ರಂಗೇರಿದ ಸಹಕಾರ ಸಂಘದ ಚುನಾವಣಾ ಅಖಾಡ
ಭರಮಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಾಳೆ ಚುನಾವಣೆ 12 ಸ್ಥಾನಗಳಿಗೆ ಕಣದಲ್ಲಿದ್ದಾರೆ 24 ಜನ ಸ್ಪರ್ಧಿಗಳು
Team Udayavani, Jan 15, 2020, 1:02 PM IST
ಭರಮಸಾಗರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಜ. 16 ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಅಖಾಡ ರಂಗೇರುತ್ತಿದೆ. ಆದರೆ 2013ರ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಹಲವು ನಿಬಂಧನೆಗಳನ್ನು ಪೂರೈಸದೇ ಇರುವುದಕ್ಕೆ ಒಟ್ಟು 2735 ಮತದಾರರಲ್ಲಿ 1992 ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಸಹಕಾರ ಸಂಘಗಳ ನೂತನ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಜಿಲ್ಲೆಯಲ್ಲಿಯೇ ಇಲ್ಲಿನ ಸಂಘ ಮಾದರಿ ಹೆಜ್ಜೆ ಇಟ್ಟಿದೆ.
“ಸಹಕಾರಂ ಗೆಲ್ಗೆ ಸಹಕಾರಂ ಬಾಳ್ಗೆ’ ಎಂಬ ಉದ್ದೇಶದೊಂದಿಗೆ 1949 ರಲ್ಲಿ ಸ್ಥಾಪನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 71 ವರ್ಷಗಳನ್ನು ಪೂರೈಸಿದೆ. 2.70 ಕೋಟಿ ಬಡ್ಡಿ ರಹಿತ ಸಾಲ ನೀಡಲಾಗಿದೆ. 1.31 ಕೋಟಿ ಮಧ್ಯಮ ಅವ ಧಿ ಸಾಲ ಸೇರಿ ನಾಲ್ಕು ಕೋಟಿಗಿಂತ ಹೆಚ್ಚು ಸಾಲ ಸೌಲಭ್ಯವನ್ನು ಸಂಘದ ಸದಸ್ಯರಿಗೆ ನೀಡಲಾಗಿದೆ.
ರಂಗೇರಿದ ಚುನಾವಣಾ ಕಣ: ಕಳೆದ ಚುನಾವಣೆಗಳಿಗಿಂತ ಈ ಚುನಾವಣೆ
ಅಖಾಡ ರಂಗೇರುವಂತೆ ಮಾಡಿದೆ. 13 ಗ್ರಾಮಗಳು ಸಂಘದ ವ್ಯಾಪ್ತಿಗೆ ಬರುತ್ತವೆ.
ಭರಮಸಾಗರ, ಭರಮಸಾಗರ ಗೊಲ್ಲರಹಟ್ಟಿ, ಕೋಡಿರಂಗವ್ವನಹಳ್ಳಿ, ಕೋಡಿರಂಗವ್ವನಹಳ್ಳಿ ವಡ್ಡರಹಟ್ಟಿ, ಹಂಪನೂರು, ಎಮ್ಮೆಹಟ್ಟಿ, ಬೇವಿನಹಳ್ಳಿ, ಹರಳಕಟ್ಟೆ, ಇಸಾಮುದ್ರ, ಇಸಾಮುದ್ರ ಗೊಲ್ಲರಹಟ್ಟಿ, ಇಸಾಮುದ್ರ ಹೊಸಹಟ್ಟಿ, ಪಾಮರಹಳ್ಳಿ, ಸುಲ್ತಾನಿಪುರ ಗ್ರಾಮಗಳು ಸೇರುತ್ತವೆ. ಸಾಲಗಾರರ ಕ್ಷೇತ್ರದಿಂದ 11 ನಿರ್ದೇಶಕ ಸ್ಥಾನಗಳಿಗೆ 22 ಅಭ್ಯರ್ಥಿಗಳು, ಸಾಲಗಾರರಲ್ಲದ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸೇರಿ ಒಟ್ಟು 24 ಜನರು ಕಣದಲ್ಲಿ ಉಳಿದಿದ್ದಾರೆ. ಜ. 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಸಂಘದ ಕಚೇರಿ ಕಟ್ಟಡದಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಂಘದೊಂದಿಗೆ ಕನಿಷ್ಠ ವ್ಯವಹಾರ ನಡೆಸಬೇಕೆಂಬ ನಿಯಮಗಳುಳ್ಳ 2013ರ ಬೈಲಾ ಜಾರಿಗೊಂಡಿದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ
