ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದ ಹುರುಳಿಕಾಯಿ
Team Udayavani, Jun 10, 2021, 10:43 PM IST
ಭರಮಸಾಗರ: ಕಳಪೆ ಹುರುಳಿಕಾಯಿ ಬಿತ್ತನೆ ಬೀಜ ಬಿತ್ತಿದ್ದರಿಂದ ಸುಮಾರು ಮೂರು ಎಕರೆಯಲ್ಲಿ ಬೆಳೆದ ಫಸಲಿನಲ್ಲಿ ಬರೀ ಬಳ್ಳಿಯಷ್ಟೇ ಬೆಳೆದಿತ್ತು. ಉದರಿಂದ ಬೇಸತ್ತ ರೈತರಿಬ್ಬರು ಇಡೀ ಹೊಲವನ್ನು ನಾಶಪಡಿಸಿರುವ ಘಟನೆ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.
ರೈತರಾದ ನಾಗರಾಜ್ ಎರಡು ಎಕರೆ ಹಾಗೂ ಕರಿಬಸಪ್ಪ ಒಂದೂಕಾಲು ಎಕರೆ ನೀರಾವರಿ ಜಮೀನಿನಲ್ಲಿ ಹುರುಳಿಕಾಯಿ ಬಿತ್ತನ ಮಾಡಲಾ ಗಿತ್ತು. ಅಶೋಕ ಸೀಡ್ಸ್ ಕಂಪನಿಗೆ ಸೇರಿದ ಹುರುಳಿಕಾಯಿ ಬೀಜಗಳನ್ನು ಸಿರಿಗೆರೆ ಗ್ರಾಮದ ಖಾಸಗಿ ಆಗ್ರೋ ಸೀಡ್ಸ್ ಒಂದರಲ್ಲಿ ಮಾರ್ಚ್ ತಿಂಗಳಲ್ಲಿ ತಲಾ 25 ಕೆಜಿ ತೂಕದ ಆರು ಬ್ಯಾಗ್, 15 ಕೆಜಿ ತೂಕದ 4 ಬ್ಯಾಗ್ ಬಿತ್ತನೆ ಬೀಜ ಖರೀದಿಸಲಾಗಿತ್ತು. ಪ್ರತಿ ವರ್ಷ ಹುರುಳಿಕಾಯಿ ಬೆಳೆದು ಅನುಭವ ಇದ್ದ ಈ ಇಬ್ಬರು ರೈತರು ಹೆಚ್ಚಿನ ಶ್ರಮ ಹಾಕಿದ್ದರು.
ಮಾರುಕಟ್ಟೆ ನಾಡಿಮಿಡಿತ ಅರಿತು ಸರಿಯಾಗಿ ಬಸವ ಜಯಂತಿ ವೇಳೆಗೆ ಕಾಯಿ ಕಟಾವಿಗೆ ಬರುವಂತೆ ತಯಾರಿಯನ್ನೂ ನಡೆಸಿದ್ದರು. ಎರಡೂ ಕಾಲು ತಿಂಗಳಲ್ಲಿ ಬಂದು ಹೋಗುವ ಈ ಬೆಳೆಗೆ ಒಂದು ಎಕರೆಗೆ ಬಿತ್ತನೆ ಬೀಜ, ಕಳೆ, ಔಷ ಧ ಸಿಂಪಡಣೆ, ಇತರೆ ಖರ್ಚುಗಳು ಸೇರಿ 15 ಸಾವಿರ ರೂ. ಖರ್ಚು ಮಾಡಲಾಗಿದೆ. ಇತರೆ ಕೆಲಸಗಳನ್ನು ನಿರ್ವಹಿಸಿರುವ ಖರ್ಚು ಸೇರಿದರೆ 20 ಸಾವಿರ ರೂ. ದಾಟುತ್ತದೆ. ಎಕರೆಗೆ 25 ರಿಂದ 30 ಕ್ವಿಂಟಲ್ ಕಾಯಿ ಇಳುವರಿ ಸಿಗಬೇಕು.
