ಇಂದ್ರಿಯ ನಿಗ್ರಹ ಇಲ್ಲದಿದ್ರೆ ಅಧಃಪತನ


Team Udayavani, Aug 6, 2021, 6:37 PM IST

6-15

ಹೊಸದುರ್ಗ: ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಮಾನವ ಅಧಃಪತನ ಹೊಂದುತ್ತಾನೆ. ದೊಡ್ಡ ಸ್ಥಾನದಲ್ಲಿರುವವರು ಇದಕ್ಕೆ ಉದಾಹರಣೆಯಾಗಿದ್ದಾರೆ. ಇಂದು ದೇವರು ಪ್ರದರ್ಶನದ ಸರಕಾಗುತ್ತಿದ್ದು, ಇದರಿಂದಾಗಿ ವ್ಯಕ್ತಿಯ ಮತ್ತು ಸಮಾಜದ ಆರೋಗ್ಯ ಹದಗೆಡುತ್ತಿದೆ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಐದನೇ ದಿನವಾದ ಗುರುವಾರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಕುಲ, ಛಲ, ರೂಪ, ಯೌವನ, ಅಧಿಕಾರ, ತಪಸ್ಸು, ಧನ ಮದಗಳು ಮನುಷ್ಯನನ್ನು ದಿಕ್ಕು ತಪ್ಪಿಸುತ್ತವೆ. ಅಲ್ಲಮ ಮಾತು, ಮತಿಗೆ ನಿಲುಕುವವರಲ್ಲ. “ವಾಕು ಪಾಕವಾದಡೇನು ಮನ ಪಾಕವಾಗದನ್ನಕ್ಕ’ ಎನ್ನುವ ಮೂಲಕ ಕೇವಲ ವಾಗಾjಲದಿಂದ ಶಿವಪಥಿಕನಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಆದರ್ಶ ಬದುಕಿಗೆ ಬೇಕಾದ ವಿಚಾರಗಳು ಇವರ ವಚನಗಳಲ್ಲಿ ಹೇರಳವಾಗಿವೆ.

ಮನ ಮತ್ತು ಮಾತು ಎರಡೂ ಪಕ್ವಗೊಳ್ಳಬೇಕು. ತಮ್ಮನ್ನು ತಾವು ಅರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಿವಚೇತನಕ್ಕೆ ಹುಟ್ಟು-ಸಾವುಗಳಿಲ್ಲ. ಆತ್ಮನೇ ಪರಮಾತ್ಮನೆಂಬ ಭಾವವನ್ನು ಬೆಳೆಸಿಕೊಳ್ಳಬೇಕು ಎನ್ನುವ ಅವರ ನುಡಿಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದರು. ಅಲ್ಲಮ ಬಯಲೊಡಲಿಗ. ವಯಸ್ಸು, ಅನುಭವದಿಂದ ಶರಣರಲ್ಲೇ ಹಿರಿಯರು. ಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ, ಮುಕ್ತಾಯಕ್ಕ ಮುಂತಾದ ಸಾಧಕರಿಗೆ ಮಾರ್ಗದರ್ಶನ ಮಾಡಿದ ಮಹಾನ್‌ ಗುರು. ಅಲ್ಲಮನ ಮಾತುಗಳಲ್ಲಿ ಕಠೊರತೆ, ವಿಡಂಬನೆ, ವೈಚಾರಿಕತೆ, ವೈಜ್ಞಾನಿಕತೆ, ಅನುಭಾವಿಕ ನಿಲುವು, ಸರಳತೆ, ಜೀವನ ಸಂದೇಶ, ಬೆರಗು, ಬೆಡಗುಗಳಿವೆ. ಅಲ್ಲಮರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಅಲ್ಲಮರು ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಅನುಭಾವಗಳಿಂದ ಜಗತ್ತಿಗೆ ಕವಿದಿದ್ದ ಕಾರ್ಗತ್ತಲನ್ನು ಹೊಡೆದೋಡಿಸಿ ನೈಜ ಬೆಳಕನ್ನು ಕರುಣಿಸಿದ ಮಹಿಮಾಪುರುಷ ಹಾಗೂ ನಿಜ ಜಂಗಮ. ಅವರೊಬ್ಬ ಅದ್ಭುತ ವ್ಯಕ್ತಿತ್ವದ ಮಹಾನ್‌ ಚೇತನ. ಸ್ಥಾವರವನ್ನು ನಿರಾಕರಿಸಿ ಜಂಗಮತ್ವವನ್ನು ಅಪ್ಪಿಕೊಂಡವರು ಎಂದು ಬಣ್ಣಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ “ಅಲ್ಲಮಪ್ರಭುದೇವರು’ ವಿಷಯದ ಕುರಿತು ಕಾರವಾರದ ಡಾ| ಶ್ರೀದೇವಿ ಕೆರೆಮನೆ ಮಾತನಾಡಿ, 12ನೇ ಶತಮಾನದ ಶರಣರಲ್ಲಿ ಬಹಳ ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ಅಲ್ಲಮಪ್ರಭುದೇವರು. ಶಿಕಾರಿಪುರ ತಾಲೂಕಿನ ಬಳ್ಳಿಗಾವಿ ಇವರ ಹುಟ್ಟೂರು. ಇವರ ಜೀವನ ಕ್ರಮದ ಬಗೆಗೆ ವಿಭಿನ್ನ ಐತಿಹ್ಯಗಳಿವೆ. ವೀರಶೈವ ಸಾಹಿತ್ಯದಲ್ಲಿ ಮುಂಬರುವ ಒಬ್ಬನೇ ಒಬ್ಬ ಸಾಹಿತಿಯೂ ಅಲ್ಲಮಪ್ರಭುವನ್ನು ಉಲ್ಲೇಖೀಸದೇ ಬಿಟ್ಟಿಲ್ಲ. ಅಷ್ಟರಮಟ್ಟಿಗೆ ಅಲ್ಲಮ ಕನ್ನಡ ಸಾಹಿತ್ಯವನ್ನು ಆವರಿಸಿಕೊಂಡಿದ್ದಾರೆ.

