ಎಪಿಎಂಸಿ ಪುನರಾರಂಭಕ್ಕೆ ಎಸಿ ಸೂಚನೆ
Team Udayavani, Apr 8, 2020, 4:05 PM IST
ಚಳ್ಳಕೆರೆ: ನಗರದ ಎಪಿಎಂಸಿ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಮಿಕ ಮುಖಂಡರು.
ಚಳ್ಳಕೆರೆ: ಕಳೆದ ಮಾರ್ಚ್ 24ರಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಎಲ್ಲ ದಲ್ಲಾಲಿ ಮಂಡಿಗಳು ಹಾಗೂ ವಿವಿಧ ವಾಣಿಜ್ಯೋದ್ಯಮ ವ್ಯವಹಾರಗಳು ಸ್ಥಗಿತಗೊಂಡಿದ್ದು, ಮತ್ತೆ ಎಲ್ಲವನ್ನು ಪುನರಾರಂಭ ಮಾಡುವಂತೆ ಮಾರುಕಟ್ಟೆ ಸಮಿತಿ ಆಡಳಿತಾ ಧಿಕಾರಿ, ಉಪವಿಭಾಗಾಧಿಕಾರಿ ಪ್ರಸನ್ನ ಸೂಚಿಸಿದರು.
ಇಲ್ಲಿನ ಮಾರುಕಟ್ಟೆ ಕಚೇರಿ ಆವರಣದಲ್ಲಿ ಮಂಗಳವಾರ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ದಲ್ಲಾಲರ ಸಂಘದ ಮುಖಂಡರು, ಛೇಂಬರ್ ಆಫ್ ಕಾರ್ಮಸ್‌ನ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾರುಕಟ್ಟೆ ಪುನರಾಂಭವಾದಲ್ಲಿ ಮಾತ್ರ ಆದಾಯ ಹೆಚ್ಚಳವಾಗುತ್ತದೆಯಲ್ಲದೆ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಆಹಾರ ಉತ್ಪಾದನೆ ಹಾಗೂ ಸಾಗಟಕ್ಕೆ ಇದು ಉತ್ತಮ ಪ್ರಯತ್ನವಾಗಿದ್ದು, ಎಲ್ಲಾ ನಿಯಮಗಳನ್ನು ಅಳವಡಿಸಿಕೊಂಡು ಕಾರ್ಮಿಕರು, ದಲ್ಲಾಲರ ಸಂಘ ಮತ್ತು ಖರೀದಿದಾರರು ಮಾರುಕಟ್ಟೆ ಆರ್ಥಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ. ಅರವಿಂದಕುಮಾರ್ ಮಾತನಾಡಿ, ಕಳೆದ ಮೂರು ತಿಂಗಳುಗಳಿಂದ ಮಾರುಕಟ್ಟೆಯಿಂದ ವ್ಯಾಪಾರವಾದ ಯಾವುದೇ ದಾಸ್ತಾನುವಿನ ಹಣ ಇನ್ನೂ ಬಂದಿಲ್ಲ. ಹಲವಾರು ವರ್ತಕರು ಬದಲಾದ ಕಾಲ ಪರಿಸ್ಥಿತಿಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪರಿತಪಿಸುತ್ತಿದ್ದಾರೆ. ಮಿಲ್ ಹಾಗೂ ಮಾರುಕಟ್ಟೆಯ ಬೇರೆ ರಾಜ್ಯದಿಂದಲೂ ಸಹ ಖರೀದಿದಾರರು ಆಗಮಿಸಿದ್ದು, ಇದು ಪರೋಕ್ಷವಾಗಿ ಕೊರೋನಾ ವೈರಾಣು ನಿಯಂತ್ರಣ ಪ್ರಯತ್ನಕ್ಕೆ ಹಿನ್ನೆಡೆಯಾಗುವುದರಿಂದ ಸದ್ಯದ ಸ್ಥಿತಿಯಲ್ಲಿ ವ್ಯವಹಾರಗಳನ್ನು ಮುಂದುವರೆಸುವುದು ಸಾಧ್ಯವಾಗದು ಎಂದರು.
ಛೇಂಬರ್ ಆಫ್ ಕಾರ್ಮಸ್‌ನ ನಿರ್ದೇಶಕ ವಂದನಾ ರಾಜು, ಎಐಟಿಯುಸಿ ಹಮಾಲರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ವೀರಭದ್ರಪ್ಪ ಮಾತನಾಡಿದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ಎಪಿಎಂಸಿ ಉಪನಿರ್ದೇಶಕ ಕೆ.ಶ್ರೀನಿವಾಸ್ ರೆಡ್ಡಿ, ಕಾರ್ಮಿಕ ಅಧಿಕಾರಿ ಶಫೀವುಲ್ಲಾ, ಆರೋಗ್ಯ ಅಧಿಕಾರಿ ಎನ್.ಪ್ರೇಮಸುಧಾ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಬಸವರಾಜು, ಪೌರಾಯುಕ್ತ ಪಿ.ಪಾಲಯ್ಯ, ವೃತ್ತ ನಿರೀಕ್ಷಕ ಈ.ಆನಂದ, ಮಾರುಕಟ್ಟೆ ಅಧಿಕಾರಿ ಮಹಮ್ಮದ್ ಗೌಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.