ಮಳೆ ನೆರಳಿನ ಪ್ರದೇಶಕ್ಕೆ ಸಿಕ್ಕೀತೇ ಆಸರೆ?
20ಕ್ಕೆ ಕಣಕುಪ್ಪೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
Team Udayavani, Feb 18, 2021, 4:10 PM IST
ಮೊಳಕಾಲ್ಮೂರು: “ಮಳೆಯ ನೆರಳಿನ ಪ್ರದೇಶ’ ಎಂದೇ ಹೆಸರಾಗಿರುವ ಬರದ ಸೀಮೆ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ
ಫೆ. 20 ರಂದು ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ವಾಸ್ತವ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 135 ಕಿ.ಮೀ,
ಮೊಳಕಾಲ್ಮೂರು ತಾಲೂಕು ಕೇಂದ್ರದಿಂದ 35 ಕಿ.ಮೀ ಹಾಗೂ ಪಕ್ಕದ ಆಂದ್ರಪ್ರದೇಶದಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ, ಬಳ್ಳಾರಿ
ಗಡಿಗೆ ತಾಗಿಕೊಂಡಿರುವ ಕಣಕುಪ್ಪೆ ಗ್ರಾಮದ ಮೂಲ ಸೌಕರ್ಯ ವಂಚಿತವಾಗಿದೆ. ಜಿಲ್ಲಾಧಿ ಕಾರಿಗಳ ವಾಸ್ತವ್ಯದ ಹಿನ್ನೆಲೆಯಲ್ಲಿ
ಇಲ್ಲಿನ ಜನರಲ್ಲಿ ಹೊಸ ನಿರೀಕ್ಷೆಗಳು ಮೂಡಿವೆ. ಅಧಿ ಕಾರಿಗಳು ಗ್ರಾಮದ ಕಡೆ ಮುಖ ಮಾಡಿದ್ದಾರೆ. ಈ ಮೂಲಕ ಇಲ್ಲಿನ ಜನರ ವಿಧವಾ ವೇತನ, ವೃದ್ಧಾಪ್ಯ ವೇತನದಂತಹ ಅನೇಕ ಸಣ್ಣಪುಟ್ಟ ಸಮಸ್ಯೆಗಳಿಗೆ ಮುಕ್ತಿ ದೊರೆಯುವ ನಿರೀಕ್ಷೆ ಮೂಡಿದೆ.
ಪರಿಶಿಷ್ಟ ಪಂಗಡದವರು, ಹಿಂದುಳಿದವರು ಸೇರಿದಂತೆ ಗ್ರಾಮದಲ್ಲಿ 114 ಕುಟುಂಬಗಳು, ಸುಮಾರು 638 ಜನಸಂಖ್ಯೆ ಇದೆ. ತಾಲೂಕಿನ ಅತ್ಯಂತ ಹಿಂದುಳಿದ ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ, ವಸತಿ ಮತ್ತಿತರ ಪ್ರಮುಖ ಸಮಸ್ಯೆಗಳು ಬಾ ಧಿಸುತ್ತಿವೆ.
ಮಳೆಯಾಗದಿದ್ದರೆ ಎಲ್ಲವೂ ಬರಕ್ಕೆ ನೈವೇದ್ಯ: ಮೊಳಕಾಲ್ಮೂರು ತಾಲೂಕು “ಮಳೆ ನೆರಳಿನ ಪ್ರದೇಶ’ ಎಂದೇ ಗುರುತಿಸಿಕೊಂಡಿದೆ. ಇಲ್ಲಿ ಮಳೆಯಲ್ಲ, ಮಳೆಯ ನೆರಳು ಮಾತ್ರ ಬೀಳುತ್ತೆ ಎಂದು ರೈತರು ಹೇಳುತ್ತಾರೆ. ಮಳೆಯೇ ಇಲ್ಲದಿರುವಾಗ ಅಂತರ್ಜಲ ಕೇಳುವುದೇ
ಬೇಡ. ನದಿ ಮೂಲಗಳೂ ಇಲ್ಲ. ರೈತರು ಮಳೆ ನಂಬಿ ಕೃಷಿ ಮಾಡುತ್ತಿದ್ದು, ಸಕಾಲಕ್ಕೆ ಮಳೆಯಾದರೆ ನೆಮ್ಮದಿ. ಇಲ್ಲದಿದ್ದರೆ ಗಂಟು
ಮೂಟೆ ಕಟ್ಟಿಕೊಂಡು ಗುಳೆ ಹೋಗುವುದು ಅನಿವಾರ್ಯವಾಗಿದೆ.
