ಟಿಸಿ ಅಳವಡಿಕೆಯಷ್ಟೆ ಬೆಸ್ಕಾಂ ಕೆಲಸ ಅಲ್ಲ : ಎಇಇ ಕಿರಣ್ ರೆಡ್ಡಿ
ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಅಧಿಕಾರಿಗಳಿಗೆ ಸೂಚನೆ
Team Udayavani, Mar 21, 2022, 3:45 PM IST
ಚಿತ್ರದುರ್ಗ: ರೈತರ ಪಂಪ್‌ಸೆಟ್‌ಗಳಿಗೆ ಏಳು ಗಂಟೆಗಳ ತ್ರೀಫೇಸ್ ವಿದ್ಯುತ್ ಪೂರೈಸುವ ಎರಡು ಅವಧಿಯಲ್ಲಿ ಕೆಲ ವೇಳೆ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಪೂರೈಸಲು ಸಮಸ್ಯೆ ಎದುರಾಗಬಹುದು. ಆಗ ಉಳಿದ ವಿದ್ಯುತ್‌ನ್ನು ಬೇರೊಂದು ಸಮಯಕ್ಕೆ ಹೊಂದಿಸಿ ಪೂರೈಸಬೇಕು ಎಂದು ಬೆಸ್ಕಾಂ ಎಇಇ ಕಿರಣ್ ರೆಡ್ಡಿ ಸೂಚಿಸಿದರು.
ನಗರದ ಬೆಸ್ಕಾಂ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ವಿದ್ಯುತ್ ಸರಬರಾಜು ಸೇರಿದಂತೆ ಕಾಮಗಾರಿಗಳ ಮೇಲ್ವಿಚಾರಣೆಯನ್ನು ನಡೆಸುತ್ತದೆ. ವಿದ್ಯುತ್ ಸೌಕರ್ಯಗಳ ಕುರಿತು ಯೋಜನೆ ತಯಾರಿಸಿ ಕೊಡುತ್ತದೆ. ಕೆಲಸಗಳನ್ನು ಕ್ಲಾಸ್ ಒನ್ ಗುತ್ತಿಗೆದಾರರ ಕಡೆಯಿಂದ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ರೈತರಿಗೆ ಟಿಸಿ ಅಳವಡಿಕೆ ಸೇರಿದಂತೆ ಎಲ್ಲಾ ವಿದ್ಯುತ್ ಕಾಮಗಾರಿಗಳನ್ನು ಮಾಡುವುದಿಲ್ಲ ಎಂದರು.
ಜಾನುಕೊಂಡ ಗ್ರಾಮದ ಬಸವರಾಜ್ ಎಂಬುವವರು 2012ರಲ್ಲಿ ಅಕ್ರಮ ಸಕ್ರಮದಲ್ಲಿ ಕೊಳವೆಬಾವಿಗೆ ವಿದ್ಯುತ್ ಸಂಪರ್ಕಕ್ಕಾಗಿ ಹಣ ಕಟ್ಟಲಾಗಿದೆ. ಬಜೆಟ್ ಇಲ್ಲ ಎನ್ನುತ್ತಿದ್ದಾರೆ ಎಂದು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಎಇಇ ಕಿರಣ್ ರೆಡ್ಡಿ ಮಾತನಾಡಿ, ಈ ಬಗ್ಗೆ 2020-21 ರಲ್ಲಿ ಎರಡು ವರ್ಷಗಳಲ್ಲಿ ಅರ್ಹ ಫಲಾನುಭವಿಗಳು ಖುದ್ದು ಕಚೇರಿಯನ್ನು ಸಂಪರ್ಕಿಸಿ ವಿದ್ಯುತ್ ಸಂಪರ್ಕವನ್ನು ಕೊಳವೆಬಾವಿಗೆ ಪಡೆಯುವಂತೆ ಪತ್ರಿಕಾ ಪ್ರಕಟಣೆ ನೀಡಿದ್ದೇವೆ. ಮಾರ್ಚ್ ಅಂತ್ಯದ ಅವಧಿ ಇದಾಗಿದೆ. ಈ ಕೆಲಸವನ್ನು ಹೊಸದಾಗಿ ಟೆಂಡರ್ ಆದ ಬಳಿಕ ವಿದ್ಯುತ್ ಲೈನ್ ನೀಡುವ ಕೆಲಸ ಮಾಡಲಾಗುತ್ತದೆ. 