ಸಂಕಟವನ್ನೇ ಸವಾಲಾಗಿಸಿದರೆ ಸಾಧನೆ
ಅಂಬೇಡ್ಕರ್-ಡಾ| ರಾಜ್‌ಕುಮಾರ್ ಸಾಧನೆ ಜನಮನದಲ್ಲಿ ಚಿರಸ್ಥಾಯಿ: ಆನಂದಕುಮಾರ್
Team Udayavani, Apr 25, 2022, 2:18 PM IST
ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಚಿಕ್ಕಂದಿನಲ್ಲಿಯೇ ಸಾಕಷ್ಟು ನೋವು, ಹಿಂಸೆ, ಸಂಕಟ, ಅವಮಾನಗಳನ್ನು ಅನುಭವಿಸಿ, ಹಠ ಹಿಡಿದು ಸಾಧನೆ ಮಾಡಿದ್ದರಿಂದಲೇ ಎತ್ತರಕ್ಕೆ ಬೆಳೆದು ದೇಶಕ್ಕೆ ಸಂವಿಧಾನ ನೀಡಲು ಸಾಧ್ಯವಾಯಿತು ಎಂದು ಲೇಖಕ ಎಚ್. ಆನಂದಕುಮಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನವಯಾನ ಬುದ್ದ ಧಮ್ಮ ಪಥ ವತಿಯಿಂದ ಭಾನುವಾರ ಆಯೋಜಿಸಿದ್ದ ನವಯಾನದ ಓದು-ಸಂವಾದ ಹಂತ-2, ಡಾ| ಬಿ.ಆರ್. ಅಂಬೇಡ್ಕರ್ ಅವರ ಬುದ್ಧ ಮತ್ತು ಡಾ| ರಾಜ್‌ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಕಟಗಳನ್ನೇ ಸವಾಲಾಗಿಸಿಕೊಂಡ ಅನೇಕ ಸಾಧಕರುಗಳಿದ್ದಾರೆ. ಇವರ ನಡುವೆ ಅಂಬೇಡ್ಕರರು ಜಾತಿ ಶೋಷಣೆ ಅನುಭವಿಸಿದ ಹಿನ್ನೆಲೆಯಲ್ಲಿ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ನೀಡಿದ್ದಾರೆ ಎಂದರು.
ಕನ್ನಡ ಚಿತ್ರರಂಗದ ಮೇರುನಟ ಡಾ| ರಾಜ್ ಕುಮಾರ್ ಅವರ ಅಮೋಘ ಅಭಿನಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಗೋಕಾಕ್ ಚಳವಳಿ ಸಂದರ್ಭದಲ್ಲಿ ನಾಡಿನಾದ್ಯಂತ ಸಂಚರಿಸಿ ಕನ್ನಡಿಗರಲ್ಲಿ ಸಂಚಲನ ಮೂಡಿಸಿದ ಡಾ|ರಾಜ್ ಕುಮಾರ್, ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಅಭಿನಯಿಸಲಿಲ್ಲ. ಕನ್ನಡದ ಮೇಲೆ ಅವರಿಗೆ ಅಷ್ಟೊಂದು ಅಭಿಮಾನವಿತ್ತು ಎಂದು ಸ್ಮರಿಸಿದರು.
ನಿವೃತ್ತ ಪ್ರಾಚಾರ್ಯ ಪ್ರೊ| ಸಿ.ಕೆ. ಮಹೇಶ್ ಮಾತನಾಡಿ, ಮಾರ್ಕ್ಸ್ ಸಿದ್ಧಾಂತವನ್ನು ಆರಂಭದಲ್ಲಿ ಪುರೋಹಿತಶಾಹಿಗಳು ತಮ್ಮ ಬಳಿ ಇಟ್ಟುಕೊಂಡು ಕ್ರಾಂತಿಕಾರಕ ವಿಚಾರಗಳನ್ನು ನಾಶಗೊಳಿಸಿದ್ದರು. ಅವೈದ್ದಿಕ ಸಿದ್ಧಾಂತವಾಗಿ ಇರಬಹುದಾದ ಮಾರ್ಕ್ಸ್ನನ್ನು ವೈದ್ದಿಕ ರಕ್ಷಣೆಗೆ ಬಳಸಿಕೊಂಡಿದ್ದನ್ನು ಡಾ| ಬಿ.ಆರ್. ಅಂಬೇಡ್ಕರ್ ಕಟುವಾಗಿ ವಿರೋಧಿಸಿದ್ದರು ಎಂದು ತಿಳಿಸಿದರು.
