ಪರ್ಯಾಯ ರಾಜಕಾರಣಕ್ಕೆ ಆಪ್‌ ಮುನ್ನುಡಿ; ಭಾಸ್ಕರ ರಾವ್‌

ಮೂರು ಪಕ್ಷಗಳ ಆಡಳಿತವನ್ನೂ ನೋಡಿದ್ದಾರೆ. ಎಲ್ಲರದ್ದೂ ಕೇವಲ ಬೊಗಳೆಯಾಗಿದೆ.

Team Udayavani, Aug 25, 2022, 5:40 PM IST

ಪರ್ಯಾಯ ರಾಜಕಾರಣಕ್ಕೆ ಆಪ್‌ ಮುನ್ನುಡಿ; ಭಾಸ್ಕರ ರಾವ್‌

ಚಿತ್ರದುರ್ಗ: ಎಎಪಿ ಪರ್ಯಾಯ ರಾಜಕಾರಣಕ್ಕೆ ಸ್ವತ್ಛ ಹೆಜ್ಜೆ ಇಟ್ಟಿದ್ದು, ಈಗ ದಕ್ಷಿಣಮುಖೀಯಾಗಿ ಕರ್ನಾಟಕದಲ್ಲಿ ಪ್ರಲವಾಗಿ ಬೇರೂರುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್‌ ಹೇಳಿದರು.

ನಗರದ ವಿ.ಪಿ. ಬಡಾವಣೆಯಲ್ಲಿ ಎಎಪಿ ಜಿಲ್ಲಾ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆಪ್‌ ಎಂದರೆ ಕೇವಲ ದೆಹಲಿ, ಪಂಜಾಬ್‌ ಮಾತ್ರವಲ್ಲ. ಚಂಡೀಘಡ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದರು.

ಕರ್ನಾಟಕ ರಾಜ್ಯಕ್ಕೆ ಸ್ವತ್ಛ ಹಿನ್ನೆಲೆಯ ನೇತೃತ್ವದ ಕೊರತೆ, ವಿಫಲಗೊಂಡ ನಾಯಕತ್ವದ ಕಾರಣಕ್ಕೆ ಭ್ರಷ್ಟಾಚಾರ, ಜಾತೀಯತೆಯಿಂದ ನರಳುತ್ತಿದ್ದು ಅಭಿವೃದ್ಧಿ ಶೂನ್ಯವಾಗಿದೆ. ಒಂದೇ ರಾಜ್ಯದಲ್ಲಿ ಎಸಿಬಿ-ಲೋಕಾಯುಕ್ತ ಇರುವುದು ಇಲ್ಲಿ ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದ ಜನತೆ ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ ಶೇ. 40ರಷ್ಟು ಲಂಚ ನಡೆಯುತ್ತಿದೆ.

ಮುಂದೆ ಶೇ. 50ರಿಂದ 70 ಆಗಲಿದೆ. ಗುತ್ತಿಗೆದಾರರ ಅಸೋಸಿಯೇಷನ್‌ ಖುದ್ದು ಪ್ರಧಾನಿಗೆ ಪತ್ರ ಬರೆದು ವಿವರಿಸಿದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಈಶ್ವರಪ್ಪ ಭ್ರಷ್ಟಾಚಾರದ ಕಾರಣಕ್ಕೆ ಮುಗ್ಧ ಗುತ್ತಿಗೆದಾರನ ಸಾವಿಗೆ ಕಾರಣರಾಗಿದ್ದಾರೆ. ಈ ಸರ್ಕಾರದಲ್ಲಿ ಬರೀ ದುರಹಂಕಾರ, ಸುಳ್ಳು ಕಾಣಿಸುತ್ತಿದೆ ಎಂದು ದೂರಿದರು.

ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಬಡವರು, ದಲಿತರನ್ನು ಕಂಡರೆ ಆಗುವುದಿಲ್ಲ. ಈ ಕಾರಣಕ್ಕೆ ಕೋವಿಡ್‌ನಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದರೂ, ದೇಶದ 115 ಮಂದಿ ಶ್ರೀಮಂತರ ಲಕ್ಷಾಂತರ ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗಿದೆ. ಅಂಗವಿಕಲರ ಯಂತ್ರ, ಮೊಸರು, ತುಪ್ಪ, ಮಂಡಕ್ಕಿ, ಸ್ಮಶಾನಕ್ಕೂ ಜಿಎಸ್‌ಟಿ ವಿ ಧಿಸಿದ್ದಾರೆ. ದೆಹಲಿಯಲ್ಲಿ ನಮ್ಮ ಸರ್ಕಾರ ಬಡವರಿಗೆ ನೀಡುತ್ತಿರುವ ಉಚಿತ ಕೊಡುಗೆಗಳನ್ನು ವಿರೋಧಿಸುತ್ತಿದ್ದಾರೆ ಎಂದರು.

