31ರಿಂದ ಪೋಲಿಯೋ ಲಸಿಕೆ ಅಭಿಯಾನ
1,51,852 ಮಕ್ಕಳಿಗೆ ಲಸಿಕೆ ಹಾಕುವ ಗುರಿ
Team Udayavani, Jan 28, 2021, 4:26 PM IST
ಚಿತ್ರದುರ್ಗ: ರಾಷ್ಟ್ರಿಯ ಪಲ್ಸ್ ಪೋಲಿಯೊ·ಲಸಿಕಾ ಕಾರ್ಯಕ್ರಮದಡಿ ಜ. 31 ರಿಂದ·ಫೆಬ್ರುವರಿ 3ರವರೆಗೆ ಜಿಲ್ಲೆಯಲ್ಲಿ 1,51,852
ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಹೊಂದಲಾಗಿದೆ ಎಂದು ಜಿಲ್ಲಾ ಧಿಕಾರಿ ಕವಿತಾಎಸ್.ಮನ್ನಿಕೇರಿ ತಿಳಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋಕಾರ್ಯಕ್ರಮದ ಜಿಲ್ಲಾಮಟ್ಟದ ಚಾಲನಾಸಮಿತಿ ಸಭೆಯಲ್ಲಿ ಮಾತನಾಡಿದ ಅವರು,0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ 2021ರಜ. 31 ರಿಂದ ಫೆ.3 ರವರೆಗೆ ಪೋಲಿಯೋಲಸಿಕೆ ಹಾಕಲಾಗುವುದು. ಇದರಲ್ಲಿ ಜಿಲ್ಲೆಯಗ್ರಾಮೀಣ ಪ್ರದೇಶದ 1,17,515 ಹಾಗೂನಗರ ಪ್ರದೇಶದ 34,337 ಮಕ್ಕಳು ಸೇರಿದಂತೆಒಟ್ಟು 1,51,852 ಮಕ್ಕಳಿಗೆ ಪೋಲಿಯೋ ಲಸಿಕೆಹಾಕಲಾಗುವುದು. ಇದಕ್ಕಾಗಿ 2318 ಲಸಿಕಾಕಾರ್ಯಕರ್ತರು, 240 ಮೇಲ್ವಿಚಾರಕರನ್ನುನಿಯೋಜಿಸಲಾಗಿದ್ದು, 1159 ತಂಡಗಳು
ಹಾಗೂ 1084 ಲಸಿಕಾ ಕೇಂದ್ರಗಳನ್ನುಸ್ಥಾಪಿಸಲಾಗುವುದು ಎಂದರು.
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ವಿವಿಧಇಲಾಖೆಯ ಮುಖ್ಯಸ್ಥರು ತಮ್ಮ ಇಲಾಖೆಯವಾಹನಗಳನ್ನು ನಿಗದಿತಸಮಯಕ್ಕೆನಿಯೋಜಿಸಬೇಕು. ಕಾರ್ಯಕ್ರಮಕ್ಕೆಯಾವುದೇ ತೊಂದರೆಯಾಗದಂತೆ ಪ್ರಾದೇಶಿಕಸಾರಿಗೆ ಅ ಧಿಕಾರಿಗಳು ವಾಹನಗಳನ್ನುಸಮರ್ಪಕವಾಗಿ ಪೂರೈಸಬೇಕು. ಬೆಸ್ಕಾಂಇಲಾಖೆಯವರು ನಿರಂತರ ವಿದ್ಯುತ್ ಪೂರೈಕೆಗೆಕ್ರಮ ವಹಿಸಬೇಕು ಎಂದು ಸೂಚಿಸಿದರು.
ವ್ಯಾಪಕ ಪ್ರಚಾರಕ್ಕಾಗಿ ಪ್ರೌಢ ಶಾಲಾಮಕ್ಕಳಿಂದ ಜಾಥಾ ಏರ್ಪಡಿಸುವುದರ ಮೂಲಕಜನರಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದಕುರಿತು ಅರಿವು ಮೂಡಿಸಬೇಕು. ಜತೆಗೆಪುರಸಭೆ, ಪಟ್ಟಣ ಪಂಚಾಯಿತಿ ಮತ್ತುನಗರಸಭೆ ವತಿಯಿಂದ ಪಲ್ಸ್ ಪೋಲಿಯೋಕಾರ್ಯಕ್ರಮದ ಬಗ್ಗೆ ಆಡಿಯೋ ಧ್ವನಿಸುರಳಿಯನ್ನು ಕಸ ವಿಲೇವಾರಿ ವಾಹನದಲ್ಲಿಬಿತ್ತರಿಸಬೇಕು ಎಂದರು.
