ಆಟೋ ಸ್ನೇಹಿ ಆ್ಯಪ್‌ ಬಿಡುಗಡೆ


Team Udayavani, Oct 9, 2020, 7:32 PM IST

ಆಟೋ ಸ್ನೇಹಿ ಆ್ಯಪ್‌ ಬಿಡುಗಡೆ

ಚಿತ್ರದುರ್ಗ: ಆಟೋ ಸ್ನೇಹಿ ಡೇಟಾ ಬೇಸ್‌ನಿಂದ ಕ್ರಿಮಿನಲ್‌ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ  ಕಾರಿ ಜಿ. ರಾಧಿಕಾ ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್‌ ಇಲಾಖೆಯ ಚಳ್ಳಕೆರೆ ಉಪ ವಿಭಾಗದಿಂದ ಗುರುವಾರ ಪೊಲೀಸ್‌ ಪೆರೇಡ್‌ ಮೈದಾನದಲ್ಲಿ ಆಟೋ ಸ್ನೇಹಿ ಡಿಜಿಟಲ್‌ ಆ್ಯಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಪೊಲೀಸ್‌ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿಯಾಗಿ ಇದೇ ಮೊದಲ ಬಾರಿ ಚಳ್ಳಕೆರೆಯಲ್ಲಿಆಟೋ ಸ್ನೇಹಿ ಆ್ಯಪ್‌ ಲಾಂಚ್‌ ಮಾಡಿವೆ. ಮುಂದಿನದಿನಗಳಲ್ಲಿ ಜಿಲ್ಲೆಯ ಇತರೆ ತಾಲೂಕುಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದರು.

ಮೋಟಾರು ವಾಹನ ಕಾಯ್ದೆ 84 ಜಿ ಪ್ರಕಾರ ಎಲ್ಲಾ ಆಟೋಗಳಲ್ಲೂ ಮಾಹಿತಿ ಪ್ರಕಟಿಸಬೇಕು. ಇದರಿಂದ ಆಟೋ ಚಾಲಕ/ಮಾಲೀಕನ ಸಂಪೂರ್ಣ ಇತಿಹಾಸ ತಿಳಿಯುತ್ತದೆ. ಇದರಿಂದ ಆಟೋಗಳಲ್ಲಿಸಂಚರಿಸುವ ಪ್ರಯಾಣಿಕರು ಹಾಗೂ ಚಾಲಕರಿಗೂ ಸುರಕ್ಷತೆ ಇರುತ್ತದೆ.ಯಾವುದೇ ಆಟೋ ಚಾಲಕರು ಕ್ರಿಮಿನಲ್‌ ಅಪರಾಧವೆಸಗಿದರೆ ಸುಲಭವಾಗಿ ಪತ್ತೆ ಹಚ್ಚಬಹುದು. ಆಟೋ ಸ್ನೇಹಿ ಆ್ಯಪ್‌ನಿಂದ ಚಾಲಕರು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಪೊಲೀಸರು ಎಲ್ಲೆಂದರಲ್ಲಿ ಆಟೋಗಳನ್ನು ತಡೆದು ಲೈಸೆನ್ಸ್‌, ಪರ್ಮಿಟ್‌, ಇನ್ಸೂರೆನ್ಸ್‌ ಮತ್ತಿತರೆ ಮಾಹಿತಿ ಕೇಳುವುದಿಲ್ಲ. ಎಲ್ಲಾ ಮಾಹಿತಿಯೂ ಆಟೋ ಸ್ನೇಹಿಯಲ್ಲಿ ಲಭ್ಯವಿರುತ್ತದೆ. ಪರವಾನಗಿ ನವೀಕರಿಸಿಕೊಳ್ಳದಿದ್ದರೆ. ಜೀವ ವಿಮೆ ಪಾವತಿಸದಿದ್ದರೆ ಅಂತಹ ಚಾಲಕರು, ಮಾಲೀಕರಿಗೆ ಎಚ್ಚರಿಸುತ್ತೇವೆ. ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಂದ ಆಟೋಗಳಿಗೆ ಸೀರಿಯಲ್‌ ಸಂಖ್ಯೆ ನೀಡಿ ಆಟೋದ ಎರಡು ಬದಿಗಳಲ್ಲಿ ರಿಫ್ಲೆಕ್ಟರ್‌ಸ್ಟಿಕ್ಕರ್‌ ಅಂಟಿಸಲಾಗುವುದು. ಇದರಿಂದ ಆಟೋ ಚಾಲಕರು ತಪ್ಪಿನಿಂದ ನುಣುಚಿಕೊಳ್ಳಲು ಅವಕಾಶ ಇಲ್ಲದಂತಾಗುತ್ತದೆ. ವಿಶೇಷವಾಗಿ ಮಹಿಳೆಯರು ನಿರ್ಭಯವಾಗಿ ಆಟೋದಲ್ಲಿ ಸಂಚರಿಸಬಹುದು ಎಂದು ವಿವರಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌. ಹೆಗಡೆ ಮಾತನಾಡಿ, ಚಿತ್ರದುರ್ಗ ಸ್ಮಾರ್ಟ್‌ ಜಿಲ್ಲೆ ಆಗದಿರಬಹುದು. ಆದರೆ ಆಟೋ ಸ್ನೇಹಿಮಾತ್ರ ಸ್ಮಾರ್ಟ್‌ ಕಾರ್ಯಕ್ರಮ. ಕೆಲವರು ಆಟೋ ಓಡಿಸುತ್ತಾರೆ. ಆದರೆ ಅವರಲ್ಲಿ ಲೈಸೆನ್ಸ್‌ ಇರುವುದಿಲ್ಲ. ಪರ್ಮಿಟ್‌ ಮುಗಿದರೂ ನವೀಕರಣ ಮಾಡಿಸುವುದಿಲ್ಲ. ಆಟೋ ಸ್ನೇಹಿ ಎಲ್ಲಾ ಸಮಸ್ಯೆಗಳಿಗೂ ಉತ್ತರ ನೀಡುತ್ತದೆ. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸಬೇಡಿ. ಚಳ್ಳಕೆರೆಯಲ್ಲಿ ಪ್ರತಿ ತಿಂಗಳು ಕ್ಯಾಂಪ್‌ ಮಾಡುತ್ತೇವೆ. ಆದರೆ ಎಲ್ಲ ಸಮಸ್ಯೆಗೂ ಕ್ಯಾಂಪ್‌ನಲ್ಲಿ ಪರಿಹಾರ ಸಿಗುವುದಿಲ್ಲ. ಪರವಾನಗಿ, ಪರ್ಮಿಟ್‌, ನವೀಕರಣಕ್ಕೆ ನೇರವಾಗಿ ನನ್ನ ಕಚೇರಿಗೆ ಬನ್ನಿ, ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ಆಟೋ ಚಾಲಕರು ಮತ್ತು ಮಾಲೀಕರು ಪೊಲೀಸ್‌ ಇಲಾಖೆ ಹಾಗೂ ನಮ್ಮ ಇಲಾಖೆ ಜೊತೆ ಕೈಜೋಡಿಸಿ ಸಂಪೂರ್ಣ ದಾಖಲೆ ಇಟ್ಟುಕೊಳ್ಳಿ. ಇದರಿಂದ ಅಪರಾಧಗಳನ್ನು ತಡೆಯಬಹುದು. ಆಟೋ ಚಾಲಕರುಗಳಿಗೆ ಸಾಕಷ್ಟು ಸಮಸ್ಯೆಗಳಿವೆಎನ್ನುವುದು ನಮ್ಮ ಗಮನಕ್ಕೂ ಬಂದಿದೆ. ಆಟೋಸ್ನೇಹಿ ಮೂಲಕ ಹಂತ ಹಂತವಾಗಿ ಎಲ್ಲವನ್ನುಬಗೆಹರಿಸೋಣ ಎಂದು ಭರವಸೆ ನೀಡಿದರು. ಚಳ್ಳಕೆರೆ ತಾಲೂಕು ಜೈ ಕರ್ನಾಟಕ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಬಿ. ನಾಗರಾಜ್‌ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರು. ಚಳ್ಳಕೆರೆ ಡಿವೈಎಸ್ಪಿ ಶ್ರೀಧರ್‌, ಚಿತ್ರದುರ್ಗ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಪೊಲೀಸ್‌ ಹಾಗೂಪ್ರಾದೇಶಿಕ ಸಾರಿಗೆ ಇಲಾಖೆಯ ಇನ್ಸ್‌ಪೆಕ್ಟರ್‌ಗಳು ಹಾಜರಿದ್ದರು

