ಏತ ನೀರಾವರಿ ಕಾಮಗಾರಿಗೆ ಚಾಲನೆ-ಹರ್ಷ
ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ565 ಕೋಟಿ ವೆಚ್ಚದಲ್ಲಿ ಕೆಲಸ ಆರಂಭ
Team Udayavani, Feb 10, 2020, 3:23 PM IST
ಭರಮಸಾಗರ: ತುಂಗಾಭದ್ರಾ ನದಿಯಿಂದ ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ನದಿ ನೀರು ತುಂಬಿಸುವ 565 ಕೋಟಿ ವೆಚ್ಚದ ಭರಮಸಾಗರ ಏತ ನೀರಾವರಿ ಕಾಮಗಾರಿ ಕಾರ್ಯ ಆರಂಭವಾಗಿರುವುದು ಈ ಭಾಗದ ಜನರಲ್ಲಿ ಸಂತಸ ತಂದಿದೆ.
ಶಂಕರ್ ನಾರಾಯಣ್ ಕನ್ಸ್‌ಷ್ಟ್ರಕ್ಷನ್ ಕಂಪನಿ ನೇತೃತ್ವದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಟೇಕಾಫ್ ಆಗಿದೆ. ದಶಕಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಜನರ ಬೇಡಿಕೆಯಿತ್ತು.
ಡಾ| ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಭರಮಸಾಗರ ಮತ್ತು ಜಗಳೂರು ಯೋಜನೆಗಳಿಗೆ ರಾಜ್ಯ ಸರಕಾರದಿಂದ 1200 ಕೋಟಿ ಅನುದಾನ ಬಿಡುಗಡೆಯಾಗಿತ್ತು.
42 ಕೆರೆಗಳನ್ನು ತುಂಬಿಸಲು 0.937 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ತುಂಗಾಭದ್ರಾದಿಂದ ವರ್ಷದ ಜುಲೈ, ಅಕ್ಟೋಬರ್‌ಗಳಲ್ಲಿ 120 ದಿನಗಳ ಕಾಲ ನೀರನ್ನು ಮೇಲೆತ್ತಿ ಕೆರೆಗಳನ್ನು ತುಂಬಿಸಲಾಗುತ್ತದೆ. ಜಾಕ್‌ವೆಲ್ ಪಂಪ್‌ಹೌಸ್ ಸಂಖ್ಯೆ-2, ಪಂಪಿಂಗ್ ಮಿಷಿನ್-2, ವಿತರಣಾ ಘಟಕಗಳು-2, ವಿದ್ಯುತ್ ಉಪಠಾಣೆ-2, ಟ್ರಾನ್ಸ್‌ಮಿಷಿನ್ ಲೈನ್-2, 66,1736
ಕಿ.ಮೀ. ಉದ್ದದ ಪೈಪ್‌ಲೈನ್ ಹಾಕಲಾಗುತ್ತದೆ. ನದಿಯಿಂದ ಹಲಸಬಾಳು ಬಳಿ ನೀರೆತ್ತಲು 2.50 ಎಕರೆ ಭೂಮಿ ಬಳಕೆಯಾಗುತ್ತದೆ. ಇಲ್ಲಿಂದ ಪಂಪ್ ಯಂತ್ರೋಪಕರಣ ಘಟಕ-1ರಲ್ಲಿ 5 ಲಂಬ ಟರ್ಬೈನ್ ಪಂಪ್‌ಗ್ಳ ಅಳವಡಿಸಲಾಗುತ್ತದೆ. (2720 ಎಚ್‌ಪಿ ಸಾಮರ್ಥ್ಯದ) 13.0 ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು ಬಳಸಿಕೊಂಡು 13597 ಎಚ್‌ಪಿ (10145 ಕೆಡ್ಲ್ಯು) ವಿದ್ಯುತ್ ಬಳಸಲಾಗುತ್ತದೆ.
ಪಂಪ್ ಯಂತ್ರೋಪಕರಣ ಘಟಕ-2 ರಲ್ಲಿ ಎರಡು ಲಂಬ ಟರ್ಬೈನ್‌ಗಳಿರುತ್ತದೆ. ಪಂಪ್ ಸಾಮರ್ಥ್ಯ- 1985 ಎಚ್‌ಪಿ, ವಿದ್ಯುತ್ ಅಗತ್ಯತೆ 3969 ಎಚ್‌ಪಿ (1480 ಕೆಡ್ಲ್ಯು) ವಿದ್ಯುತ್ ಪರಿವರ್ತಕದ
ಸಾಮರ್ಥ್ಯ- 4.50 ಎಂವಿಎ ಇರುತ್ತದೆ.
