ಸೈನಿಕರು-ಪೋಲಿಸರ ತ್ಯಾಗ ಸ್ಮರಣೀಯ
Team Udayavani, Apr 3, 2021, 4:59 PM IST
ಚಿತ್ರದುರ್ಗ: ಸೈನಿಕರು ಹಾಗೂ ಪೊಲೀಸರ ಸೇವೆ, ತ್ಯಾಗ ಬಲಿದಾನ ಸದಾ ಸ್ಮರಣೀಯ ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ನಡೆದ ರಾಜ್ಯ ಪೊಲೀಸ್ ಧ್ವಜ ಮತ್ತು ಕಲ್ಯಾಣ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ನಾವು ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿರುವುದು ಗಡಿಯಲ್ಲಿ ಸೈನಿಕರು, ರಸ್ತೆಯಲ್ಲಿ ಪೊಲೀಸರು ಇರುವುದರಿಂದ. ಸರಾಗವಾಗಿ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗಿರುವುದು ಪೊಲೀಸರು ಸಂಚಾರ ನಿಯಂತ್ರಣ ಮಾಡುತ್ತಿರುವುದರಿಂದ ಎಂದರು.
ಆದರೆ, ಪೊಲೀಸರು ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದರೆ ಅವರನ್ನು ನಂಬಿಕೊಂಡಿದ್ದ ಕುಟುಂಬಗಳನ್ನು ನೆನೆದಾಗ ಬೇಸರವಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಭವಿಷ್ಯದ ಬಗ್ಗೆ ಸಾಕಷ್ಟು ಯೋಜನೆಗಳನ್ನು ರೂಪಿಸಬೇಕು. ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕದಂತೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಗೌರವ ವಂದನೆ ಸ್ವೀಕರಿಸಿದ ನಿವೃತ್ತ ಆರಕ್ಷಕ ಉಪನಿರೀಕ್ಷಕ ಎಸ್.ಆರ್. ಶಿವಮೂರ್ತಿ ಮಾತನಾಡಿ, ಪೊಲೀಸ್ ಕಾನ್‌ಸ್ಟೆàಬಲ್ ಹುದ್ದೆಯಿಂದ ಹೆಡ್ ಕಾನ್‌ಸ್ಟೆàಬಲ್ ಹುದ್ದೆಗೆ ಬಡ್ತಿ ದೊರೆತಾಗ ಸಂತೋಷವಾಗುತ್ತದೆ. ಸಾಕಷ್ಟು ಸೌಲಭ್ಯಗಳು ಸಿಗುತ್ತವೆ. ಆದರೆ, ಹೆಡ್ ಕಾನ್‌ಸ್ಟೆàಬಲ್ ಹುದ್ದೆಯಿಂದ ಎಎಸ್‌ಐ ಆದಾಗ ಬಡ್ತಿ ಸಿಗುವ ಸಂತೋಷ ಮಾತ್ರ. ಆರ್ಥಿಕ ಸ್ಥಿತಿಗತಿಗಳು ಬದಲಾಗುವುದಿಲ್ಲ. ಈ ಬಗ್ಗೆ ಸರ್ಕಾರ, ಇಲಾಖೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದರು. ಬೇರೆ ಬೇರೆ ರಾಜ್ಯ, ಊರುಗಳಿಂದ ಬಂದು ಇಲ್ಲಿ ಸಿಲುಕಿದ್ದವರಿಗೆ ವಾಹನದ ವ್ಯವಸ್ಥೆ ಮಾಡಿ ಅವರನ್ನು ಅವರ ಊರುಗಳಿಗೆ ತಲುಪಿಸಿದ ರೀತಿ ಹಾಗೂ ಪೊಲೀಸರಿಗೆ ವಿಶೇಷ ಕಾಳಜಿ ವಹಿಸಿದ್ದು ಶ್ಲಾಘನೀಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿ ಕಾ ವರದಿ ವಾಚನ ಮಾಡಿ ಮಾತನಾಡಿ, 2020-21ನೇ ಸಾಲಿನಲ್ಲಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಧ್ವಜ ಮಾರಾಟದಿಂದ 11.73 ಲಕ್ಷ ರೂ. ಸಂಗ್ರಹವಾಗಿತ್ತು. ಇದರಲ್ಲಿ ಕೇಂದ್ರ ನಿವೃತ್ತ ಪೊಲೀಸ್ ಅ ಧಿಕಾರಿಗಳ ಕ್ಷೇಮಾಭಿವೃದ್ಧಿ ನಿ ಧಿಗೆ ಶೇ.50 ರಷ್ಟು, ಶೇ.25 ರಷ್ಟು ಘಟಕದ ಪೊಲೀಸ್ ಕಲ್ಯಾಣ ನಿ ಧಿಗೆ ಹಾಗೂ ಶೇ.25 ರಷ್ಟನ್ನು ನಿವೃತ್ತ ಕೇಂದ್ರ ಪೊಲೀಸ್ ಅಧಿ ಕಾರಿಗಳ ಕ್ಷೇಮ ನಿ ಧಿಗೆ ನೀಡಲಾಗಿದೆ ಎಂದರು.
