ಡಾ| ಸಿದ್ದಲಿಂಗಯ್ಯ ಜನಮಾನಸದ ಕವಿ: ಎಚ್. ಆಂಜನೇಯ
Team Udayavani, Jun 14, 2021, 11:01 PM IST
ಚಿತ್ರದುರ್ಗ: ಕವಿ ಸಿದ್ದಲಿಂಗಯ್ಯ ರಾಷ್ಟ್ರಕವಿಗಳ ಸಾಲಿಗೆ ಸೇರುವಂಥ ಮೇರುಕವಿಯಾಗಿದ್ದರು ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು. ನಗರದ ಐಯುಡಿಪಿ ಬಡಾವಣೆಯಲ್ಲಿನ ಆಸ್ಕರ್ ಶಾಲೆ ಸಭಾಂಗಣದಲ್ಲಿ ಜಯಣ್ಣ ಸ್ಮಾರಕ ಟ್ರಸ್ಟ್‌ನಿಂದ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ದಲಿಂಗಯ್ಯನವರು ಈಗಲೂ ಜನಮನದ ಕವಿಯಾಗಿಯೇ ಇದ್ದಾರೆ. ದೈಹಿಕವಾಗಿ ಇಲ್ಲದಿರುವ ಕಾರಣ ಅನೇಕರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದರು. ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ| ಸಿದ್ದಲಿಂಗಯ್ಯ ನಾಡಿನ ಖ್ಯಾತ ಕವಿ. ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ಜನಮುಖೀ ಸಾಹಿತಿಯಾಗಿ, ನೊಂದವರ ದನಿಯಾಗಿದ್ದ ಅವರ ಕ್ರಾಂತಿಕಾರಿ ಗೀತೆಗಳು ಶೋಷಿತರ ಹೃದಯಲ್ಲಿ ಸಂಚಲನ ಮೂಡಿಸುವ ಮೂಲಕ ದಲಿತ ಚಳವಳಿ ಯಶಸ್ವಿಯಾಗಲು ಪ್ರೇರೇಪಿಸುತ್ತಿದ್ದವು. ಹಿಂದಿನ ಸರ್ಕಾರದ ಅವ ಧಿಯಲ್ಲಿ ದಲಿತ ಪರ ಕಾನೂನು ರಚಿಸುವಾಗಲೂ ಅವರ ಸಲಹೆ ಪಡೆಯಲಾಗಿತ್ತು. ವಿಧಾನ ಪರಿಷತ್ ಸದಸ್ಯರಾದರೂ ಪರಿಷತ್ ಸಭೆಗೆ ಹೋಗದಂತೆ ಪೊಲೀಸರು ಒಮ್ಮೆ ತಡೆದಿದ್ದರು.
ಆಗಲೂ ಮೌನವಾಗಿದ್ದರು. ಸದಸ್ಯರೆಂದು ತಿಳಿದ ನಂತರ ಒಳಗೆ ಬಿಟ್ಟಿದ್ದರು. ಅನೇಕ ನೋವು ಅನುಭವಿಸಿದರೂ ಯಾರ ಬಗ್ಗೆಯೂ ಹಗುರವಾಗಿ ಮಾತನಾಡದ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸ್ಮರಿಸಿದರು.
ಸಾಹಿತಿ ಪ್ರೊ| ಎಚ್. ಲಿಂಗಪ್ಪ ಮಾತನಾಡಿ, ಸಿದ್ದಲಿಂಗಯ್ಯ ಸಾಹಿತ್ಯದ ಮೂಲಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ವಿಚಾರಗಳ ಬುತ್ತಿಯನ್ನು ನಾಡಿನ ಜನರಿಗೆ ಸಮರ್ಪಿಸಿದ್ದಾರೆ. ಅಂಬೇಡ್ಕರ್ ನಂತರ ಹೆಚ್ಚು ಸಾಹಿತ್ಯ ಓದಿ ತಿಳಿದುಕೊಂಡವರಲ್ಲಿ ಅವರೂ ಒಬ್ಬರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಚಿಂತಕ ಜೆ. ಯಾದವ ರೆಡ್ಡಿ, ಡಾ. ಕೆ.ಆರ್.ಜೆ ರಾಜಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.