ಸಿದ್ಧಾಂತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಿ: ಸುನೀಲ್‌ಕುಮಾರ್
ದೇಶ ಮೊದಲು ಎನ್ನುವ ಪರಿಕಲ್ಪನೆಯಡಿ ನಮ್ಮ ಹಿರಿಯರು ಕೆಲಸ ಮಾಡಿದ್ದಾರೆ.
Team Udayavani, Jan 28, 2021, 4:01 PM IST
ಚಿತ್ರದುರ್ಗ: ದೇಶ ಮೊದಲು ಎನ್ನುವ ಪರಿಕಲ್ಪನೆಯಡಿ ನಮ್ಮ ಹಿರಿಯರು ಕೆಲಸ ಮಾಡಿದ್ದಾರೆ. ನಮ್ಮ ಸಿದ್ಧಾಂತಕ್ಕಾಗಿ ಬದ್ಧತೆ ಹಾಗೂ ಪರಿಶ್ರಮದಿಂದ ನಾವು ಕೆಲಸ ಮಾಡಬೇಕು ಎಂದು ಕಾರ್ಕಳ ಶಾಸಕ ಸುನೀಲ್‌ಕುಮಾರ್ ಹೇಳಿದರು.
ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಾರೋಪದಲ್ಲಿ ಮಾತನಾಡಿದ ಅವರು, ಯಾರಿಗೋ ಬಾಲಂಗೋಚಿಯಾಗದೇ ಪರಿಶ್ರಮದ ಮೂಲಕ ಬೆಳೆದರೆ ಯುವ ಮೋರ್ಚಾ ಕಾರ್ಯಕರ್ತರು ಮುಂದೆ ದೇಶದ ನಾಯಕತ್ವ
ವಹಿಸಿಕೊಳ್ಳಬಹುದು. ಇಂದು ನಾಯಕರ ನಡುವೆ ಹೋಗಿ ಸೆಲ್ಫಿ ತೆಗೆದುಕೊಂಡು ಫೇಸ್‌ಬುಕ್, ವಾಟ್ಸಾಪ್ ಆ್ಯಪ್‌ಗ್ಳಿಗೆ ಹಾಕಿಕೊಳ್ಳುವುದು, ಫ್ಲೆಕ್ಸ್ ಹಾಕಿಸಿಕೊಳ್ಳುವವರನ್ನೇ ಕಾಣುತ್ತಿದ್ದೇವೆ. ಆದರೆ, ನಿಜವಾದ ಕಾರ್ಯಕರ್ತ ಬದ್ಧತೆಯಿಂದ ತಾನು ನಂಬಿದ ಸಿದ್ಧಾಂತಕ್ಕಾಗಿ ರಚನಾತ್ಮಕ ಕೆಲಸ ಮಾಡುತ್ತಾನೆ ಎಂದರು.
ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದರ ಪರಿಣಾಮ ಇಂದು ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿ ಕಾರದಲ್ಲಿದೆ. ಹಿಂದೆ ಬ್ಯಾನರ್ ಕಟ್ಟಲು ದುಡ್ಡಿಲ್ಲದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದರು. ಈಗ ಸುಖದ ಸುಪ್ಪತ್ತಿಗೆಯಲ್ಲಿದ್ದೇವೆ. ಮೈಮರೆತರೆ ಪತನವಾಗುವುದು ಖಚಿತ ಎಂದರು.
ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಮಾತನಾಡಿ, ಜಾತಿವಾದ, ವಂಶವಾದ, ಭ್ರಷ್ಟಾಚಾರ, ತುಷ್ಟೀಕರಣದಿಂದ ರಾಜಕೀಯವನ್ನು ಮುಕ್ತಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಮಿತ್ ಶಾ ಅವರ ಕಲ್ಪನೆಯಂತೆ ಸ್ವಾವಲಂಬಿ ಬೂತ್ ನಿರ್ಮಾಣ ಮಾಡುವುದು ನಮ್ಮ ಜವಾಬ್ದಾರಿ ಎಂದರು.
ಓದಿ :
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.