ವಾಸ್ತವಿಕತೆ ತಪಸ್ಸಿಗೆ ಸಮಾನ: ಮುರುಘಾ ಶರಣರು


Team Udayavani, Aug 23, 2021, 7:03 PM IST

23-12

ಚಿತ್ರದುರ್ಗ: ಭೌತಿಕತೆ ಕಡೆ ಸಾಗುವವರಿಗೆ ವಾಸ್ತವಿಕತೆಯ ಅರಿವಾಗುವುದಿಲ್ಲ. ಆಗೊಮ್ಮೆ ಈಗೊಮ್ಮೆ ಬರುವ ಸುಖ, ದುಃಖ ಶಾಶ್ವತವಲ್ಲ. ಸುಖವನ್ನು ಮಾನವ ಮರೆಯುತ್ತಾ ಹೋಗುತ್ತಾನೆ. ಆದರೆ ಅವನು ಅನುಭವಿಸಿದ ದುಃಖ ಯಾತನೆಯನ್ನು ಮರೆಯುವುದಿಲ್ಲ. ಹಾಗಾಗಿ ಅವಾಸ್ತವಿಕತೆಯಿಂದ ವಾಸ್ತವಿಕತೆಯ ಕಡೆಗೆ ಪಯಣಿಸುತ್ತಾ ಬದುಕು ಕಟ್ಟಿಕೊಳ್ಳಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಸದಾಶಿವನಗರ ಬಡಾವಣೆಯ ಶಂಕರಾಚಾರ್‌ ನಿವಾಸದ ಬಳಿ ನಡೆದ “ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಸ್ತವಿಕತೆ ಎನ್ನುವುದು ತತ್ವ. ವಾಸ್ತವಿಕತೆಯ ಬಗ್ಗೆ ಜನರಿಗೆ ಅರಿವು ಇಲ್ಲ. ಅವಾಸ್ತವಿಕತೆ ಎಂದರೆ ನಾಟಕೀಯವಾಗಿರುವುದು ಮತ್ತು ನಯವಂಚಕತನದಿಂದ ಇರುವಿಕೆ. ವಾಸ್ತವಿಕೆ ಅಂದರೆ ಸಹಜವಾಗಿ ಇರುವುದು. ಸಹಜತೆ ಮಾತ್ರವಲ್ಲ ನೈಜತೆ, ಸಮತೋಲನ ಸ್ಥಿತಿಯಿಂದ ಕೂಡಿದ್ದಾಗಿದೆ. ವಾಸ್ತವಿಕತೆಯ ಅರಿವು ಜನರಿಗಾಗಬೇಕು. ವಾಸ್ತವಿಕತೆ ಇರುವವರು ಮಾನ, ಅಪಮಾನವನ್ನು ಸಮಾನವಾಗಿ ಸ್ವೀಕರಿಸುತ್ತಾರೆ.

ವಾಸ್ತವಿಕತೆ ತಪಸ್ಸಿಗೆ ಸಮಾನ ಎಂದರು. ಭೌತಿಕತೆ ಕಡೆ ಸಾಗುವವರಿಗೆ ವಾಸ್ತವಿಕತೆಯ ಅರಿವಾಗುವುದಿಲ್ಲ. ಅಂಥವರು ಕುಗ್ಗಿ ಹೋಗುತ್ತಾರೆ. ಸಣ್ಣದಾದ ದುಃಖದಿಂದ ಕೆಲವರು ವೇದನೆಗೆ ಒಳಗಾಗುತ್ತಾರೆ. ಸಣ್ಣದಾದ ಸುಖ ಬಂದರೆ ಹಿಗ್ಗುತ್ತಾರೆ. ಆಗೊಮ್ಮೆ ಈಗೊಮ್ಮೆ ಬರುವ ಸುಖ, ದುಃಖ ಶಾಶ್ವತವಲ್ಲ. ಸುಖವನ್ನು ಮಾನವ ಮರೆಯುತ್ತಾ ಹೋಗುತ್ತಾನೆ. ಆದರೆ ಅವನು ಅನುಭವಿಸಿದ ದುಃಖ, ಯಾತನೆ ಮರೆಯುವುದಿಲ್ಲ. ಹಾಗಾಗಿ ಅವಾಸ್ತವಿಕತೆಯಿಂದ ವಾಸ್ತವಿಕತೆಯ ಕಡೆಗೆ ಪಯಣ ಮಾಡಬೇಕು ಎಂದು ತಿಳಿಸಿದರು.