ಮೂಡಿಸುತ್ತಿದ್ದೇವೆ. ಪ್ರತಿ ವರ್ಷ ವಾರ್ಷಿಕ ಮಹಾಸಭೆಯಲ್ಲಿ ನೋಟಿಸ್ ಮೂಲಕ ವಿವರಣೆ ನೀಡುತ್ತಿದ್ದೇವೆ. ಇಡೀ ದೇಶಾದ್ಯಂತ ಈ ಕಾಯ್ದೆ ಇದೆ. ಮತದಾನದ ಹಕ್ಕು ಕಳೆದುಕೊಂಡ ಸುಮಾರು 184 ಜನರು ನ್ಯಾಯಾಲಯದ
ಮೋರೆ ಹೋಗಿದ್ದು, ಕೋರ್ಟ್ ಮೋರೆ ಹೋದವರಿಗೆ ನ್ಯಾಯಾಲಯ ಮತದಾನದ ಹಕ್ಕು ನೀಡುವಂತೆ ಸೂಚಿಸಿದರೆ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುತ್ತದೆ ಎಂದು ಸಹಕಾರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
1071 ಸಾಲಗಾರ ಸದಸ್ಯರಲ್ಲಿ 431 ಸದಸ್ಯರಿಗೆ ಮತದಾನದ ಅರ್ಹತೆಯಿದೆ.
ಸಾಲಗಾರರಲ್ಲದ ವಿಭಾಗದ 1664 ಸದಸ್ಯರಲ್ಲಿ 312 ಸದಸ್ಯರು ಮತ ಚಲಾಯಿಸುವ ಹಕ್ಕು ಉಳಿಸಿಕೊಂಡಿದ್ದಾರೆ.
ಲಾಭದತ್ತ ಹೆಜ್ಜೆ ಇಟ್ಟ ಸಂಘ: 34 ಲಕ್ಷ ರೂ. ನಷ್ಟದಲ್ಲಿದ್ದ ಸಂಘ ಕಳೆದ ಎಂಟು ವರ್ಷಗಳಲ್ಲಿ ಲಾಭದತ್ತ ಹೆಜ್ಜೆ ಇಟ್ಟಿದೆ. ಪ್ರಸ್ತುತ 2,87,422 ರೂ. ಲಾಭದಲ್ಲಿದೆ. ಸದಸ್ಯರ ಸಹಕಾರ, ವ್ಯವಹಾರ, ಆಡಳಿತ ಮಂಡಳಿಯ ಪ್ರೋತ್ಸಾಹ, ಹಿರಿಯರ ಮಾರ್ಗದರ್ಶನ, ಮತ್ತು ಸಿಬ್ಬಂದಿಯ ಪ್ರಯತ್ನದಿಂದ ಸಂಘದ ಚಹರೆಯೇ ಬದಲಾಗಿದೆ.
ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಜನತೆಗೆ ಒದಗಿಸುತ್ತೇವೆ. ಅವುಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ಸಂಘದ ಧನಾತ್ಮಕ ಬದಲಾವಣೆಗೆ ಪ್ರೋತ್ಸಾಹ ಕೊಡಬೇಕು. ಬದಲಾದ ನಿಯಮಗಳನ್ನು ಪಾಲನೆ ಮಾಡಿ ಸಂಘದ ಚಟುವಟಿಕೆಗಳೊಂದಿಗೆ ಸಕ್ರಿಯರಾಗಿರಬೇಕು. ಸಂಘದ ಚಟುವಟಿಕೆಗಳಿಂದ ದೂರ ಉಳಿದರೆ
ಮತದಾನದ ಹಕ್ಕಿನಿಂದ ಸದಸ್ಯರು ವಂಚಿತರಾಗಬೇಕಾಗುತ್ತದೆ.
ಬಿ. ಶ್ರೀಧರ ಶೆಟ್ಟಿ,
ಮುಖ್ಯ ಕಾರ್ಯನಿರ್ವಹಣಾ ಧಿಕಾರಿ,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಭರಮಸಾಗರ
ಎಚ್.ಬಿ. ನಿರಂಜನ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.