ದೆಹಲಿಯಲ್ಲಿ ಉಚಿತವಾಗಿ ವಿದ್ಯುತ್‌, ನೀರು, ಮಹಿಳೆಯರಿಗೆ ಸಾರಿಗೆ ಉಚಿತ, ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ಪ್ರತಿ ಕುಟುಂಬಕ್ಕೂ 10ರಿಂದ 15 ಸಾವಿರ ರೂ. ಉಳಿತಾಯ ಮಾಡುತ್ತಿದ್ದೇವೆ. ಆದರೆ ನಮ್ಮಲ್ಲಿ ಉತ್ತರಕರ್ನಾಟಕ ಭಾಗದಲ್ಲಿ ಶಾಲೆಗಳೇ ಇಲ್ಲ. ಆದರೆ ಅಲ್ಲಿನ ಶಾಸಕರು ಬೆಂಗಳೂರಿನಲ್ಲಿ ಬಂಗಲೆ ಕಟ್ಟಿಸಿಕೊಂಡು ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೆಹಲಿ ಸರ್ಕಾರ ಶಿಕ್ಷಣಕ್ಕಾಗಿ ಶೇ. 24ರಷ್ಟು ಅನುದಾನ ಮೀಸಲಿಟ್ಟಿದೆ. ಸರ್ಕಾರಿ ಶಾಲೆ ಶಿಕ್ಷಕರಿಗೆ ವಿದೇಶಗಳಲ್ಲಿ ತರಬೇತಿ ಕೊಡಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸ್ವಿಮ್ಮಿಂಗ್‌ ಫೂಲ್‌ ಇದೆ. ವೈದ್ಯಕೀಯ ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಜನತೆ ಮೂರು ಪಕ್ಷಗಳ ಆಡಳಿತವನ್ನೂ ನೋಡಿದ್ದಾರೆ. ಎಲ್ಲರದ್ದೂ ಕೇವಲ ಬೊಗಳೆಯಾಗಿದೆ. ಅರವಿಂದ್‌ ಕೇಜ್ರಿವಾಲ್‌ ಸ್ವಚ್ಛ ಆಡಳಿತದ ಮೂಲಕ ಪ್ರಧಾನಿಗೆ ಪರ್ಯಾಯ ನಾಯಕರಾಗಿ ಬೆಳೆಯುತ್ತಿದ್ದಾರೆ ಎಂದ ಕೂಡಲೇ ಅವರ ಸರ್ಕಾರದ ವಿರುದ್ಧ ಸಿಬಿಐ, ಇಡಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.

ರಾಜ್ಯ ಸರ್ಕಾರ 4.57 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇದರಲ್ಲಿ ಸಿಂಹಪಾಲು ಶೇ. 40 ಲಂಚಕ್ಕೆ ಹೋಗಿದೆ. ಈಗ ನ್ಯಾಯಾಲಯ ಎಸಿಬಿ ರದ್ದು ಮಾಡಿರುವುದು ಮುರು ಪಕ್ಷಗಳಿಗೂ ಗುದ್ದು ನೀಡಿದಂತಾಗಿದೆ. ಎಲ್ಲ ನಾಯಕರಲ್ಲಿ ಡವಡವ ಶುರುವಾಗಿದೆ. ಇಲ್ಲಿ ಬರೀ ಹೊಂದಾಣಿಕೆ ರಾಜಕಾರಣ. ಇದನ್ನು ]ರಾಮುಲು ಬಹಿರಂಗವಾಗಿ ಹೇಳಿದ್ದಾರೆ. ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ ಎಂದಿದ್ದಾರೆ.

ಯತ್ನಾಳ್‌ ಮುಖ್ಯಮಂತ್ರಿಯಾಗಲು 2500 ಸಾವಿರ ಕೋಟಿ ರೂ. ಬೇಕು ಎಂದಿದ್ದಾರೆ. ಈ ನಾಯಕರ ಮಾತುಗಳಲ್ಲೇ ಆಡಳಿತ ವ್ಯವಸ್ಥೆ ಗೊತ್ತಾಗುತ್ತಿದೆ ಎಂದು ಕುಟುಕಿದರು. ಎಎಪಿ ಜಿಲ್ಲಾಧ್ಯಕ್ಷ ಜಗದೀಶ್‌, ಕೋಲಾರ ಮಾಜಿ ಸಂಸದ ಡಾ| ವೆಂಕಟೇಶ್‌, ತುಮಕೂರು ಜಿಲ್ಲಾಧ್ಯಕ್ಷ ಡಾ| ವಿಶ್ವನಾಥ್‌, ಆಪ್‌ ಮುಖಂಡರಾದ ಕಲಾವಿದ ಟೆನ್ನಿಸ್‌ ಕೃಷ್ಣ, ಶಿವಮೊಗ್ಗದ ನೇತ್ರಾವತಿ, ಶೇಷಣ್ಣಕುಮಾರ್‌, ಶಶಿಧರ ಮತ್ತಿತರರು ಇದ್ದರು.

ನಮ್ಮದು ಜಾತಿ ಧರ್ಮ ಮೀರಿದ ಸರ್ಕಾರ. ರಾಜ್ಯದಲ್ಲಿ 40 ಪರ್ಸೆಂಟ್‌ ಸರ್ಕಾರ ನಡೆಯುತ್ತಿದೆ. ನಾವು 0% ಸರ್ಕಾರ ಮಾಡುತ್ತೇವೆ. ಭ್ರಷ್ಟಾಚಾರರಹಿತ ಆಡಳಿತಕ್ಕೆ ಜನ ಸ್ಪಂದನೆ ನೀಡುತ್ತಿದ್ದಾರೆ. ಎಎಪಿ ಜಿಪಂನಿಂದ ಲೋಕಸಭೆವರೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಪೃಥ್ವಿ ರೆಡ್ಡಿ, ಎಎಪಿ ರಾಜ್ಯಾಧ್ಯಕ್ಷ

ಟಾಪ್ ನ್ಯೂಸ್

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

5(1

ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.