ಅಧಿಕಾರಿಗಳಿಗೆ ಹೂಮಳೆಗೈದ ಜನ
ಜನಸ್ಪಂದನೆಗೆ ಅಧಿಕಾರಿಗಳ ಕಣ್ಣಲ್ಲಿ ಆನಂದಬಾಷ್ಪ
Team Udayavani, Apr 16, 2020, 5:05 PM IST
ಚಳ್ಳಕೆರೆ: ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಪಥಸಂಚಲನಕ್ಕೆ ಡಿವೈಎಸ್ಪಿ ಎಸ್.ರೋಷನ್ ಜಮೀರ್ ಚಾಲನೆ ನೀಡಿದರು.
ಚಳ್ಳಕೆರೆ: ಕೋವಿಡ್ ವೈರಾಣು ಹಿನ್ನೆಲೆಯಲ್ಲಿ ಪಥಸಂಚಲನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಇಲಾಖೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯ ಪಥಸಂಚಲದ ಮೇಲೆ ಹೂ ಮಳೆಗೈದು, ರಾಷ್ಟ್ರಧ್ವಜ ಹಿಡಿದು ಜೈಕಾರ ಹಾಕಿದರು.
ಇಲ್ಲಿನ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್, ಮಾರ್ಗದೂದ್ದಕ್ಕೂ ಸಾರ್ವಜನಿಕರು ಸ್ವಯಂ ಸೇವಾ ಸಂಸ್ಥೆಗಳು, ಮಕ್ಕಳು, ವಯೋವೃದ್ಧರು ಪುಷ್ಪಾರ್ಚನೆ ಮಾಡಿ ಕೈಮುಗಿಯುತ್ತಿದ್ದು, ನಮ್ಮ ಸೇವೆಗೆ ಸಾರ್ಥಕ ಭಾವನೆ ಮೂಡಿದೆ. ಜನರು ಹೂವನ್ನು ಎರಚುತ್ತಿದ್ದರೆ ನಮ್ಮೆಲ್ಲಾ ಕಣ್ಣಲ್ಲಿ ಆನಂದಬಾಷ್ಪ ನಮಗೆ ಅರಿವಿಲ್ಲದಂತೆ ಹೊರಗೆ ಬರುತ್ತಿತ್ತು ಎಂದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ವೃತ್ತ ನಿರೀಕ್ಷಕ ಈ.ಆನಂದ, ಪೌರಾಯುಕ್ತ ಪಿ.ಪಾಲಯ್ಯ, ತಾಪಂ ಇಒ ಶ್ರೀಧರ್ ಐ.ಬಾರಿಕೇರ್, ಆರೋಗ್ಯಾಧಿಕಾರಿ ಡಾ| ಎನ್.ಪ್ರೇಮಸುಧಾ, ಪಿಎಸ್ ಐಗಳಾದ ನೂರ್ ಆಹಮ್ಮದ್, ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.