ಆಂಜನೇಯ ಸ್ವಾಮಿ ದೇವಸ್ಥಾನ ತೆರವು ಕಾರ್ಯ
ಸಾರ್ವಜನಿಕರ ವಿರೋಧದ ನಡುವೆಯೂ ತೆರವು
Team Udayavani, Mar 28, 2022, 4:24 PM IST
ಹೊಳಲ್ಕೆರೆ: ಸಾರ್ವಜನಿಕರ ವಿರೋಧದ ನಡುವೆಯೂ ಭಾನುವಾರ ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಬಸ್ ನಿಲ್ದಾಣದ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಆಂಜನೇಯಸ್ವಾಮಿ ವಿಗ್ರಹವನ್ನು ತೆರವುಗೊಳಿಸಲಾಯಿತು.
ಹೊಳಲ್ಕೆರೆ ವೃತ್ತ ನಿರೀಕ್ಷ ರವೀಶ್ ಹಾಗೂ ಮುಖ್ಯಾಧಿಕಾರಿ ಎ.ವಾಸಿಂ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲಿನಲ್ಲಿ ಪುರಸಭೆ ಸಿಬ್ಬಂದಿ ಸಹಯೋಗದಲ್ಲಿ ಕಟ್ಟಡ ಕಾರ್ಮಿಕರಿಂದ ಹೊಳಲ್ಕೆರೆ ಬಸ್ ನಿಲ್ದಾಣದಲ್ಲಿ ನೆಲೆ ನಿಂತಿದ್ದ ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ತೆರವುಗೊಳಿಸಲಾಗಿದೆ.
ವಿಶೇಷ ಪೂಜೆ
ಬಸ್ ನಿಲ್ದಾಣ ಆಂಜನೇಯ ಸ್ವಾಮಿ ತೆರವುಗೊಳಿಸುವ ಹಿನ್ನೆಲೆಯಲ್ಲಿ ವಿಗ್ರಹಕ್ಕೆ ವಿವಿಧ ಪೂಜೆ ಗಳನ್ನು ಪುರೋಹಿತರು ಕೈಗೊಂಡು ದೇವರನ್ನು ತೆರವುಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದರು. ವಿಗ್ರಹವನ್ನು ಹೊರತೆಗೆದ ಬಳಿಕ ದೇವಸ್ಥಾನವನ್ನು ಪುರಸಭೆ ಜೆಸಿಬಿಯಿಂದ ತೆರವುಗೊಳಿಸಲಾಯಿತು. ತೆಗೆದ ವಿಗ್ರಹವನ್ನು ಈಗಾಗಲೇ ಬಸ್ ನಿಲ್ದಾಣ ಮೂಲೆಯಲ್ಲಿ ನಿರ್ಮಾಣವಾದ ದೇವಸ್ಥಾನದ ಒಳಗೆ ಸ್ಥಾಪಿಸಲಾಗುತ್ತದೆ ಎನ್ನಲಾಗಿದೆ.
ಹಿನ್ನೆಲೆ
ಪಟ್ಟಣದ ಹೃದಯ ಭಾಗದಲ್ಲಿದ್ದ ಅರಣ್ಯ ಇಲಾಖೆ ಕಚೇರಿಯನ್ನು ಪಟ್ಟಣದ ಹೊರವಲಯದ ಹನುಮಂತರ ದೇವರ ಕಣಿವೆಗೆ ವರ್ಗಾಯಿಸಿ ಅಲ್ಲಿಗೆ ಸರಕಾರಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ರಸ್ತೆ ಸಾರಿಗೆ ಇಲಾಖೆಗೆ ವರ್ಗಾವಣೆ ಮಾಡುವ ಕಾಲದಲ್ಲಿ ಆಗಿನ ಪಟ್ಟಣ ಪಂಚಾಯ್ತಿ ಆಂಜನೇಯ ದೇವಸ್ಥಾನ ಜಾಗವನ್ನು ಹೊರತುಪಡಿಸಿ ವರ್ಗವಣೆ ಮಾಡಿದ್ದಲ್ಲದೆ ದೇವಸ್ಥಾನ ಜಾಗವನ್ನು ಇಲ್ಲಿನ ಸಮಿತಿಗೆ ಇ-ಖಾತೆ ಮಾಡಿ ಕೊಡಲಾಗಿತ್ತು. ಹಾಗಾಗಿ ಬಸ್ ನಿಲ್ದಾಣ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಇದ್ದ ದೇವಸ್ಥಾನ ಕಟ್ಟಡ ಸರಾಗವಾಗಿ ಬಸ್ ಸಂಚಾರಕ್ಕೆ ತೊಂದರೆ ಹಿನ್ನೆಲೆಯಲ್ಲಿ ದೇವಸ್ಥಾನ ತೆರವು ಲೆಕ್ಕಾಚಾರದಲ್ಲಿದ್ದ ಸಾರಿಗೆ ಇಲಾಖೆಯ ವಿರುದ್ಧ ದೇವಸ್ಥಾನ ಸಮಿತಿ ಸದಸ್ಯರು ಸ್ಥಳೀಯ ನ್ಯಾಯಾಲಯದಿಂದ ತೆರವು ನಿಲ್ಲಿಸಲು ತಡೆಯಾಜ್ಞೆ ತರಲಾಗಿತ್ತು.
ತಡೆಯಾಜ್ಞೆ ತೆರವು
ಹೈಕೋರ್ಟ್ ತೆರವುಗೊಳಿಸಲು ನೀಡಿದ ಆದೇಶದ ಹಿನ್ನೆಲೆಯಲ್ಲಿ ಭಾನುವಾರ ಭಕ್ತರ ಅಸಮಾಧಾನದ ನಡುವೆ ದೇವಸ್ಥಾನವನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.
ಬಸ್ ನಿಲ್ದಾಣ ಉದ್ಘಾಟನೆಗೆ ಸಹಕಾರಿ
ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನಿರ್ಮಾಣ ಮಾಡಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಸ್ ನಿಲ್ದಾಣದ ಉದ್ಘಾಟನೆ ಎನ್ನಲಾಗಿದೆ. ಒಂದಿಷ್ಟು ರಸ್ತೆ ಕಾಮಗಾರಿ ಬಾಕಿ ಇದ್ದು, ಕೈಗೊಳ್ಳಲು ದೇವಸ್ಥಾನ ಅಡ್ಡಿಯಾಗಿದ್ದು ಭಾನುವಾರ ತೆರವಿನಿಂದ ಕಾಮಗಾರಿ ಪೂರ್ಣಗೊಳಿಸಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಉದ್ಘಾಟನೆಗೆ ಸಹಕಾರಿಯಾಗಿದೆ.
ದೇವಸ್ಥಾನ ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಅಧ್ಯಕ್ಷ ಆರ್.ಎ. ಆಶೋಕ್, ಉಪಾಧ್ಯಕ್ಷ ಕೆ.ಸಿ. ರಮೇಶ್, ಬಿಜೆಪಿ ನಗರಾಧ್ಯಕ್ಷ ಪ್ರವೀಣ್ ಸೇರಿದಂತೆ ಹಲವಾರು ಪಟ್ಟಣದ ಮುಖಂಡರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.