ಡಿಎಚ್‌ಒ ಡಾ.ಫಾಲಾಕ್ಷ ಮಾತನಾಡಿ,2011ರಿಂದ ಈವರೆಗೆ ಜಿಲ್ಲೆಯಲ್ಲಿ ಯಾವುದೇಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ.2014 ರಲ್ಲಿ ಭಾರತವನ್ನು ಪೋಲಿಯೋ ಮುಕ್ತದೇಶ ಎಂದು ಘೋಷಿಸಲಾಗಿದೆ ಎಂದರು.ಲಸಿಕಾ ಕಾರ್ಯಕ್ರಮದ ಸಿಬ್ಬಂದಿಗೆತರಬೇತಿ ನೀಡಲಾಗಿದ್ದು, ಈಗಾಗಲೇ ಜಿಲ್ಲೆಗೆಪೋಲಿಯೋ ಲಸಿಕೆ ಸರಬರಾಜಾಗಿದೆ. ಜ. 31ರಂದು ಮೊದಲ ದಿನ ಬೂತ್ ಮಟ್ಟದ ಲಸಿಕಾಕೇಂದ್ರಗಳಲ್ಲಿಯೇ ಮಕ್ಕಳಿಗೆ ಪೋಲಿಯೋಲಸಿಕೆ ಹಾಕಲಾಗುವುದು. ಮೊದಲ ದಿನವೇಶೇ.96 ರಷ್ಟು ಸಾಧನೆ ಮಾಡುವ ಗುರಿ ಇದೆ.ಫೆ.1 ,2 ಹಾಗೂ 3 ರಂದು ಬಾಕಿ ಉಳಿದ ಎಲ್ಲಮಕ್ಕಳನ್ನೂ ಮನೆ, ಮನೆ ಭೇಟಿ ಮೂಲಕಗುರುತಿಸಿ, ಲಸಿಕೆ ಹಾಕಲಾಗುವುದು ಎಂದುಹೇಳಿದರು.
ಕೋವಿಡ್ ಲಸಿಕೆ ಶೇ.61 ಸಾಧನೆ:ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್‌ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ವಿರುದ್ಧದ ಲಸಿಕೆಯನ್ನು ಜ.16ರಿಂದ ಪ್ರಾರಂಭಮಾಡಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ7949 ಮಂದಿಗೆ ಲಸಿಕೆ ಹಾಕುವ ಮೂಲಕಶೇ.61ರಷ್ಟು ಸಾಧನೆ ಮಾಡಲಾಗಿದೆ ಎಂದುಆರ್‌ಸಿಎಚ್ ಅಧಿ ಕಾರಿ ಡಾ.ಕುಮಾರಸ್ವಾಮಿ
ಹೇಳಿದರು.
ಮೊದಲ ಹಂತದ ಲಸಿಕಾ ಅಭಿಯಾನದಲ್ಲಿಆರೋಗ್ಯ ಇಲಾಖೆ ಸಿಬ್ಬಂದಿ, ಖಾಸಗಿಅರೊಗ್ಯ ಇಲಾಖೆ ಸಿಬ್ಬಂದಿ, ಸಿಡಿಪಿಒ
ಮೇಲ್ವಿಚಾರಕರಿಗೆ, ಅಂಗನವಾಡಿ ಹಾಗೂಆಶಾ ಕಾರ್ಯಕರ್ತರು ಸೇರಿ ಒಟ್ಟು 13,104ಫಲಾನುಭವಿಗಳು ನೋಂದಣಿಯಾಗಿದ್ದಾರೆ.13,104 ಫಲಾನುಭವಿಗಳಲ್ಲಿ ಒಟ್ಟು 7949ಫಲಾನುಭವಿಗಳು ಲಸಿಕೆ ಪಡೆದಿದ್ದು, 5155ಲಾನುಭವಿಗಳು ಲಸಿಕೆ ಪಡೆಯುವುದು
ಬಾಕಿ ಇದೆ ಎಂದರು.
ಜಿಲ್ಲಾ ಸರ್ವೇಕ್ಷಣಾ ಧಿಕಾರಿಡಾ.ತುಳಸಿರಂಗನಾಥ್, ಡಾ.ಚಂದ್ರಶೇಖರ್‌ಕಂಬಾಳಿಮ… ಸೇರಿದಂತೆ ಆರೋಗ್ಯಇಲಾಖೆಯ ಅಧಿ ಕಾರಿಗಳು ಮತ್ತು ಸಿಬ್ಬಂದಿಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.