ಇಷ್ಟೆಲ್ಲಾ ಪ್ರಯತ್ನದ ಬಳಿಕ ಲಕ್ಷ ಲಕ್ಷ ಆದಾಯ ಗಳಿಸಬೇಕಾದ ರೈತರಿಗೆ ಹುರುಳಿಕಾಯಿ ಬೆಳೆ ಕಣ್ಣಲ್ಲಿ ನೀರು ತರಿಸಿದೆ. ಮಾರುಕಟ್ಟೆಯಲ್ಲಿ ಕೆಜಿ ಕಾಯಿಗೆ 100 ರಿಂದ 112 ರೂ. ದರವಿದೆ. ಬಳ್ಳಿಯಲ್ಲಿ ಹೂವು, ಕಾಯಿ ಇಲ್ಲದೇ ಇರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
ಉತ್ತಮ ಇಳುವರಿಗಾಗಿ ನಿತ್ಯ ಬಳ್ಳಿಗೆ ತಂಪು ವಾತಾವರಣ ಕಲ್ಪಿಸಲು ಹೆಗಲ ಮೇಲೆ ಕ್ಯಾನ್ ಹೊತ್ತು ನಿತ್ಯ ನೀರಿನ ಸಿಂಪಡಣೆ ಮಾಡಿದ್ದೇವೆ. ಮೂರು ದಿನಕ್ಕೊಮ್ಮೆ ಕೀಟನಾಶಕಗಳ ಸಿಂಪಡಣೆ, ಇತರೆ ಎಲ್ಲಾ ಕೆಲಸಗಳನ್ನು ತುಂಬಾ ಮುತುವರ್ಜಿಯಿಂದ ನಿರ್ವಹಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ರೈತ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ನಡುವೆ ಸಾಲ ಮಾಡಿ ಹುರುಳಿಕಾಯಿ ಬೆಳೆಯಲು ಹೋದರೆ ಕಳಪೆ ಬಿತ್ತನೆ ಬೀಜಕ್ಕೆ ತುತ್ತಾಗಿ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ನಮಗೆ ಆಗಿರುವ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಕನಿಷ್ಠ ಸೌಜನ್ಯಕ್ಕೂ ಜಮೀನಿಗೆ ಭೇಟಿ ನೀಡಿ ಕಂಪನಿಯವರು ಪರಿಶೀಲನೆ ನಡೆಸಲಿಲ್ಲ. ಕೃಷಿ ಇಲಾಖೆ ಮತ್ತು ಸರ್ಕಾರ ನಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕೊಡಿಸಬೇಕು.
ಕರಿಬಸಪ್ಪ, ಅಳಗವಾಡಿ ರೈತ
ಬಳ್ಳಿಯಲ್ಲಿ ಕಾಯಿ ಬಿಡದೇ ಇರುವ ಕುರಿತು ಆಗ್ರೋ ಸೀಡ್ಸ್ ಅಂಗಡಿ, ಅಶೋಕ ಸೀಡ್ಸ್ ಬಿತ್ತನೆ ಬೀಜ ಪೂರೈಸುವ ಕಂಪನಿಯ ಪ್ರಕಾಶ್ ಮತ್ತು ಮಧು ಎಂಬುವವರನ್ನು ಸಂಪರ್ಕಿಸಿದ್ದೇವೆ. ಅವರು ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಯಾರೊಬ್ಬರು ಜಮೀನಿಗೆ ಭೇಟಿ ನೀಡಿ ನಮ್ಮ ಕಷ್ಟ ಕೇಳಲಿಲ್ಲ. ಹೀಗಾಗಿ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಬಳ್ಳಿಯನ್ನು ನೋಡಲಾಗದೆ ನಾಶಪಡಿಸಿದ್ದೇವೆ. ಇಂತಹ ಕಳಪೆ ಬೀಜ ಪೂರೈಸುವ ಕಂಪನಿಗಳ ವಿರುದ್ಧ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು.
ನಾಗರಾಜ್, ಅಳಗವಾಡಿ ರೈತ
ಅಳಗವಾಡಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬಳ್ಳಿಯಲ್ಲಿ ಕಾಯಿ ಬಿಡದಿರುವುದನ್ನು ಪರಿಶೀಲಿಸಿ ಮಾದರಿಗಳನ್ನು ಕಂಪನಿಗೆ ಕಳುಹಿಸುತ್ತೇನೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ.
ಪ್ರಕಾಶ್, ಅಶೋಕ ಸೀಡ್ಸ್ ಬೀಜ ಪೂರೈಕೆದಾರರು, ಚಿತ್ರದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.