ಅಂಬೇಡ್ಕರ್ ಮಹಾನಾಯಕ: ಪರಮೇಶ್
ಮೊಳಕಾಲ್ಮೂರು: ಭಾಷಣ ಸ್ಪರ್ಧೆಯಲ್ಲಿ ಎಸ್.ಪರಮೇಶ್ ಮಾತನಾಡಿದರು.
Team Udayavani, Jan 28, 2021, 4:14 PM IST
ಮೊಳಕಾಲ್ಮೂರು: ಜನ್ಮ ನೀಡಿದವರು ತಂದೆ ತಾಯಿಗಳಾಗಿದ್ದರೂ ಆಧುನಿಕ ಕಾಲಘಟ್ಟದಲ್ಲಿ ಹೋರಾಟದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್
ರವರು ಬದುಕು ಮತ್ತು ಅತ್ಯಂತ ಶಕ್ತಿಶಾಲಿಯಾಗಿರುವ ಮತದಾನದ ಹಕ್ಕನ್ನು ಕಲ್ಪಿಸಿದ್ದಾರೆ ಎಂದು ಪ್ರಬುದ್ಧ ಭಾರತ, ಜನಸೇವಾ ಕೇಂದ್ರ
ಹಾಗೂ ಸಮಾಜ ಪರಿವರ್ತನಾ ಸೇವಾ ಸಂಸ್ಥೆಯ ಸಂಸ್ಥಾಪಕ ಎಸ್.ಪರಮೇಶ್ ತಿಳಿಸಿದ್ದಾರೆ.
ಪಟ್ಟಣದ ಕನ್ನಡ ಭವನದಲ್ಲಿ ಪ್ರಬುದ್ಧ ಭಾರತ, ಜನಸೇವಾ ಕೇಂದ್ರ ಹಾಗೂ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪಾಶ್ಚಿಮಾತ್ಯ ಇತಿಹಾಸಕಾರರು ಮತ್ತು ರಾಜಕೀಯ ತಜ್ಞರು ಆಧುನಿಕ ಭಾರತದ ನೈಜ ಪ್ರಜಾಪ್ರಭುತ್ವದ ನಿರ್ಮಾತೃ ಎಂದು ಕರೆಯಲಾಗಿದೆ. ವಿಶ್ವಸಂಸ್ಥೆಯು ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವವನ್ನು ವಿಶ್ವಜ್ಞಾನಿಯ ದಿನವೆಂದು ಆಚರಿಸಲಾಗುತ್ತಿದೆ ಎಂದರು.
ಭಾರತದ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣದ ಹಕ್ಕು, ಆಸ್ತಿಯ ಹಕ್ಕು, ಸಮಾನತೆಯ ಹಕ್ಕು, ಮೂಲಭೂತದ ಹಕ್ಕು ಸೇರಿದಂತೆ ಹಲವಾರು ಹಕ್ಕುಗಳನ್ನು ಕಲ್ಪಿಸಿದ್ದಾರೆ. ಸಂವಿಧಾನವನ್ನು ಜಾತಿವಾದಿಗಳು ಯಥಾವತ್ತಾಗಿ ಜಾರಿಗೊಳಿಸುವುದು ಅಸಾಧ್ಯವೆಂದು ಅರಿತು ವಿದ್ಯಾರ್ಥಿಗಳಿಗೆ ಮತ್ತು ನೌಕರರಿಗೆ ವಿಶೇಷ ಸಂದೇಶ ಕಲ್ಪಿಸಿದ್ದಾರೆ. ಅ ಧಿಕಾರದ ಗದ್ದುಗೆ ಹಿಡಿಯಲು ಮತದಾನವು ಶಕ್ತಿಶಾಲಿಯಾಗಿದ್ದು, ಸೂಕ್ತ ಮತ್ತು ಅರ್ಹರಿಗೆ ಮತದಾನ ಮಾಡಿ ಅಧಿ ಕಾರದ ಗದ್ದುಗೇರಬೇಕು
ಎಂದು ತಿಳಿಸಿದರು.
ಸ್ವಯಂ ಬೆಳಕು ಫೌಂಡೇಷನ್ ಜಿಲ್ಲಾ ಸಂಯೋಜಕ ಪಿ.ಮಂಜಣ್ಣ, ಹಂಪಿ ವಿಶ್ವವಿದ್ಯಾಲಯದ ಸಂಶೋದಕ ಪ್ರಹ್ಲಾದ, ಮುಖ್ಯ ಶಿಕ್ಷಕರಾದ ಎಂ.ರುದ್ರಯ್ಯ, ಕಸಾಪದ ನಿಕಟಪೂರ್ವ ಕಾರ್ಯದರ್ಶಿ ಶ್ರೀರಾಮುಲು, ಲೋಕೇಶ್ ಪಲ್ಲವಿ, ಗ್ರಾಪಂ ಸದಸ್ಯ ಮಲ್ಲಯ್ಯ, ಉಪನ್ಯಾಸಕ ಕರಿಬಸಪ್ಪ, ರಾಜು, ರಮೇಶ್, ಬಸವರಾಜ್ ಹಾಗೂ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.