ಹಿರಿಯೂರಿನ 30 ಕಡೆ ಬ್ಯಾರಿಕೇಡ್ ಅಳವಡಿಕೆ
Team Udayavani, May 2, 2021, 6:12 PM IST
ಹಿರಿಯೂರು: ನಗರದಲ್ಲಿ ಅನವಶ್ಯಕವಾಗಿ ಓಡಾಡುವ ವಾಹನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಮಾರು 30 ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಡಿವೈಎಸ್‌ಪಿ ರೋಷನ್ ಜಮೀರ್ ಹೇಳಿದರು.
ನಗರದಲ್ಲಿ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತರಕಾರಿ, ಹೂವು, ಹಣ್ಣು ಮಾರಾಟಕ್ಕೆ ಬಬ್ಬೂರಿನ ಎಪಿಎಂಸಿ ಆವರಣದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜನರು ಅಗತ್ಯ ವಸ್ತು ಕೊಳ್ಳಲು ನಿಗದಿತ ಸಮಯದಲ್ಲಿ ಮಾತ್ರ ಓಡಾಟ ಮಾಡಬಹುದು. ವಿನಾಕಾರಣ ಓಡಾಡುವ ವಾಹನ ಸವಾರರ ವಾಹನಗಳನ್ನು ಸೀಜ್ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು.
ಕೊರೊನಾ ಮಾರ್ಗಸೂಚಿ ಅನುಸರಿಸದೇ ಇರುವ ಅಂಗಡಿ ಮಾಲೀಕರುಗಳಿಗೆ ಹಾಗೂ ವರ್ತಕರುಗಳಿಗೆ ದಂಡ ವಿಧಿ ಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಪಿಐ ರಾಘವೇಂದ್ರ ಮಾತನಾಡಿ, ಪ್ರತಿ ವಾರ್ಡ್‌ಗೂ ಸ್ಯಾನಿಟೈಜೇಷನ್ ಮಾಡುವಾಗ ಆ ಭಾಗದ ಚುನಾಯಿತ ಪ್ರತಿನಿ ಧಿಗಳು ಪಾಲ್ಗೊಳ್ಳಿ. ಅನಗತ್ಯವಾಗಿ ಓಡಾಡುವ ವಾಹನ ಸವಾರರ ಮೇಲಿನ ಪ್ರಕರಣಗಳಲ್ಲಿ ಅಥವರ ಪರವಾಗಿ ಜನಪ್ರತಿನಿಧಿಗಳ ವಕಾಲತ್ತು ಬೇಡ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು. ಸಿಪಿಐ ವಿ.ಎಸ್. ಶಿವಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ಸಾವು-ನೋವು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ. ಆದ್ದರಿಂದ ಕೊರೊನಾ ನಿಯಂತ್ರಿಸಲು ಅನವಶ್ಯಕವಾಗಿ ಗುಂಪು ಸೇರದಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ. ತಮ್ಮ ವಾರ್ಡ್‌ಗಳಲ್ಲಿ ಅನುಮತಿ ಇಲ್ಲದೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ಇಲಾಖೆ ಗಮನಕ್ಕೆ ತರಬೇಕು ಎಂದರು. ಸಭೆಯಲ್ಲಿ ತಹಶೀಲ್ದಾರ್ ಸತ್ಯನಾರಾಯಣ, ಪೌರಾಯುಕ್ತೆ ಟಿ. ಲೀಲಾವತಿ, ಆರೋಗ್ಯ ನಿರೀಕ್ಷಕ ಅಂಜಿನಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ನಗರಸಭೆ ಸದಸ್ಯರುಗಳಾದ ಅಂಬಿಕಾ ಆರಾಧ್ಯ, ಸಣ್ಣಪ್ಪ, ಮಂಜುಳಾ, ಕೇಶವಮೂರ್ತಿ, ಬಿ.ಎನ್. ತಿಪ್ಪೇಸ್ವಾಮಿ, ಸಿ.ಎಂ. ಸ್ವಾಮಿ, ಜಿ. ನಾಗರಾಜ, ಮಹಿಪಾಲ್, ಚಿರಂಜೀವಿ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.