ಬರಗೂರು ಪ್ರಶಸ್ತಿ ಉಳಿದ ಪ್ರಶಸ್ತಿಗಿಂತ ವಿಶೇಷ: ವೇಣು
Team Udayavani, Jan 21, 2019, 10:25 AM IST
ಚಿತ್ರದುರ್ಗ: ಬರಗೂರು ಪ್ರಶಸ್ತಿ ಉಳಿದ ಪ್ರಶಸ್ತಿಗಳಿಗಿಂತ ವಿಶೇಷವಾಗಿದೆ. ನೈತಕತೆ, ಬಂಡಾಯ, ಪ್ರಗತಿಶೀಲರಿಗೆ, ನುಡಿದಂತೆ ನಡೆಯುವವರಿಗೆ ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಸಾಹಿತಿ ಬಿ.ಎಲ್.ವೇಣು ಹೇಳಿದರು.
ಇಲ್ಲಿನ ಕ್ರೀಡಾಭವನದಲ್ಲಿ ಗೆಳೆಯರ ಬಳಗ ಮತ್ತು ನಾಡೋಜ ಡಾ| ಬರಗೂರು ಪ್ರತಿಷ್ಠಾನ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರೊ| ಬರಗೂರು ಮತ್ತು ಶ್ರೀಮತಿ ರಾಜಲಕ್ಷ್ಮೀ ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ ಎಂದರು.
ಇಂದು ಯಾರಲ್ಲೂ ನೈತಿಕತೆ ಇಲ್ಲ. ಆಡಳಿತ ಮತ್ತು ಪ್ರತಿ ಪಕ್ಷದ ಎಲ್ಲ ಸದಸ್ಯರು ರೆಸಾರ್ಟ್ ರಾಜಕಾರಣ ಮಾಡುತ್ತಾರೆ. ಬಡವರ, ಬರ ಪೀಡಿತ ಪ್ರದೇಶಗಳ ಗೋಳು ಕೇಳುವುದಿಲ್ಲ. ಇವರಿಗೆ ಅಧಿಕಾರದ ವ್ಯಾದಿ ರೋಗ ಕಾಡುತ್ತಿದೆ. ಅಧಿಕಾರದ ವ್ಯಾದಿ ರೋಗ ಗುಣಪಡಿಸುವುದು ಕಷ್ಟ. ರಾಜಕಾರಣದಲ್ಲಿ ಪ್ರಾಮಾಣಿಕತೆ ಇಲ್ಲವಾಗಿದೆ. ಧಾರ್ಮಿಕ ಗುರುಪೀಠಗಳು ರಾಜಕಾರಣಿಗಳ ಸ್ವಿಸ್ ಬ್ಯಾಂಕ್‌ಗಳಾಗಿವೆ. ಯಾವುದೇ ಮಠಗಳು ಜಾತ್ಯತೀತವಲ್ಲ. ಸ್ವಾಮೀಜಿಗಳಿಗೆ ಜಾತಿ ಪೀಡೆ ಕಾಡುತ್ತಿದೆ. ಇವರೆಲ್ಲ ಜಾತಿ ಗುರುಗಳಾಗಿದ್ದಾರೆ. ನೆಪಕ್ಕೆ ಪ್ರಗತಿಪರ ಗುರುಗಳು, ಸ್ವಾಮಿಗಳು ಇಂತಹ ಚಿತ್ರಗಳಲ್ಲೇ ನಟಿಸಬೇಕು ಎಂದು ನಟರಿಗೆ ಒತ್ತಡ ಹಾಕುತ್ತಾರೆ. ಸಿನಿಮಾ ನಟರು ಯಾವ ಸಿನಿಮಾದಲ್ಲಿ ನಟಿಸಿದರೆ ಸ್ವಾಮೀಜಿಗಳಿಗೆ ಯಾಕೆ ನೋವು, ಇನ್ನೂ ಟಿವಿ ಆಂಕರ್‌ಗಳು ಪಕ್ಷಗಳ ಪರವಾಗಿ ವಕಲತ್ತು ವಹಿಸುತ್ತಾರೆ. ಅವರೇ ತೀರ್ಪು ನೀಡುತ್ತಾರೆ ಕೋಮುವಾದಿಗಳಿಗೆ ಜೈ ಜೈ ಎನ್ನುತ್ತಾರೆ. ಇದಕ್ಕೆ ಪತ್ರಿಕೆಗಳು, ವಕೀಲರು, ನ್ಯಾಯವಾದಿಗಳು ಹೊರತಲ್ಲ ಎಂದರು.
ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ಬರಗೂರು ರಾಮಚಂದ್ರಪ್ಪನವರು ಎಷ್ಟು ದೊಡ್ಡ ವ್ಯಕ್ತಿಗಳೆಂದರೆ 1991ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಬಂಗಾರಪ್ಪನವರು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಮುಂದೆ ಬಂದಿದ್ದರು. ಆದರೆ ಅದನ್ನು ನಯವಾಗಿ ತಿರಸ್ಕರಿಸಿದರು. ಬರಗೂರರಿಗೆ ಬರಗೂರರೇ ಸಾಟಿ ಎಂದರು. ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಾಜನ್ ಮಾತನಾಡಿ, ತೆಲುಗು, ತಮಿಳು ಇತರೆ ಭಾಷೆಯ ಚಿತ್ರಗಳು ಹೆಚ್ಚು ಪ್ರಭಾವ ಬೀರಿದ್ದ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲೂ ಉತ್ತಮ ಹಾಡು, ಸಂಗೀತ ನೀಡುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳನ್ನು ಬೆಳಗಿಸಲಾಯಿತು ಎಂದರು. ಪ್ರಶಸ್ತಿ ಪುರಸ್ಕ್ತ್ರೃತ ದೊಡ್ಡಹುಲ್ಲೂರು ರುಕ್ಕೋಜಿ ಮಾತನಾಡಿ, ರಾಜನ್-ನಾಗೇಂದ್ರ ಚಿತ್ರರಂಗದ ದಂತಕಥೆ. ಇವರ ಮಾತು ಕಡಿಮೆ ಕೆಲಸ ಜಾಸ್ತಿ. ಕ್ರಿಯಾಶೀಲ, ಪ್ರಗತಿಶೀಲ,ಸಾಮಾಜಿಕ ಚಿಂತನೆಗಳ ಮೂಲದಲ್ಲಿ ಸಂಗೀತ ನೀಡಿದವರು ಎಂದರು. ವಿಮರ್ಶಕ ಡಾ| ಕೆ.ಎಸ್. ಕುಮಾರಸ್ವಾಮಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.