ಕರಡಿ ಹಾವಳಿಗೆ ರೈತರು ಕಂಗಾಲು
15 ದಿನಗಳಿಂದ ತೋಟಗಳಲ್ಲಿ ಅಲೆದಾಟ
Team Udayavani, Jan 29, 2021, 3:33 PM IST
ಹೊಳಲ್ಕೆರೆ: ಕಾಡಿನಿಂದ ಆಹಾರ ಅರಸುತ್ತ ಕರಡಿಯೊಂದು ಕಳೆದ 15 ದಿನಗಳಿಂದ ತೋಟಗಳಲ್ಲಿ ಅಲೆದಾಡುತ್ತಿರುವುದು ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ.
ತಾಲೂಕಿನ ಶಿವಗಂಗ ಮಹದೇವರಪುರ ಗ್ರಾಮದ ರಾಮೇಶ್ವರ ದೇವಸ್ಥಾನದ ಸೇರಿದಂತೆ ಸುತ್ತಮುತ್ತಲಿರುವ ಹತ್ತಾರು ಅಡಿಕೆ ತೋಟಗಳಲ್ಲಿ
ಕರಡಿ ವಾಸಮಾಡತೊಡಗಿದೆ. ಕಳೆದ ತಿಂಗಳು ಶಿವಗಂಗ ಅಸುಪಾಸು ಚಿರತೆಯೊಂದು ತೋಟಗಳಲ್ಲಿ ಕಾಣಿಸಿಕೊಂಡಿತ್ತು. ಚಿರತೆ ಸದ್ಯ ತೋಟಗಳಲ್ಲಿ ಕಾಣಿಸಿಕೊಳ್ಳದೆ ಪಕ್ಕದಲ್ಲಿ ಗುಡ್ಡಬೆಟ್ಟಗಳಲ್ಲಿ ಸೇರಿಕೊಂಡಿರುವ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.
ಕರಡಿ ಕೃಷಿ ಕೆಲಸಕ್ಕೆ ತೆರಳುವ ರೈತರ ಮೇಲೆ ದಾಳಿ ಮಾಡುವ ಆಪಾಯಕಾರಿ ವನ್ಯಮೃಗ. ಆಹಾರಕ್ಕಾಗಿ ಎಲ್ಲೆಡೆ ನಿರಾತಂಕವಾಗಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡು ರೈತರಿಗೆ ನಿತ್ಯ ಕೃಷಿ ಕಾಯಕ ಕೈಗೊಳ್ಳುವುದು ಸಮಸ್ಯೆ ಎನ್ನಲಾಗಿದೆ.
ವಿಫಲ ದಾಳಿ: ಶಿವಗಂಗ ಹಾಗೂ ಮಹದೇವಪುರದ ರಾಮೇಶ್ವರ ದೇವಸ್ಥಾನದ ಸುತ್ತಲ ತೋಟಗಳಲ್ಲಿ, ಬಂಡಿ ಜಾಡುಗಳಲ್ಲಿ, ಮಾಗಿ ಹೊಲಗಳಲ್ಲಿ, ಹಣ್ಣಿನ ಗಿಡಗಳ ಪೊದೆಗಳಲ್ಲಿ ಕರಡಿ ಕಾಣಿಸಿಕೊಳ್ಳುತ್ತಿದೆ. ರಾಮೇಶ್ವರ ದೇವರಸ್ಥಾನದ ಹತ್ತಿರ ರೈತರು ವಿಶ್ರಾಂತಿಗೆ ನಿಲ್ಲುವುದು ಸಹಜ. ಕರಡಿಯ ಇರುವಿಗೆ ಅರಿವಿಲ್ಲದೆ ಹೋದಾಗ ರೈತ ಮೇಲೆ ದಾಳಿಗೆ ಮುಂದಾಗಿದ್ದು, ಯಾವುದೇ ಅಪಾಯ ಎದುರಾಗಿಲ್ಲ. ಕರಡಿ ತೋಟಗಳಲ್ಲಿ ಕೆಲಸ ಮಾಡುವಾಗ ರೈತರು ಸಿಕ್ಕಲ್ಲಿ ದಾಳಿ ನಡೆಸುವ ಆತಂಕದ ಸ್ಥಿತಿ ರೈತರದ್ದು,
ವಿದ್ಯುತ್ ವೇಳೆ ಬದಲಾವಣೆಗೆ ರೈತರ ಆಗ್ರಹ: ಶಿವಗಂಗ ಮಹದೇವಪುರ ಹತ್ತಿರದ ನೂರಾರು ಎಕರೆ ಪ್ರದೇಶದಲ್ಲಿನ ಅಡಿಕೆ ತೋಟಕ್ಕೆ ರಾತ್ರಿ ಹೊತ್ತು ಮೂರು ಗಂಟೆ ವಿದ್ಯುತ್ ಪೂರೈಕೆ ಹಿನ್ನೆಲೆ ಬೆಸ್ಕಾಂ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದು, ಬೇಸಿಗೆ ಹಿನ್ನೆಲೆ ತೋಟಗಳಿಗೆ ನೀರಿನ ಅಗತ್ಯತೆ ಹೆಚ್ಚಾಗಿದೆ. ಹಗಲು ರಾತ್ರಿ ಕರಡಿ ಕಾಟವಿದ್ದು, ರಾತ್ರಿ ಹೊತ್ತು ಕರಡಿ ರೈತರ ಸಿಕ್ಕಲ್ಲಿ ದಾಳಿಗೆ ಮಾಡಬಹುದು. ಹಾಗಾಗಿ ಹಗಲು ವಿದ್ಯುತ್ ನೀಡಬೇಕೆಂದು ರೈತರ ಒತ್ತಾಯ.
ಅರಣ್ಯ ಇಲಾಖೆ ನಿರ್ಲಕ್ಷ್ಯ : ಕಳೆದ 15 ದಿನಗಳಿಂದ ಕರಡಿ ತಾಲೂಕಿನ ಶಿವಗಂಗ, ಮಹದೇವಪುರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸುವ ಮಾಹಿತಿಯನ್ನು ಸ್ಥಳೀಯ ಅರಣ್ಯ ಇಲಾಖೆಗೆ ನೀಡಿದ್ದರೂ, ಕರಡಿ ಪತ್ತೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಎಸ್.ವೇದಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.