ಮುಖ್ಯ ಘಟಕ-1 ರಲ್ಲಿ ಪೈಪ್ ಲೈನ್ ಉದ್ದ 59750.00 ಮೀಟರ್ ಹೊಂದಿದೆ. ಮೊದಲ ಸಾಲಿನ ನೀರು ಪೈಪ್ ಲೈನ್‌ಗಳಲ್ಲಿ 2,795 ಕ್ಯೂಬಿಕ್ ಮೀಟರ್ ಪರ್ ಸೆಕೆಂಡ್ ನೀರಿನ ಹರಿವು ಇರುತ್ತದೆ. ನೀರಿನ ವೇಗ 1.99 ಮೀಟರ್ ಪರ್ ಸೆಕೆಂಡ್ ಇರುತ್ತದೆ. ಹಲಸಬಾಳು ಜಾಕ್ ವೆಲ್ ನಿಂದ ಭರಮಸಾಗರ ಕೆರೆಗೆ ಬರುವ ಪೈಪ್ 1500 ಎಂಎಂ ಸಾಮರ್ಥ್ಯವಿರುತ್ತದೆ. ದಪ್ಪ 11.50 ಮತ್ತು 9.00 ಎಂಎಂ ಇದೆ. ಮುಖ್ಯ ಘಟಕ-2 ರ ಏಕೈಕ ಸಾಲಿನ ಪೈಪ್ ಲೈನ್ 6715 ಮೀಟರ್ ಉದ್ದವಿದೆ. 1,515 ಕ್ಯೂಬಿಕ್ ಮೀಟರ್ ಪರ್ ಸೆಕೆಂಡ್ ದರದಲ್ಲಿ ನೀರು ಹರಿವಿರುತ್ತದೆ. 1.99 ಮೀಟರ್ ಪರ್ ಸೆಕೆಂಡ್ ನೀರಿನ ವೇಗವಿರುತ್ತದೆ. ಪೈಪ್‌ಗ್ಳು 1000 ಎಂಎಂ ಸಾಮರ್ಥ್ಯವಿರುತ್ತದೆ. ಎರಡು ಪ್ರಮುಖ ನೀರು ವಿತರಣಾ ಘಟಕಗಳಿರುತ್ತವೆ. ಮೊದಲನೆಯದನ್ನು ಶಿವನಕೆರೆ ಗ್ರಾಮದ ಬಳಿ 0.60 ಎಕರೆಯಲ್ಲಿ ನಿರ್ಮಿಸಲಾಗುತ್ತದೆ. ನೀರಿನ ವಿತರಣಾ ಮಟ್ಟ 719.365 ಮೀ ಇರುತ್ತದೆ. ಇಲ್ಲಿಂದ 9 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಎರಡನೇ ನೀರು ವಿತರಣಾ ಘಟಕವನ್ನು ನೀರ್ಥಡಿ ಬಳಿ ಒಂದು ಎಕರೆಯಲ್ಲಿ ನಿರ್ಮಿಸಲಾಗುತ್ತದೆ. 810.089 ಮೀಟರ್ ಸಾಮರ್ಥ್ಯದ ನೀರು ಶೇಖರಣೆಯಾಗುತ್ತದೆ. 24 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.
ನೀರು ತುಂಬಿಸಲಿರುವ ಕೆರೆಗಳ ಪಟ್ಟಿ ಮತ್ತು ಮಿಲಿಯನ್ ಕ್ಯೂಬಿಕ್ ಪೀಟ್ ಅಳತೆಯ ಮಾನದಲ್ಲಿ ನೀರು ತುಂಬಿಸುವ ಮಟ್ಟವನ್ನು ಗುರುತಿಸಲಾಗುತ್ತದೆ. ನೀರ್ಥಡಿ- 12.62 ಎಂಸಿಎಪ್‌ಟಿ, ಹಂಪನೂರು- 9.34, ಹಳವುದರ-11.35, ಕೊಳಹಾಳು-6.26, ಓಬಳಾಪುರ- 4.45, ಅಳಗವಾಡಿ- 13.45, ಸಿರಿಗೆರೆ (ಗೌಡನಕೆರೆ)-32.57, ಪಳಕೆಹಳ್ಳಿ- 1.09,
ಸಿರಿಗೆರೆ(ಬೂಕನಕೆರೆ)-38.73, ಶಾಂತಿವನ- 14.61, ಚೀಳಂಗಿ- 13.92, ಚಿಕ್ಕಬೆನ್ನೂರು- 2.81, ದೊಡ್ಡಲಾಘಟ್ಟ-36.09, ವಡ್ಡರಸಿದ್ದವ್ವನಹಳ್ಳಿ- 1.55, ಕೋಟೆಮಳೆಸಿದ್ದನಕಟ್ಟೆ- 3.33, ಕೋಣನೂರು-0.39, ಕಡ್ಲೆಗುದ್ದು- 1.22, ಲಕ್ಷಿ ¾àಸಾಗರ-36.83, ಬೊಮ್ಮೆನಹಳ್ಳಿ-3.27, ಕೊಡಗವಳ್ಳಿ- 40.27, ಸಾದರಹಳ್ಳಿ- 39.09, ಚಿಕ್ಕಪುರ- 40.67, ಕಾತ್ರಾಳು- 360.55, ಮೇಳಗಹಳ್ಳಿ-2.16, ಚಿಕ್ಕಬೆನ್ನೂರು ಗೋಮಾಳ- 2.60, ಮುದ್ದಾಪುರ- 77.00, ಯಳಗೋಡು- 50.82, ಸುಲ್ತಾನಿಪುರ- 1.58, ಇಸಾಮುದ್ರ-36.47, ಕಾಕಾಬಾಳು-13,68, ಕಾಲಗೆರೆ- 33.45, ನೆಲ್ಲಿಕಟ್ಟೆ- 7.15, ಅಡವಿಗೊಲ್ಲರಹಳ್ಳಿ- 3.88, ಅಜಾದ್ ನಗರ- 3.20, ಬೇವಿನಹಳ್ಳಿ-15.27, ನಂದಿಹಳ್ಳಿ- 5.03, ಕೊಳಹಾಳು ಜಿನುಗು- 3.20, ಬಹದ್ದೂರ್‌ಘಟ್ಟ- 16.72, ಕೋಗುಂಡೆ-0.68, ಭರಮಸಾಗರ ದೊಡ್ಡಕೆರೆ- 295.22, ಭರಮಸಾಗರ ಚಿಕ್ಕಕೆರೆ- 32.83, ಎಮ್ಮೆಹಟ್ಟಿ-14.53 ಎಂಸಿಎಪ್‌ಟಿ ಆಗಿರುತ್ತದೆ.
ಎಚ್.ಬಿ. ನಿರಂಜನ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.