ಹರಿಹರನ “ಪ್ರಭುದೇವರ ರಗಳೆ’, ಚಾಮರಸನ “ಪ್ರಭುಲಿಂಗ ಲೀಲೆ;, ಅಲ್ಲಮನ ಬಗ್ಗೆ ಸಾಕಷ್ಟು ವಿವರ ಒದಗಿಸುತ್ತವಾದರೂ ಅವನನ್ನು ಮನುಷ್ಯ ಎಂದು ಒಪ್ಪಿಕೊಳ್ಳದೆ ಶಿವಚೇತನವನ್ನಾಗಿಸಿ, ಪವಾಡ ಮಾಡುವ ಸಿದ್ಧ ಪುರುಷನನ್ನಾಗಿ ತೋರಿಸಿದ್ದಾರೆ. ಅಲ್ಲಮನ ವಚನಗಳನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಬಹುದು. ಅವುಗಳಿಗೆ ಯಾವುದೇ ನಿರ್ದಿಷ್ಟ ಚೌಕಟ್ಟಿಲ್ಲ ಎಂದು ಹೇಳಿದರು. ವಚನಗಳನ್ನು ಅರ್ಥೈಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಅಲ್ಲಮ ಒಂದು ರೀತಿಯಲ್ಲಿ ಕನ್ನಡಿ ಇದ್ದಂತೆ. ಅದರಲ್ಲಿ ಯಾರು ಮುಖವನ್ನು ನೋಡಿಕೊಳ್ಳುತ್ತಾರೋ ಅವರ ಮುಖ ಕಾಣುವುದು. ಅಲ್ಲಮನನ್ನು ಅರ್ಥ ಮಾಡಿಕೊಂಡರೆ ನಮ್ಮನ್ನು ನಾವೇ ಅರ್ಥ ಮಾಡಿಕೊಂಡಂತೆ ಎಂದರು.

ತರೀಕೆರೆ ತಾಲೂಕು ಕರಕುಚ್ಚಿಯ ಎನ್‌.ವಿ. ಅರುಣ್‌ ಕುಮಾರ್‌ ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ, ಎಚ್‌.ಎಸ್‌. ನಾಗರಾಜ್‌ ವಚನಗೀತೆ ಪ್ರಸ್ತುತಪಡಿಸಿದರು. ಶರಣ್‌ ತಬಲಾ ಸಾಥ್‌ ನೀಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

ಟಾಪ್ ನ್ಯೂಸ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ

KJ-Goerge

ತೋಟದ ಮನೆಗಳಿಗೆ ಹಗಲು ತ್ರಿಫೇಸ್‌, ರಾತ್ರಿ ಸಿಂಗಲ್‌ ಫೇಸ್‌ ವಿದ್ಯುತ್‌: ಸಚಿವ ಜಾರ್ಜ್‌

K-J-George

ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.