ರೈತರಲ್ಲಿ ಮಂದಹಾಸ ಮೂಡಿಸಿದ ಮಳೆ
ಜಿಲ್ಲಾದ್ಯಂತ ಗರಿಗೆದರಿದ ಕೃಷಿ ಚಟುವಟಿಕೆ
Team Udayavani, May 18, 2022, 5:03 PM IST
ಚಿತ್ರದುರ್ಗ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದ್ದು, ಹತ್ತಿ ಮತ್ತಿತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಳೆಯಿಂದ ಮನೆ, ಜಾನುವಾರು, ಬೆಳೆ ನಷ್ಟವೂ ಆಗಿದೆ.
ಮೊದಲ ಅಥವಾ ಎರಡನೇ ಮಳೆ ವೇಳೆಗೆ ಹತ್ತಿ ಬಿತ್ತನೆ ಆರಂಭವಾಗಲಿದೆ. ಈಗಾಗಲೇ ಬಿತ್ತನೆ ಮಾಡಿದ್ದ ರೈತರು ಮಳೆಗಾಗಿ ಎದುರು ನೋಡುತ್ತಿದ್ದರು. ಇನ್ನೂ ಬಿತ್ತನೆ ಮಾಡುವವರಿಗೂ ಮಳೆಯ ಅಗತ್ಯವಿತ್ತು. ಸೋಮವಾರ ಸುರಿದ ಹದ ಮಳೆ ಎಲ್ಲ ರೈತರಲ್ಲೂ ಮಂದಹಾಸ ಮೂಡಿಸಿದೆ. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ.
33 ಮನೆಗಳಿಗೆ ಭಾಗಶಃ ಹಾನಿ
ಮೇ 17ರಂದು ಬಿದ್ದ ಮಳೆಯವಿವರದನ್ವಯ ಜಿಲ್ಲೆಯಾದ್ಯಂತ ಒಟ್ಟು 33 ಮನೆಗಳು ಭಾಗಶಃ ಹಾನಿಯಾಗಿವೆ. ಚಿತ್ರದುರ್ಗ ತಾಲೂಕಿನಲ್ಲಿ 08 ಮನೆಗಳು, ಚಳ್ಳಕೆರೆ-4, ಮೊಳಕಾಲ್ಮುರು-2, ಹೊಸದುರ್ಗ-4, ಹಿರಿಯೂರು-11 ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 4 ಮನೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 33 ಮನೆಗಳು ಭಾಗಶಃ ಹಾನಿಯಾಗಿವೆ. ಜಾನುವಾರು ಹಾನಿಗೆ ಸಂಬಂ ಧಿಸಿದಂತೆ ಮೂರು ಹಸು ಹಾಗೂ 154 ಕುರಿಗಳು ಮೃತಪಟ್ಟಿವೆ. 16 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.
ಇಕ್ಕನೂರಿನಲ್ಲಿ ಅತೀ ಹೆಚ್ಚು ಮಳೆ
ಜಿಲ್ಲೆಯಲ್ಲಿ ಮೇ 17ರಂದು ಸುರಿದ ಮಳೆಯ ವಿವರದನ್ವಯ ಇಕ್ಕನೂರಿನಲ್ಲಿ 67.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹಿರಿಯೂರು ತಾಲೂಕಿನ ಹಿರಿಯೂರಿನಲ್ಲಿ 34.2 ಮಿ.ಮೀ, ಬಬ್ಬೂರು 24 ಮಿ.ಮೀ, ಈಶ್ವರಗೆರೆ 50.8 ಮಿ.ಮೀ, ಸುಗೂರು 32.4 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲೂಕಿನ ಚಳ್ಳಕೆರೆ ನಗರದಲ್ಲಿ 1.6 ಮಿ.ಮೀ, ತಳುಕು 7 ಮಿ.ಮೀ, ಡಿ.ಮರಿಕುಂಟೆ 11.4 ಮಿ.ಮೀ. ನಾಯಕನಹಟ್ಟಿ 9.4 ಮಿ.ಮೀ, ಪರಶುರಾಮಪುರ 9.2ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲೂಕಿನ ಚಿತ್ರದುರ್ಗ-1ರಲ್ಲಿ 24.8 ಮಿಮೀ, ಚಿತ್ರದುರ್ಗ-2ರಲ್ಲಿ 23.4 ಮಿ.ಮೀ, ಭರಮಸಾಗರದಲ್ಲಿ 26.4 ಮಿ.ಮೀ, ಸಿರಿಗೆರೆ 35.4 ಮಿ.ಮೀ, ತುರುವನೂರು 9.4 ಮಿ.ಮೀ, ಹಿರೇಗುಂಟನೂರು 7.4 ಮಿ.ಮೀ, ಐನಹಳ್ಳಿ 16.4ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲಕಿನ ಹೊಸದುರ್ಗ ನಗರದಲ್ಲಿ 52.4 ಮಿ.ಮೀ, ಬಾಗೂರು 8.3 ಮಿ.ಮೀ, ಮತ್ತೋಡು 15.4 ಮಿ.ಮೀ, ಶ್ರೀರಾಂಪುರ 50.2ಮಿ.ಮೀ, ಮಾಡದಕೆರೆ 40 ಮಳೆಯಾಗಿದೆ. ಹೊಳಲ್ಕೆರೆ ತಾಲೂಕಿನ ಹೊಳಲ್ಕೆರೆ ನಗರದಲ್ಲಿ 36.4 ಮಿ.ಮೀ, ಬಿ.ದುರ್ಗ 29.2 ಮಿ.ಮೀ, ಎಚ್.ಡಿ.ಪುರ 64 ಮಿ.ಮೀ, ತಾಳ್ಯ 6.4 ಮಿ.ಮೀ, ರಾಮಗಿರಿ 27.4 ಮಿ.ಮೀ, ಚಿಕ್ಕಜಾಜೂರು 14.6 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮೂರು ಪಟ್ಟಣದಲ್ಲಿ 1.3 ಮಿ.ಮೀ, ರಾಯಾಪುರದಲ್ಲಿ 5.6 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.