ಕೊರೊನಾ ನಿಯಂತ್ರಣಕ್ಕೆ ಚಿತ್ರದುರ್ಗ ಶಾಸಕರ ಪಣ
Team Udayavani, May 25, 2021, 9:04 PM IST
ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಕೋವಿಡ್ ಸೋಂಕಿನ ಎರಡನೇ ಅಲೆಯ ವಿಪರೀತ ಆರಂಭವಾಗುತ್ತಲೇ ಜಿಲ್ಲೆಯಲ್ಲಿ ಆಸ್ಪತ್ರೆಗಳು, ವೈದ್ಯರು, ಅಧಿ ಕಾರಿಗಳ ಜತೆಗೆ ಜನಪ್ರತಿನಿ ಧಿಗಳು ಕೂಡ ಸಾಥ್ ನೀಡಿ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದ್ದಾರೆ.
ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ಓಡಾಟ ಮಾಡುತ್ತಿರುವ ನಡುವೆಯೇ ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಹೊರಗೆ ಬಂದಿದ್ದಾರೆ. ಜಿಲ್ಲಾ ಕೇಂದ್ರ ಚಿತ್ರದುರ್ಗ ಶಾಸಕರಾಗಿರುವ ಜಿ.ಎಚ್. ತಿಪ್ಪಾರೆಡ್ಡಿ ಅವರು ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಹೊರಬಂದ ನಂತರ ಸಾಕಷ್ಟು ಎಚ್ಚರಿಕೆ ವಹಿಸಿ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿನೇಟೆಡ್ ಬೆಡ್ ಸಮಸ್ಯೆ, ಆಕ್ಸಿಜನ್, ರೆಮ್‌ಡೆಸಿವರ್ ಸಮಸ್ಯೆ ಇದ್ದ ಸಂದರ್ಭದಲ್ಲೇ ಕೋವಿಡ್‌ನಿಂದ ಚೇತರಿಸಿಕೊಂಡು ಬಂದ ಶಾಸಕರು, ಪ್ರವಾಸಿಮಂದಿರದ ಆವರಣದಲ್ಲಿ ಮೇ 4 ರಂದು ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳ ಸಭೆ ನಡೆಸಿ ಚುರುಕು ಮುಟ್ಟಿಸಿದ್ದರು.
ಈ ಹಂತದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿನೇಟೆಡ್ ಬೆಡ್‌ಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಬೆಂಗಳೂರು ಹಂತದ ಅಧಿ ಕಾರಿಗಳು, ಸರ್ಕಾರದ ಹಂತದಲ್ಲಿ ಮಾತನಾಡಿ, ತಕ್ಷಣ ಆಕ್ಸಿಜನ್ ವ್ಯವಸ್ಥೆ ವಿಸ್ತರಿಸಲು ಆದೇಶ ಮಾಡಿಸಿ ಕಾಮಗಾರಿ ಆರಂಭವಾಗುವಂತೆ ಮಾಡಿದ್ದರು. ಆಕ್ಸಿಜನ್, ರೆಮ್‌ಡೆಸಿವರ್, ಬೆಡ್ ವ್ಯವಸ್ಥೆ ಮಾಡಿದ ಶಾಸಕರು: ಕೊರೊನಾ ಲಾಕ್‌ಡೌನ್ ಆರಂಭದಲ್ಲಿ ಆಕ್ಸಿಜನ್ ಸಮಸ್ಯೆ ವಿಪರೀತವಾಗಿತ್ತು. ಸಿಲಿಂಡರ್, ಕಾನ್ಸ್‌ಂಟ್ರೇಟರ್‌ಗಳ ಅಗತ್ಯವಿತ್ತು. ಬೆಡ್ ಕೊರತೆ ತಾಂಡವಾಡುತ್ತಿತ್ತು. ಯಾರಿಗೆ ಹೇಳಿದರೂ ಸಮಸ್ಯೆ ಬಗೆಹರಿಯೋದಿಲ್ಲ ಎನ್ನುವ ಹಂತದಲ್ಲಿದ್ದಾಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು ಅಧಿ ಕಾರಿಗಳ ಸಭೆ ನಡೆಸಿ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿ ಅಗತ್ಯ ವ್ಯವಸ್ಥೆಗೆ ಆದ್ಯತೆ ನೀಡಿದ್ದರು.
ತಾಲೂಕಿನ ಮರಡಿಹಳ್ಳಿ ಆರೋಗ್ಯ ಕೇಂದ್ರದಲ್ಲಿದ್ದ ಸೋಂಕಿತರು ರೆಮ್‌ಡಿಸಿವರ್ ಅಗತ್ಯದ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದಾಗ ಜಿಲ್ಲಾಸ್ಪತ್ರೆಯಿಂದ ಅಲ್ಲಿಗೆ ಸರಬರಾಜಾಗುವಂತೆ ನೋಡಿಕೊಂಡಿದ್ದರು. ಚಿತ್ರದುರ್ಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ರೋಗಿಯೊಬ್ಬರು ಆಕ್ಸಿಜನ್ ಖಾಲಿಯಾಗಿದೆ ಎಂದಾಗ ಅಲ್ಲಿಗೆ ಸಿಲಿಂಡರ್ ವ್ಯವಸ್ಥೆ ಮಾಡಿದ್ದು ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ.
ಈಗ ಬೆಂಗಳೂರಿನಿಂದಲೂ ದುರ್ಗಕ್ಕೆ ಬರ್ತಾರೆ: ಇಷ್ಟು ದಿನ ಚಿಕಿತ್ಸೆಗಾಗಿ ಚಿತ್ರದುರ್ಗದಿಂದ ಬೆಂಗಳೂರು ಮತ್ತಿತರೆಡೆಗಳಿಗೆ ಹೋಗುವ ಪರಿಪಾಠ ಇತ್ತು. ಆದರೆ ಈಗ ಅಲ್ಲಿಂದ ಇಲ್ಲಿಗೆ ಬೆಡ್ ಹುಡುಕಿಕೊಂಡು ಬರುತ್ತಿದ್ದಾರೆ. ಜೀವನ್ಮರಣದ ಪ್ರಶ್ನೆ ಬಂದಾಗ ಮಾನವೀಯತೆಯಿಂದ ಅವರಿಗೆ ಸ್ಪಂದಿಸಿ ಚಿಕಿತ್ಸೆ ಕೊಡಿಸಿದ್ದೇವೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಇಲ್ಲಿಗೆ ಬರುವ ಬಡ ರೋಗಿಗಳು ಎಲ್ಲಿಗೆ ಹೋಗಬೇಕು, ಯಾರನ್ನು ಮಾತನಾಡಿಸಬೇಕು ಎನ್ನುವ ಸಮಸ್ಯೆಯಿಂದ ಒದ್ದಾಡುತ್ತಿರುತ್ತಾರೆ.
ಅಂಥವರು ನಮ್ಮನ್ನು ಸಂಪರ್ಕಿಸುವುದು ಹೆಚ್ಚು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಬೆಡ್ ಕೊಡಿಸುವುದು, ಇಂಜೆಕ್ಷನ್ ಕೊಡಿಸುವ ಕೆಲಸವನ್ನು ದಿನದ 24 ಗಂಟೆಯೂ ಮಾಡುತ್ತಿದ್ದೇನೆ ಎಂದು ಶಾಸಕರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.