2012ರಲ್ಲಿ ಬಾಕಿ ಉಳಿದಿರುವ 795 ಅಕ್ರಮ-ಸಕ್ರಮ ಫಲಾನುಭವಿಗಳಿಗೆ ಮೇ ತಿಂಗಳ ಬಜೆಟ್ ಅನುದಾನದಲ್ಲಿ ಮೊದಲ ಆದ್ಯತೆಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಹಂಪನೂರು ಗ್ರಾಮದ ಮಂಜುನಾಥ್‌ರವರು ಕೊಳವೆಬಾವಿಗೆ ಟಿಸಿ ಒದಗಿಸುಂತೆ 2014 ರಲ್ಲಿ ಹಣ ಕಟ್ಟಲಾಗಿದ್ದರ ಬಗ್ಗೆ ಗಮನ ಸೆಳೆದರು. ಎರಡು ತಿಂಗಳ ಅವಧಿಯಲ್ಲಿ ವಿದ್ಯುತ್ ಪರಿವರ್ತಕ ಒದಗಿಸುವುದಾಗಿ ಎಇಇ ಆಶ್ವಾಸನೆ ನೀಡಿದರು.ಬಹದ್ದೂರ್‌ಘಟ್ಟ ಗ್ರಾಮದ ಬ್ಯಾರಲ್ ಬಳಿಯ 100 ಕೆವಿ ವಿದ್ಯುತ್ ಪರಿವರ್ತಕದಲ್ಲಿ ಓವರ್‌ಲೋಡ್ ಆಗಿರುವುದು ಗಮನಕ್ಕೆ ಬಂದಿದೆ. ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತವೆ. ಆ ಬಳಿಕ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಲಾಗುತ್ತದೆ ಈ ಕುರಿತು ಎಸ್ಟಿಮೇಟ್ ನೀಡುವಂತೆ ಭರಮಸಾಗರ ಎಸ್‌ಒ ತಿಪ್ಪೇಸ್ವಾಮಿಯವರಿಗೆ ತಿಳಿಸಿದರು.
ಹಿರೇಗುಂಟನೂರು ವ್ಯಾಪ್ತಿಯ ಟಗರನಹಟ್ಟಿ ಬಳಿ ರೈತರೊಬ್ಬರ ಜಮೀನಿನ ಟಿಸಿ ಪದೇ ಪದೇ ಸಮಸ್ಯೆ ಎದುರಿಸುತ್ತಿದೆ. ಕುರಿತು ಗುಂಟನೂರು ಮತ್ತು ಜಾನುಕೊಂಡ ಶಾಖಾ ಕಚೇರಿಗಳನ್ನು ಸಂಪರ್ಕಿಸಿದರೆ ಒಬ್ಬರು ಮತ್ತೂಬ್ಬರ ಮೇಲೆ ಸಬೂಬು ಹೇಳುತ್ತಿದ್ದಾರೆ. ಕಳೆದ 15 ದಿನಗಳಿಂದ ತೋಟಕ್ಕೆ ನೀರು ಹಾಯಿಸಲು ಆಗದಿರುವ ಕುರಿತು ಎಇಇ ಗಮನ ಸೆಳೆಯಲಾಯಿತು. ಟಗರನಹಟ್ಟಿ ಬಳಿಯ ರೈತರ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಶಾಖಾಧಿಕಾರಿ ಶಿವಯೋಗಿ ಅವರಿಗೆ ಸೂಚಿಸಿದರು.
ಗ್ರಾಹಕರ ಹಲವು ಸಮಸ್ಯೆಗಳನ್ನು ಅಧಿ ಕಾರಿಗಳೇ ಪರಿಹರಿಸಿದರು. ಪ್ರತಿ ತಿಂಗಳು ಮೂರನೇ ಶನಿವಾರ ಗ್ರಾಹಕರ ಸಂವಾದ ಸಭೆ ನಡೆಯುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಬೆಸ್ಕಾಂನ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗದ ಇಇ ಜಯಣ್ಣ, ಎಸ್‌ಇ ಜಗದೀಶ್, ಪಂಡರಹಳ್ಳಿ ಬೆಸ್ಕಾಂ ಶಾಖಾ ಕಚೇರಿ ಎಸ್‌ಒ ರವಿಕುಮಾರ್, ಭರಮಸಾಗರ ಶಾಖೆಯ ತಿಪ್ಪೇಸ್ವಾಮಿ, ತುರುವನೂರು ಶಾಖೆಯ ಗಿರೀಶ ರೆಡ್ಡಿ, ಹಿರೇಗುಂಟನೂರು ಎಸ್‌ಒ ಶಿವಯೋಗಿ, ಭೀಮಸಮುದ್ರ ಎಸ್‌ಒ ದಕ್ಷಿಣಮೂರ್ತಿ, ಸಿರಿಗೆರೆ ಎಸ್‌ಒ ಪಾಲಾಕ್ಷ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.