ಚಿತ್ರದುರ್ಗದಲ್ಲಿ ಪೊಲೀಸ್ ಸಮುದಾಯ ಭವನ ನಿರ್ಮಿಸಲಾಗಿದೆ. ಇದರಲ್ಲಿ ಸಿಬ್ಬಂದಿಗೆ ಶೇ.50 ರಷ್ಟು ಬಾಡಿಗೆ ಕಡಿಮೆ ಮಾಡಲಾಗುತ್ತಿದೆ. ಪೊಲೀಸ್ ಟೈಪಿಂಗ್ ಸೆಂಟರ್, ಫೊÉàರ್‌ಮಿಲ್, ಪೊಲೀಸ್ ಕಲ್ಯಾಣ ಕೇಂದ್ರ, ವಾಚನಾಲಯ ಸೇರಿದಂತೆ ಹಲವು ಚಟುವಟಿಕೆ ನಡೆಯುತ್ತಿವೆ. ಶೈಕ್ಷಣಿಕ ಧನಸಹಾಯವಾಗಿ 2020-21 ರಲ್ಲಿ 2.58 ಲಕ್ಷ ರೂ. ಮಂಜೂರು ಮಾಡಲಾಗಿದೆ. ಶವ ಸಂಸ್ಕಾರಕ್ಕೆ, ಕನ್ನಡಕ ಖರೀದಿ ಗೆ, ನಿವೃತ್ತರಾದ 237 ಪೊಲೀಸ್ ಅಧಿ ಕಾರಿ, ಸಿಬ್ಬಂದಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಪಘಾತದಲ್ಲಿ ಮೃತಪಟ್ಟ ಸಿಪಿಸಿಗೆ 30 ಲಕ್ಷ ರೂ. ಪರಿಹಾರ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮೊಳಕಾಲ್ಮೂರು ತಾಲೂಕು ರಾಂಪುರ ಠಾಣೆ ಸಿಪಿಸಿ ತಿಮ್ಮಪ್ಪ ಅವರ ಕುಟುಂಬಕ್ಕೆ ಎಸ್‌ಬಿಐ ಬ್ಯಾಂಕಿನಿಂದ 30 ಲಕ್ಷ ರೂ. ವಿಮೆಯ ಚೆಕ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಎಸ್‌ಪಿ ರಾಧಿ ಕಾ, ಪೊಲೀಸ್ ಇಲಾಖೆ ಹಾಗೂ ಎಸ್‌ಬಿಐ ಬ್ಯಾಂಕಿನ ನಡುವೆ ಎಂಒಯು ಆಗಿದ್ದು, ಅದರನ್ವಯ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಇದ್ದರೆ ಅಪಘಾತ ಮತ್ತಿತರೆ ಸಂದರ್ಭಗಳಲ್ಲಿ ಮೃತಪಟ್ಟರೆ ಪೊಲೀಸರಿಗೆ 30 ಲಕ್ಷ ರೂ. ಶಾಶ್ವತ ಅಂಗವೈಕಲ್ಯಕ್ಕೆ 30 ಲಕ್ಷ ರೂ. ಹಾಗೂ ತಾತ್ಕಾಲಿಕ ಅಂಗವೈಕಲ್ಯಕ್ಕೆ 10 ಲಕ್ಷ ರೂ. ವಿಮೆ ಇದೆ. ಬ್ಯಾಂಕಿನಲ್ಲಿ ಅರ್ಜಿ ಭರ್ತಿ ಮಾಡಿಕೊಟ್ಟರೆ ವಿಮೆಯನ್ನು ಬ್ಯಾಂಕ್ ಕಾಂಪ್ಲಿಮೆಂಟರಿಯಾಗಿ ನೀಡಲಿದೆ. ಜಿಲ್ಲೆಯಲ್ಲಿ ಈ ರೀತಿ ವಿಮೆ ಹಣ ಪಡೆದ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿಸಿದರು.
ಐಮಂಗಲ ಪೊಲೀಸ್ ತರಬೇತಿ ಶಾಲೆ ಪ್ರಾಚಾರ್ಯ ಪಾಪಣ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿ ಎಂ.ಬಿ. ನಂದಗಾವಿ, ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಸೇರಿದಂತೆ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಸೇರಿದಂತೆ ವಿವಿಧ ಪೊಲೀಸ್ ಅ ಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.