ಬುದ್ಧ ಮತ್ತು ಮಾರ್ಕ್ಸ್ ನಡುವೆ ಡಾ| ಬಿ.ಆರ್. ಅಂಬೇಡ್ಕರ್ ಸಂವಾದ ಏರ್ಪಡಿಸಿ ಬುದ್ಧನ ಒಳಗಿರುವ ವಿಚಾರಗಳನ್ನು ತತ್ವಜ್ಞಾನಿ ಮಾರ್ಕ್ಸ್ ಗೆ ಅಡಕಗೊಳಿಸುತ್ತಿದ್ದರು. ಇದರಿಂದ ವರ್ಗ ಮತ್ತು ಜಾತಿ ನಿರ್ಮೂಲನೆಗೆ ಪರಿಪಕ್ವವಾದ ಸಿದ್ಧಂತ ಕ್ರಿಯಾ ಯೋಜನೆ ರೂಪಿತವಾಗುತ್ತಿತ್ತು. ಮಾರ್ಕ್ ನ ಕ್ರಾಂತಿಕಾರಕ ಸಿದ್ಧಾಂತಗಳು ಪ್ರತಿಗಾಮಿಗಳ ಕೈಗೆ ಸಿಕ್ಕಿ ಕ್ರಿಯಾಶೀಲತೆ ಕಳೆದುಕೊಂಡಿತು ಎಂದರು.
ಕನ್ನಡ ಚಿತ್ರರಂಗದ ಮೇರುನಟ ಡಾ| ರಾಜ್‌ಕುಮಾರ್ ಚಿತ್ರಗಳಲ್ಲಿ ಜೀವನಕ್ಕೆ ಬೇಕಾದ ಆದರ್ಶ, ಮೌಲ್ಯಗಳಿರುತ್ತಿದ್ದವು. ತ್ಯಾಗಗುಣ ಅವರದಾಗಿತ್ತು. ತಂದೆ-ತಾಯಿಗಳು ಮಕ್ಕಳನ್ನು ಹೇಗೆ ಜೋಪಾನ ಮಾಡಬೇಕು, ಅದೇ ರೀತಿ ಮುಪ್ಪಿನ ಕಾಲದಲ್ಲಿ ತಂದೆ-ತಾಯಿಗಳನ್ನು ಮಕ್ಕಳು ಹೇಗೆ ನೋಡಿಕೊಳ್ಳಬೇಕು ಎನ್ನುವ ಸಂದೇಶ ಅವರ ಚಿತ್ರಗಳಲ್ಲಿರುತ್ತಿತ್ತು. ನಿತ್ಯ ಜೀವನದಲ್ಲಿಯೂ ಅತ್ಯಂತ ಸರಳವಾಗಿದ್ದ ಡಾ| ರಾಜ್‌ರವರು ತಮ್ಮ ಜೀವಮಾನವನ್ನು ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಮುಡಿಪಾಗಿಟ್ಟಿದ್ದರು ಎಂದು ಬಣ್ಣಿಸಿದರು.
ಕೂನಿಕೆರೆ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ದುರುಗೇಶ್, ಚಿಕ್ಕಣ್ಣ, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ಹೊಳಿಯಪ್ಪ, ಸಂಜೀವ್‌ಕುಮಾರ್ ಪೋತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.