Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
ಯುವತಿಯ ಪೋಷಕರಿಂದ ಕೃತ್ಯ
Team Udayavani, Nov 28, 2024, 10:04 AM IST
ಸಾಂದರ್ಭಿಕ ಚಿತ್ರ
ಭರಮಸಾಗರ: ಊರು ತೊರೆದು ದೇಗುಲವೊಂದರಲ್ಲಿ ಮದುವೆಯಾಗಿ ಮೂರು ತಿಂಗಳ ಬಳಿಕ ಪ್ರೇಮಿಗಳು ಗ್ರಾಮಕ್ಕೆ ವಾಪಾಸ್ ಆಗುತ್ತಿದ್ದಂತೆ ಯುವತಿಯ ಪೋಷಕರು ಮದುಮಗನ ಮೇಲೆ ಹಲ್ಲೆ ನಡೆಸಿ, ದಾರುಣವಾಗಿ ಹತ್ಯೆ ಮಾಡಿರುವ ಘಟನೆ ನ.27ರ ಬುಧವಾರ ರಾತ್ರಿ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ ಮೃತ ಮದುಮಗ. ಘಟನೆಯಲ್ಲಿ ಮಂಜುನಾಥ್ ತಂದೆ ಚಂದ್ರಪ್ಪ, ತಾಯಿ ಅನುಸೂಯಮ್ಮ ಅವರಿಗೂ ಗಂಬೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಜುನಾಥ್ ತಮ್ಮದೇ ಗ್ರಾಮದ, ತಾನು ಪ್ರೀತಿಸುತ್ತಿದ್ದ ರಕ್ಷಿತಾ ಎಂಬವಳೊಂದಿಗೆ ಕಳೆದ 3 ತಿಂಗಳ ಹಿಂದೆ ಊರು ತೊರೆದು ದೇಗುಲವೊಂದರಲ್ಲಿ ವಿವಾಹವಾಗಿದ್ದರು. ಈ ಮದುವೆಗೆ ಯುವತಿಯ ಪೊಷಕರ ವಿರೋಧವಿತ್ತು.
ನ.28ರ ಬುಧವಾರ ಮಧ್ಯಾಹ್ನ ಊರಿಗೆ ಬಂದಿದ್ದ ಮಂಜುನಾಥ ಮತ್ತು ಆತನ ತಂದೆ-ತಾಯಿ ಮೇಲೆ ಕೂಡ 20ಕ್ಕೂ ಹೆಚ್ಚು ಜನ ಯುವತಿ ಕಡೆ ಪೋಷಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹತ್ಯೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಆಸ್ಪತ್ರೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.