ಅನ್ನದಾತರ ಸರ್ವನಾಶಕ್ಕೆ ಕೇಂದ್ರ ಹುನ್ನಾರ
ಎಪಿಎಂಸಿ ಉಳಿದರಷ್ಟೇ ರೈತರಿಗೆ ಕನಿಷ್ಟ ಬೆಂಬಲ ಬೆಲೆ ಸಿಗುತ್ತೆ : ಚಿಂತಕ ಶಿವಶಂಕರ್ ಅಭಿಪ್ರಾಯ
Team Udayavani, Feb 15, 2021, 4:12 PM IST
ಚಿತ್ರದುರ್ಗ: ಪ್ರಧಾನಿ ಮೋದಿ ಜಾರಿಗೆ ತಂದಿರುವ ರೈತ ವಿರೋ ಧಿ ಕಾಯ್ದೆಗಳನ್ನು ಧಿಕ್ಕರಿಸಿ ದೆಹಲಿಯಲ್ಲಿ ಲಕ್ಷಾಂತರ ರೈತರು ಚಳವಳಿ ನಡೆಸುತ್ತಿದ್ದಾರೆ. ಇದನ್ನು ಇಡೀ ದೇಶದ ರೈತರು ಬೆಂಬಲಿಸಬೇಕು ಎಂದು ಚಿಂತಕ ಶಿವಶಂಕರ್ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ರೈತ ಭವನದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ರೈತ ಚೇತನ ಪ್ರೊ| ಎಂ.ಡಿ. ನಂಜುಂಡಸ್ವಾಮಿ ನೆನಪು’ ರೈತ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಳುವ ಸರ್ಕಾರಗಳು ಒಂದು ದಿನ ರೈತ ವಿರೋಧಿ ಮರಣ ಶಾಸನ ತರುತ್ತವೆ ಎನ್ನುವುದನ್ನು ರೈತ ಮುಖಂಡ ಪ್ರೊ| ಎಂ.ಡಿ. ನಂಜುಂಡಸ್ವಾಮಿ ಮನಗಂಡಿದ್ದರು. ಜಾಗತೀಕರಣ
ರೈತರಿಗೆ ಮಾರಕವಾಗುತ್ತದೆ ಎಂದು ಗ್ಯಾಟ್ ಒಪ್ಪಂದವನ್ನು ನಂಜುಂಡಸ್ವಾಮಿ ಬಲವಾಗಿ ವಿರೋಧಿಸಿದ್ದರು ಎಂದು ಸ್ಮರಿಸಿದರು.
ಎಪಿಎಂಸಿ ಉಳಿದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತದೆ. ನಮ್ಮಲ್ಲಿ ನೆಲ, ಜಲ, ನೈಸರ್ಗಿಕ ಸಂಪತ್ತು ಇದೆ. ಇವೆಲ್ಲವನ್ನು ಬೇರೆ ದೇಶಗಳಿಗೆ ಮಾರಾಟ ಮಾಡಿ ಶ್ರೀಮಂತ ದೇಶಗಳಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಂಡು ರೈತರನ್ನು ಸರ್ವನಾಶ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಆಹಾರ ತಜ್ಞ ಬೆಂಗಳೂರಿನ ಕೆ.ಸಿ. ರಘು ಮಾತನಾಡಿ, ಎಲ್ಲಿ ಬೇಕಾದರೂ ಚಳವಳಿ ಮಾಡುವಂತಿಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿರುವುದು ನಿಜಕ್ಕೂ ರೈತ ಚಳವಳಿಯನ್ನು ಹತ್ತಿಕ್ಕುವಂತಿದೆ. ವಿದ್ಯಾವಂತರಿಂದ ಆದಷ್ಟು ಅನ್ಯಾಯ ಅವಿದ್ಯಾವಂತರಿಂದ ಆಗುವುದಿಲ್ಲ
ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿಕರಣ ಈಗ ರೈತರ ಮುಂದಿರುವ ದೊಡ್ಡ ಸವಾಲು. ಸಣ್ಣ ರೈತರಿಗೆ ಬ್ಯಾಂಕಿನಲ್ಲಿ ಸಾಲ ಸಿಗುತ್ತಿಲ್ಲ. ದೇಶದ ರೈತರನ್ನು ದಿಕ್ಕುತಪ್ಪಿಸುವ
ಕೆಲಸ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರ ಇರುವ ಎಪಿಎಂಸಿಗಳನ್ನು ಬಲಪಡಿಸಬೇಕಿದೆ. ಜಾನುವಾರುಗಳು ರೈತನ ಆಸ್ತಿ. ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತನಿಗೆ ಇನ್ನಷ್ಟು ಹೊರೆಯಾಗುತ್ತದೆ. ರೈತನ ಬೆವರಿಗೆ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ಪೌಷ್ಟಿಕಾಂಶವುಳ್ಳ ಮೀನು, ಮೊಟ್ಟೆ, ಮಾಂಸ ನೀಡುವ ಬದಲು ಜಾಮೂನು ತಿನ್ನಿಸಲು ಹೊರಟಿದೆ. ಇದರ ವಿರುದ್ಧ ಮೊದಲು ರೈತರು ಜಾಗೃತರಾಗಬೇಕಿದೆ
ಎಂದು ಕಿವಿಮಾತು ಹೇಳಿದರು.
ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ. ಯಾದವ ರೆಡ್ಡಿ, ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್, ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಎಪಿಎಂಸಿ ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು ಮಾತನಾಡಿದರು. ರೈತ ಸಂಘದ
ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ, ರೈತ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಕೆ.ಸಿ. ಹೊರಕೇರಪ್ಪ, ಎಂ.ಆರ್. ಪುಟ್ಟಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಆಡನೂರು ಕೃಷ್ಣಮೂರ್ತಿ, ಧನಂಜಯ, ಕುರ್ಕಿ ಸಿದ್ದಮ್ಮ, ಕಲ್ಪನಾ, ಮುದ್ದಾಪುರ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಪೀರ್ ಮತ್ತಿತರರು ಇದ್ದರು.
ಓದಿ : ಕೋವಿಡ್ ನಿರ್ಬಂಧಿತ ಪ್ರದೇಶದಲ್ಲಿ ಪೋಸ್ಟ್‌ಮ್ಯಾನ್‌ಗಳ ಸೇವೆ ಅಪಾರ: ಸೂಲಿಬೆಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.