ರಸ್ತೆಯಲ್ಲಿ ಜನರ ಓಡಾಟ ಜೋರು
Team Udayavani, May 4, 2021, 9:34 PM IST
ಚಿತ್ರದುರ್ಗ: ಕೊರೊನಾ ಎರಡನೇ ಅಲೆ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಫ್ಯೂ ಮಧ್ಯಾಹ್ನದವರೆಗೆ ಸಡಿಲವಾದಂತೆ ಕಾಣುತ್ತಿದೆ. ಜನಜಂಗುಳಿ ಸೇರುತ್ತಾರೆ ಎಂಬ ಕಾರಣಕ್ಕೆ ಸರ್ಕಾರ ತನ್ನ ತೀರ್ಮಾನ ಬದಲಿಸಿ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಇದ್ದ ಅಗತ್ಯ ವಸ್ತುಗಳ ಖರೀದಿ ಅವಧಿ ಯ ಬದಲಾಗಿ ಬೆಳಗ್ಗೆ 6 ರಿಂದ 12 ಗಂಟೆವರೆಗೆ ಕೆಲ ಚಟುವಟಿಕೆಗಳಿಗೆ ಇದ್ದ ನಿರ್ಬಂಧವನ್ನು ಸಡಿಲಗೊಳಿಸಿದೆ.
ಇದನ್ನೇ ನೆಪ ಮಾಡಿಕೊಂಡ ಕೆಲವರು ಮಧ್ಯಾಹ್ನ 12 ಗಂಟೆವರೆಗೆ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡು ಬಂತು. ಅಂಗಡಿ ಮುಂಗಟ್ಟುಗಳು, ತರಕಾರಿ ಅಂಗಡಿಗಳು ತೆರೆದಿದ್ದವು. ಅನೇಕರು ಬ್ಯಾಂಕ್ ಪಾಸ್‌ಪುಸ್ತಕ ಹಿಡಿದುಕೊಂಡು ಬ್ಯಾಂಕಿನ ಕೆಲಸ ಎಂದು ಹೇಳುತ್ತಾ ರಸ್ತೆಗೆ ಬರುತ್ತಿದ್ದರು. ಮತ್ತೂಂದೆಡೆ ಕಳೆದ ಮೂರು ದಿನಗಳಿಂದ ಬ್ಯಾಂಕುಗಳಿಗೆ ರಜೆ ಇದ್ದ ಪರಿಣಾಮ ಬ್ಯಾಂಕುಗಳ ಮುಂದೆ ಜನರ ಗುಂಪು ನೆರೆದಿತ್ತು. ನಗರದ ಕೆನರಾ ಬ್ಯಾಂಕ್ ಮುಂದೆ ಸಾಮಾಜಿಕ ಅಂತರ ಮರೆತು ಗುಂಪುಗೂಡಿದ್ದು ಗೋಚರಿಸಿತು.
ಎಪಿಎಂಸಿ ವಹಿವಾಟು ಆರಂಭ: ಕೋವಿಡ್ ಮಾರ್ಗಸೂಚಿ ಕಾರಣಕ್ಕೆ ಕಳೆದ ನಾಲ್ಕು ದಿನಗಳಿಂದ ವ್ಯಾಪಾರ ವಹಿವಾಟು ನಡೆಸದೆ ಮೌನವಾಗಿದ್ದ ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸೋಮವಾರ ಕಾರ್ಯಾರಂಭ ಮಾಡಿತು. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಕಾಲಾವಕಾಶ ನೀಡಿದ್ದರಿಂದ ವರ್ತಕರು ಇಷ್ಟು ಕಡಿಮೆ ಸಮಯದಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ, ಬದಲಾಗಿ ಕಾಲಾವಕಾಶ ಹೆಚ್ಚಿಸಿ ಎಂದು ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ “ಉದಯವಾಣಿ’ ಪತ್ರಿಕೆ ಬೆಳಕು ಚೆಲ್ಲಿತ್ತು. ಇದೇ ವೇಳೆ ಸರ್ಕಾರ ತನ್ನ ಪಟ್ಟು ಸಡಿಲಿಸಿ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಕಾಲಾವಕಾಶ ಹೆಚ್ಚಿಸಿದ್ದರಿಂದ ಸೋಮವಾರ ನಸುಕಿನಲ್ಲೇ ಎಪಿಎಂಸಿ ವಹಿವಾಟು ಆರಂಭಗೊಂಡಿತು. ಸೂರ್ಯಕಾಂತಿ, ಶೇಂಗಾ, ಮೆಕ್ಕೆಜೋಳ, ಕಡಲೆ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಮಾರುಕಟ್ಟೆಗೆ ತಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.