ತಿಪ್ಪೇರುದ್ರಸ್ವಾಮಿ ದೇವಾಲಯ ಇಂದಿನಿಂದ ಓಪನ್
Team Udayavani, Jul 5, 2021, 10:51 PM IST
ನಾಯಕನಹಟ್ಟಿ: ಕೊರೊನಾದಿಂದ ಮುಚ್ಚಿದ್ದ ಇಲ್ಲಿನ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ದೇವರ ದರ್ಶನ ಆರಂಭವಾಗಲಿದೆ. ದೀರ್ಘ ಕಾಲ ಮುಚ್ಚಿದ್ದರಿಂದ ಸ್ವತ್ಛತಾ ಕಾರ್ಯ ಆರಂಭಗೊಂಡಿದೆ. ಏ. 22 ರಂದು ಧಾರ್ಮಿಕ ದತ್ತಿ ಇಲಾಖೆ ಕೊರೊನಾ ಕಾರಣದಿಂದ ದೇವಾಲಯವನ್ನು ಮುಚ್ಚು ವಂತೆ ಆದೇಶಿಸಿತ್ತು.
ದೇವಾಲಯದ ಗರ್ಭಗುಡಿಯಲ್ಲಿ ದೇವರಿಗೆ ನಿತ್ಯಪೂಜೆ ನೆರವೇರುತ್ತಿತ್ತು. ಜತೆಗೆ ಭಕ್ತರಿಲ್ಲದೆ ರುದ್ರಾ ಭಿಷೇಕ ಜರುಗಿಸಲಾಗುತ್ತಿತ್ತು. ದೇವಾಲಯದ ಆರಂಭಕ್ಕೆ ದೇವಾಲಯದ ಸಿಬ್ಬಂದಿ ಸ್ವತ್ಛತಾ ಕಾರ್ಯ ಕೈಗೊಂಡಿದ್ದಾರೆ. ದೇವಾಲಯದ ಹೊರಾಂಗಣದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ. ಒಳಾಂಗಣವನ್ನು ಸೋಪ್ ಪೌಡರ್, ನಾಯಿಲ್ ಬಳಸಿ ಸ್ವತ್ಛಗೊಳಿಸಲಾಗಿದೆ. ಮೂರನೇ ಹಂತದ ಅನ್‌ಲಾಕ್ ನಿಯಮಗಳಂತೆ ಪ್ರತಿಯೊº ಭಕ್ತರೂ ಮಾಸ್ಕ್ ಹಾಕಿರಬೇಕು. ದೇವಾಲಯದ ವತಿಯಿಂದ ಭಕ್ತರ ಕೈಗಳಿಗೆ ಸ್ಯಾನಿಟೈಸ್ ಮಾಡಲಾಗುವುದು.
ಗುಂಪಾಗಿ ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲ. ಒಬ್ಬರಾದ ನಂತರ ಒಬ್ಬರಂತೆ ಸರತಿ ಸಾಲಿನಲ್ಲಿ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು. ದೇವಾಲಯದಲ್ಲಿ ತೀರ್ಥ-ಪ್ರಸಾದ, ದಾಸೋಹ ಇರುವುದಿಲ್ಲ. ದರ್ಶನ, ವಾಹನ ಪೂಜೆ ಹಾಗೂ ಮಂಗಳಾರತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಒಳಗೆ ಹಾಗೂ ಹೊರಗೆ ಭಕ್ತರಿಗೆ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡಲಾಗುವುದು.
ಲಾಕ್‌ಡೌನ್ ಸಮಯದಲ್ಲಿ ದೇವಾಲಯದ ಹೊರಗೆ ಕೈಮುಗಿದು ಬಾಗಿಲಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುತ್ತಿದ್ದ ಭಕ್ತರಿಗೆ ಇದೀಗ ಸಂತಸವಾಗಿದೆ. ಕೊರೊನಾ ಕಾಲದಲ್ಲಿಯೂ ಇಲ್ಲಿನ ಐತಿಹಾಸಿಕ ತಿಪ್ಪೇರುದ್ರಸ್ವಾಮಿ ಜಾತ್ರೆ ಯಾವುದೇ ಅಡೆತಡೆಗಳಿಲ್ಲದೆ ಜರುಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.