ಸರ್ಕಾರದಿಂದ ಮಾಧ್ಯಮ ಸ್ವಾತಂತ್ರ್ಯ ಧಕ್ಕೆ
ಸಾಹಿತಿ, ಪತ್ರಕರ್ತರ ಮೇಲೆ ದೇಶದ್ರೋಹ ಪ್ರಕರಣ ದಾಖಲು ಸರಿಯಲ್ಲ: ಬಂಜಗೆರೆ
Team Udayavani, Feb 2, 2021, 3:58 PM IST
ಚಿತ್ರದುರ್ಗ: ಜನವರಿ 26 ರಂದು ನಡೆದ·ಘಟನೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಆಗಿಲ್ಲ.ಆದರೆ ಪ್ರಧಾನಿ ತಮ್ಮ ಮನ್ ಕೀ ಬಾತ್‌ನಲ್ಲಿತ್ರಿವರ್ಣ ಧ್ವಜಕ್ಕೆ ಆದ ಅವಮಾನದಿಂದ ನೋವಾಗಿದೆಎಂದಿದ್ದಾರೆ.
ಇದು ಪುಂಡರು ಮಾಡುವ ದುಷ್ಕೃತ್ಯಕ್ಕೆಅ ಧಿಕೃತ ಮುದ್ರೆ ಒತ್ತಿದಂತೆ ಅನ್ನಿಸುತ್ತದೆ ಎಂದುಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕಳೆದ ಎರಡು ತಿಂಗಳಿನಿಂದ ರೈತರುಚಳಿಯನ್ನೂ ಲೆಕ್ಕಿಸದೆ ಪ್ರತಿಭಟಿಸುತ್ತಿದ್ದಾರೆ.ಸಂಧಾನದ ಕೆಲಸ ಮಾಡುವ ಬದಲು ಕುತಂತ್ರದಿಂದಅವರ ಹೆಸರು ಕೆಡಿಸುವ ಕೆಲಸ ಮಾಡಲಾಗುತ್ತಿದೆಎಂದರು.
ಸಾಹಿತಿ, ಪತ್ರಕರ್ತರ ಮೇಲೆ ದೇಶದ್ರೋಹದಪ್ರಕರಣಗಳನ್ನು ದಾಖಲಿಸುವುದು ಹೆಚ್ಚಾಗುತ್ತಿದೆ.ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಜಾಪ್ರಭುತ್ವಹಾಗೂ ಸರ್ಕಾರಕ್ಕೆ ಇದು ಶ್ರೇಯಸ್ಸು ತರುವುದಿಲ್ಲ.ಮಾಧ್ಯಮ ಸ್ವಾತಂತ್ರ ಹತ್ತಿಕ್ಕುವುದು ದೇಶದಸ್ವಾತಂತ್ರವನ್ನೇ ಹತ್ತಿಕ್ಕಿದಂತೆ ಎಂದು ಬೇಸರವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆಹಿರಿಯ ಪತ್ರಕರ್ತ, ನೀರಾವರಿ ಹೋರಾಟಗಾರಜಾತ್ಯಾತೀತ ವ್ಯಕ್ತಿತ್ವದ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರುಸೂಕ್ತ ಅಭ್ಯರ್ಥಿಯಾಗಿದ್ದಾರೆ. ಸಾಧ್ಯವಾದರೆಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಎಂದುಬಂಜಗೆರೆ ಮನವಿ ಮಾಡಿದರು.
ಅ ಧಿಕಾರಶಾಹಿಗಳ ಬಾಲಂಗೋಚಿಗಳಾಗಿಕನ್ನಡದ ಕೆಲಸ ಮಾಡುವವರನ್ನು ಎಂದಿಗೂಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಬಾರದು. ಕನ್ನಡಕ್ಕೆ ಧಕ್ಕೆ ಬಂದಾಗ ಕನ್ನಡಸಾಹಿತ್ಯ ಪರಿಷತ್ ಪ್ರತಿಭಟಿಸುವ ಕೆಲಸ ಮಾಡಬೇಕು.ಜನಪರ, ಕನ್ನಡಪರ ಕಳಕಳಿಯುಳ್ಳವರನ್ನುಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂರಾಜ್ಯಾಧ್ಯಕ್ಷರನ್ನಾಗಿ ಆಯ್ಕೆಮಾಡಬೇಕಾಗಿದೆಎಂದರು.
ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ,ಹೋರಾಟದ ಹಾದಿಯಲ್ಲಿ ಬಂದಿರುವ ಚಿಕ್ಕಪ್ಪನಹಳ್ಳಿಷಣ್ಮುಖಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷರಾಗಬೇಕು ಎನ್ನುವುದು ನಮ್ಮೆಲ್ಲರ ಆಸೆ.ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಸುವುದೇಸರಿಯಲ್ಲ. ಹೊಸಪೇಟೆಯಲ್ಲಿ ಕೆಲ ಸಂಸದರು,ಶಾಸಕರು ಸೇರಿ ಇಂತಹವರನ್ನೇ ಕಸಾಪ ಅಧ್ಯಕ್ಷರನ್ನಾಗಿಮಾಡಬೇಕೆಂಬ ಠರಾವು ಹೊರಡಿಸಿರುವುದುಅತ್ಯಂತ ಖಂಡನೀಯ. ಕನ್ನಡ ಸಾಹಿತ್ಯ ಪರಿಷತ್‌ಸ್ವತಂತ್ರ ನಿರ್ಣಯಗಳನ್ನು ಕೈಗೊಳ್ಳಬೇಕು.ರಾಜಕೀಯ ಇಲ್ಲಿ ಪ್ರವೇಶಿಸಬಾರದು. ಕಸಾಪಕೇವಲ ಕನ್ನಡ ಭಾಷೆಗೆ ಸೀಮಿತವಲ್ಲ. ಕನ್ನಡಿಗರಅಸ್ತಿತ್ವವನ್ನು ರಕ್ಷಿಸಬೇಕು ಎಂದು ತಿಳಿಸಿದರು.
ಸಾಹಿತಿ ಡಾ| ಲೋಕೇಶ್ ಅಗಸನಕಟ್ಟಿಮಾತನಾಡಿ, ನಾಯಕತ್ವದ ಗುಣ, ಜಾತ್ಯಾತೀತಮನಸ್ಥಿತಿ, ಹೋರಾಟದ ಕಿಚ್ಚಿರುವಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಅವರುಈ ಅವ ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷರಾಗಬೇಕು. ಏಕಪಕ್ಷೀಯ ನಿರ್ಧಾರಗಳನ್ನುತೆಗೆದುಕೊಳ್ಳುವವರು ಇರಬಾರದು. ಕೆಲವರಿಗೆಅ ಧಿಕಾರದ ಹಂಬಲವಿದೆ. ಇನ್ನು ಕೆಲವರು ಇರುವಅ ಧಿಕಾರವನ್ನು ಮುಂದುವರೆಸಿಕೊಂಡು ಹೋಗುವದುರಾಸೆಯಲ್ಲಿದ್ದಾರೆ ಎಂದರು.
ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷಜೆ.ಯಾದವ ರೆಡ್ಡಿ ಮಾತನಾಡಿ, ಮುಕ್ತಮನಸ್ಸಿನವರು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್‌ಅಧ್ಯಕ್ಷರಾಗಬೇಕು.ಅಖೀಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವದೊಡ್ಡರಂಗೇಗೌಡರು ಕನ್ನಡ ದ್ರೋಹದ
ಮಾತುಗಳನ್ನಾಡಿರುವುದು ಶೋಭೆಯಲ್ಲ.ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಲುಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಅವರಂಥವರು ನೇತೃತ್ವವಹಿಸಿಕೊಳ್ಳಬೇಕು ಎಂದು ಆಶಿಸಿದರು.
ಕಸಾಪ ಮಾಜಿ ಅಧ್ಯಕ್ಷ ಕೆ.ಎಂ. ವೀರೇಶ್,ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ,ರೈತ ಮುಖಂಡ ಹೊರಕೇರಪ್ಪಮಾತನಾಡಿದರು.ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ,ಆರ್. ಶೇಷಣ್ಣಕುಮಾರ್, ಗೌನಹಳ್ಳಿ ಗೋವಿಂದಪ್ಪಸುದ್ದಿಗೋಷ್ಠಿಯಲ್ಲಿದ್ದರು.
ಓದಿ : ಗದಗ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಕಂಪ್ಯೂಟರ್ ಆಪರೇಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.