನು ರಂಗಭೂಮಿ, ನಾಟಕ ಒಳಗೊಂಡಿದೆ. ಆದರೆ ಸಾಹಿತ್ಯಕ್ಕೆ ದೊರೆತಷ್ಟು ಆದ್ಯತೆ ರಂಗಭೂಮಿಗೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ನಾಟಕ ಸೃಜನಶೀಲ ಕಲೆಯಾಗಿ ಹೊರಹೊಮ್ಮಿದ್ದು, 20ನೇ ಶತಮಾನದಲ್ಲಿ. ರಂಗಭೂಮಿಯನ್ನು ಜಾನಪದ, ಅಭಿಜಾತ ಎಂದು ಎರಡು ಭಾಗವಾಗಿ ವಿಂಗಡಿಸಬಹುದಾಗಿದೆ. ಬೆಳ್ಳಿತೆರೆ ನಡುವೆ ರಂಗಭೂಮಿ ಅಸ್ತಿತ್ವ ಕಳೆದುಕೊಳ್ಳಬಾರದು. ಯುವ ಸಮೂಹ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ದೇಸಿ ಕಲೆ ರಂಗಭೂಮಿ ಉಳಿದು ನಾಟಕಕಾರರನ್ನು ಬೆಳೆಸಿ ಪ್ರೋತ್ಸಾಹಿಸಿದಂತಾಗುತ್ತದೆ. ಶಿಕ್ಷಣದ ಜೊತೆ ರಂಗ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರಿದಾಗ ಜೀವನ ಪರಿಪೂರ್ಣವಾಗಲಿದೆ ಎಂದರು.
ಹಿರಿಯೂರಿನ ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ| ವಿ. ಬಸವರಾಜ್ ಮಾತನಾಡಿ, ಎಲ್ಲಾ ಕಾಲಕ್ಕೂ ಮೌಲ್ಯಗಳನ್ನು ಎತ್ತಿಹಿಡಿಯುವ ರಂಗಭೂಮಿ ಜನಾಶಯ, ಸಮುದಾಯದ ಪರವಾಗಿದೆ.
ಮಾಧ್ಯಮಗಳ ಆರ್ಭಟ, ರಾಜಕೀಯ ಮೇಲಾಟಗಳನ್ನು ನೋಡಿ ಎಲ್ಲದರಿಂದಲೂ ದೂರವಿರಬೇಕು ಅನ್ನಿಸುತ್ತದೆ. ರಂಗಭೂಮಿ ಮೂಲಕ ಸಾಂಸ್ಕೃತಿಕ, ಸೃಜನಶೀಲತೆ, ಜೀವನ ಕೌಶಲ್ಯಕ್ಕೆ ತೆರೆದುಕೊಂಡರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಬದುಕಿನ ಸತ್ಯಗಳನ್ನು ರಂಗಭೂಮಿ ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಪಠ್ಯಕ್ರಮಗಳಿಗಷ್ಟೆ ಜೋತು ಬಿದ್ದಿರುವ ಇಂದಿನ ಕಾಲದಲ್ಲಿ ಮೊಬೈಲ್, ಟಿವಿಯಿಂದ ನಾಶವಾಗುತ್ತಾರಾ ಎನ್ನುವ ಭಯ ಕಾಡುತ್ತಿದೆ. ಪಠ್ಯದ ಆಚೆಗೂ ರಂಗಭೂಮಿ ಮಹತ್ವದ ಪಾತ್ರ ವಹಿಸುತ್ತಿದೆ. ತರಗತಿಗಳಿಂದ ಕಲಿಯಲಾರದ ಅನೇಕ ವಿಚಾರಗಳನ್ನು ರಂಗಭೂಮಿ ಕಲಿಸುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ರಂಗ ಸಮಾಜದ ಸದಸ್ಯ ಶಿವೇಶ್ವರ ಗೌಡ, ಎಸ್‌ಜೆಎಂ ಕಾಲೇಜು ಪ್ರಾಚಾರ್ಯ ಡಾ| ಕೆ.ಸಿ. ರಮೇಶ್ ಮಾತನಾಡಿದರು. ಡಾನ್‌ಬೋಸ್ಕೋ ಪದವಿ ಕಾಲೇಜು ಪ್ರಾಚಾರ್ಯ ಡಾ| ಜೋ, ಧನಕೋಟಿ ವೇದಿಕೆಯಲ್ಲಿದ್ದರು.
ರಂಗಕಲೆಗೆ ಆಧುನಿಕ ಸ್ಪರ್ಶ ದೊರೆಯಲಿ
ನಾಟಕಗಳ ಮೂಲಕ ಸಮಾಜವನ್ನು ತಿದ್ದಬಹುದು. ರಂಗಕಲೆ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಅಂದುಕೊಂಡಿರಬಹುದು, ಆದರೆ ಕಡಿಮೆಯಾಗಿಲ್ಲ. ರಂಗಕಲೆಗೆ ಆಧುನಿಕ ಸ್ಪರ್ಶ ನೀಡಬೇಕಾಗಿದೆ. ನಾಟಕ ಮತ್ತು ಯುವ ಪೀಳಿಗೆ ನಡುವೆ ಸಾಕಷ್ಟು ಅಂತರವಿದೆ. ಅದಕ್ಕೆ ಕಾರಣ ಹುಡುಕಿ ಯುವ ಸಮುದಾಯವನ್ನು ರಂಗಭೂಮಿಯತ್ತ ಸೆಳೆಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಧನಂಜಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.