ಅನೈರ್ಮಲ್ಯದ ಗೂಡಾದ ಆಟೋ ನಿಲ್ದಾಣ
Team Udayavani, Mar 19, 2020, 5:05 PM IST
ಭರಮಸಾಗರ: ಇಲ್ಲಿನ ಸಂತೆ ಮೈದಾನದ ಬಳಿಯ ಆಟೋ ನಿಲ್ದಾಣ (ತಂಗುದಾಣ) ಪ್ರಯಾಣಿಕರ ಪಾಲಿಗೆ ತಂಗಲು ಯೋಗ್ಯವಾಗಿಲ್ಲದೆ ಅನೈರ್ಮಲ್ಯದ ಗೂಡಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಲಾಗಿರುವ ಈ ನಿಲ್ದಾಣ, ಕಟ್ಟಿದ ಬಳಿಕ ಇದರ ನಿರ್ವಹಣೆ ಕಡೆ ಗಮನಹರಿಸದೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಅನೈರ್ಮಲ್ಯ ಹೆಚ್ಚುತ್ತಲೇ ಇದೆ. ಇದೇನು ನಿಲ್ದಾಣವೋ ಹಾಳು ಕೊಂಪೆಯೋ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಕನಿಷ್ಠ ಸುಣ್ಣ ಬಣ್ಣವೂ ಇಲ್ಲದೆ ಗ್ರಾಮದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.
ಬಿಳಿಚೋಡು ಮುಖ್ಯ ರಸ್ತೆಯ ಸಂತೆ ಮೈದಾನಕ್ಕೆ ಹೊಂದಿಕೊಂಡಿರುವ ಈ ನಿಲ್ದಾಣದಲ್ಲಿ ಕಸ, ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಸುರಿದ ಕಸದೊಳಗೆ ಬೆಂಕಿ ಹಚ್ಚಿ ಸುಡುವ ಪರಿಪಾಠ ಕೆಲ ತಿಂಗಳುಗಳಿಂದ ಶುರುವಾಗಿದೆ. ಅಲ್ಲದೆ ಕೆಲವು ಮಾನಸಿಕ ಅಸ್ವಸ್ಥರು, ಬುದ್ದಿಮಾಂದ್ಯರು ತಂಗುವ ನಿಲ್ದಾಣವಾಗಿದೆ. ನಾಯಿಗಳು, ಹಂದಿಗಳು ಇದರೊಳಗೆ ಹೋಗಿ ಬಂದು ಗಲೀಜು ಹೆಚ್ಚಿಸಿವೆ. ಇದರ ಅಕ್ಕಪಕ್ಕದಲ್ಲಿನ ಚರಂಡಿಗಳ ಕಾರಣ ಸೊಳ್ಳೆಗಳ ಆಗರವಾಗಿದೆ. ಇದರ ಗೋಡೆಗಳ ತುಂಬ ನಾನಾ ಬೀಜ ಕಂಪನಿಗಳು, ಸಿನಿಮಾ ವಾಲ್‌ಪೋಸ್ಟರ್‌ಗಳು ರಾರಾಜಿಸುತ್ತಿವೆ. ಎಲೆ ಅಡಕೆ, ಗುಟ್ಕಾ ಅಗಿದು ಉಗಿದಿರುವ ಕುರುಹುಗಳು ಕಂಡು ಬರುತ್ತವೆ. ಮಳೆಗಾಲದಲ್ಲಿ ನಿಲ್ಲುವ ನೀರಿನಿಂದ ಗೋಡೆಗಳ ಮೇಲೆ ಹುಲ್ಲು ಬೆಳೆದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ. ಸಂಬಂಧಿಸಿದವರು ಆಟೋ ನಿಲ್ದಾಣದ ಸ್ವಚ್ಛತೆಗೆ ಗಮನ ನೀಡಿ ಜನರ ಬಳಕೆಗೆ ಒದಗಿಸಲು ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.