ಆಟೋ ಸ್ನೇಹಿ ಯೋಜನೆ ಜಿಲ್ಲೆಯಾದ್ಯಂತ ಆರಂಭಗೊಂಡಾಗ ಅವರವರ ಜಾಗಗಳಲ್ಲಿ ಮಾತ್ರ ಚಾಲಕರು ಆಟೋಗಳನ್ನು ಚಲಾಯಿಸಬಹುದು. ಸಾರ್ವಜನಿಕರು ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆಟೋ ಸ್ನೇಹಿ ನೋಂದಣಿ ಮಾಡಿಸಿಕೊಳ್ಳುವುದರಿಂದ ಎಲ್ಲಾ ರೀತಿಯ ಉಪಯೋಗವಿದೆ. ಇದಕ್ಕಾಗಿ ಸದ್ಯದಲ್ಲೇ ವಿಶೇಷ ಅಭಿಯಾನ ಆರಂಭಿಸಲಾಗುವುದು.  -ಜಿ. ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲೂಕು ಸೇರಿದಂತೆ ಆರ್‌ಟಿಒ, ಎಆರ್‌ ಟಿಒ ಕಚೇರಿ ತೆರೆಯುವ ಸಂಬಂಧ ಸರ್ಕಾರಕೇಳಿರುವ ಮಾಹಿತಿ ನೀಡಿದ್ದೇವೆ. ಒಂದುವರ್ಷದೊಳಗೆ ತೆರೆಯಬಹುದು. ಆಗ ಕೆಲಸದಒತ್ತಡ ಕಡಿಮೆಯಾಗಲಿದೆ. –ಜಿ.ಎಸ್‌. ಹೆಗಡೆ,  ಪ್ರಾದೇಶಿಕ ಸಾರಿಗೆ ಅಧಿಕಾರಿ

ಟಾಪ್ ನ್ಯೂಸ್

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.