ಸಮ್ಮುಖ ವಹಿಸಿದ್ದ ತಿಳುವಳ್ಳಿ ಕಲ್ಮಠದ ಶ್ರೀ ಬಸವ ನಿರಂಜನ ಸ್ವಾಮಿಗಳು ಮಾತನಾಡಿ, ವಾಸ್ತವಿಕತೆ ಎಂದರೆ ಇರುವುದು, ಅವಾಸ್ತವಿಕತೆ ಎಂದರೆ ಇಲ್ಲದಿರುವುದು. ಇದ್ದುದರಲ್ಲೆ ಸಂತೋಷ ಕಾಣುವ ಪ್ರವೃತ್ತಿ ನಮ್ಮದಾಗಬೇಕು. ನಾವು ಆಕಾಶಕ್ಕೆ ಏಣಿ ಹಾಕಲು ಸಾಧ್ಯವಿಲ್ಲ. ಆಸೆ ಒಳ್ಳೆಯದಲ್ಲ. ತೃಪ್ತ ಭಾವನೆ ಇದ್ದರೆ ದುಃಖ ಬರುವುದಿಲ್ಲ. ಸಹಜವಾಗಿ ಸರಳವಾಗಿ ಜೀವನ ರೂಢಿಸಿಕೊಳ್ಳಬೇಕು. ಮೌಢಾÂಚರಣೆಗಳನ್ನು ಬದಿಗೊತ್ತಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್‌ ಮಾತನಾಡಿ, ಈ ಮೊದಲು ಪುರಾಣ, ಕಥೆಗಳನ್ನು ನಮ್ಮ ಹಿರಿಯರು ಕೇಳುತ್ತಿದ್ದರು ಹಾಗೂ ಹೇಳುತ್ತಿದ್ದರು. ಕಷ್ಟ, ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಇಂದು ತಂತ್ರಜ್ಞಾನದಿಂದ ಅಂತಹ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ನಮ್ಮದು ಬಸವಣ್ಣನವರ ನಾಡು. ಅವರ ವಚನಗಳು ಜಗತ್ತಿನಾದ್ಯಂತ ಪರಿಚಯವಾಗಿವೆ. ಅಂಥ ವಚನಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು. ಉಪ್ಪಾರ ಸಮುದಾಯ ನಿಗಮದ ಅಧ್ಯಕ್ಷ ಗಿರೀಶ್‌ ಮಾತನಾಡಿದರು.

ನಗರಸಭಾ ಉಪಾಧ್ಯಕ್ಷೆ ಶ್ವೇತಾ ವೀರೇಶ್‌ ವೇದಿಕೆಯಲ್ಲಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಕಾರ್ಯಕ್ರಮದ ದಾಸೋಹಿ ಶಂಕರಾಚಾರ್‌ ಸ್ವಾಗತಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chitradurga: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹ*ತ್ಯೆ

Chi-narabalui

Chitradurga: ನಿಧಿಯ ಆಸೆಗೆ ಜ್ಯೋತಿಷಿ ಮಾತು ಕೇಳಿ ನರಬಲಿ: ಅಮಾಯಕನ ಕೊಲೆ!

CTD-Nagasadhu-Died

Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!

ಬಿಜೆಪಿ ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ

BJP ಸರ್ಕಾರದಲ್ಲೇ ಮುಡಾ ಬದಲಿ ನಿವೇಶನ ಹಂಚಿಕೆ: ಸಚಿವ ವೆಂಕಟೇಶ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.