ಶೇಂಗಾ, ಜೋಳ, ಹತ್ತಿ, ಸಜ್ಜೆ, ನವಣೆ ಇಲ್ಲಿ ಬೆಳೆಯುವ ಬೆಳೆಗಳು. ಜೀವನೋಪಾಯಕ್ಕೆ ಬಹುತೇಕರು ನೆರೆಯ ಬಳ್ಳಾರಿ ನಗರದ ಕೈಗಾರಿಕೆಗಳಿಗೆ ಇಲ್ಲಿಂದ ಓಡಾಡುತ್ತಾರೆ. ಮಳೆ ಇಲ್ಲದೆ ಬೆಳೆ ಕೈ ಕೊಟ್ಟಾಗ ಪಾವತಿ ಮಾಡಿದ ವಿಮೆ ಕೂಡ ಇಲ್ಲಿನ ಜನರಿಗೆ ಸಿಗುತ್ತಿಲ್ಲ. ಇದಕ್ಕೆ
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂಬುದು ರೈತರ ಬೇಸರ.
ಪ್ರೌಢಶಿಕ್ಷಣಕ್ಕೆ 4 ಕಿಮೀ ಪಾದಯಾತ್ರೆ ಅನಿವಾರ್ಯ: ಕಣಕುಪ್ಪೆ ಗ್ರಾಮದಲ್ಲಿ ಅಂಗನವಾಡಿ ಹಾಗೂ 1 ರಿಂದ 7ನೇ ತರಗತಿವರೆಗೆ ಮಾತ್ರ ಕಲಿಯಲು ಅವಕಾಶವಿದೆ. ಗ್ರಾಮದಲ್ಲಿ 7 ತರಗತಿಗಳಲ್ಲಿ ಒಟ್ಟು 79 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಗೆ ಶುದ್ಧ ನೀರಿನ ಘಟಕ, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ, ಶಾಲಾ ಕೊಠಡಿಗಳ ದುರಸ್ಥಿ ಹಾಗೂ ಕೊರತೆ ಇರುವ ಶಿಕ್ಷಕರನ್ನು ನೇಮಕ ಮಾಡಬೇಕಿದೆ.
ಪ್ರೌಢಶಿಕ್ಷಣಕ್ಕೆ ಇಲ್ಲಿಂದ 4 ಕಿಮೀ ದೂರದಲ್ಲಿರುವ ತಮ್ಮೇನಹಳ್ಳಿಗೆ ಹೋಗಬೇಕಾಗಿದೆ. ಪ್ರತಿ ದಿನ ಮಕ್ಕಳು 8 ಕಿಮೀ ನಡೆದು ಪ್ರೌಢಶಾಲೆಗೆ ಹೋಗಿ ಬರಬೇಕಾಗಿದೆ. ಈ ಕಾರಣದಿಂದ ಗ್ರಾಮದ ಸಾಕಷ್ಟು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಳ್ಳಾರಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ.
ಚರಂಡಿ, ಪಡಿತರ, ವಸತಿ ಸಮಸ್ಯೆ: ಕಣಕುಪ್ಪೆ ಗ್ರಾಮದೊಳಗೆ ಸಿಸಿ ರಸ್ತೆಗಳಿವೆ. ಆದರೆ ಚರಂಡಿ ನೀರು ಹರಿಯಲು ಚರಂಡಿಗಳೇ ಇಲ್ಲ.
ಪರಿಣಾಮ ಬಚ್ಚಲು ಮನೆಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಯಲ್ಲಿ ಕೊಳಚೆ ಹರಿಯುವುದರಿಂದ ದುರ್ವಾಸನೆ ಇದೆ. ಈ
ಊರಿನವರು ಪಡಿತರ ಪಡೆಯಲು ಪಕ್ಕದ ತಮ್ಮೇನಹಳ್ಳಿಗೆ ನಡೆದು ಹೋಗಬೇಕು ಅಥವಾ ಸಿಕ್ಕಿದ ವಾಹನ ಹಿಡಿದು ಹೋಗಬೇಕಾಗಿದೆ. ಈ
ಗ್ರಾಮದ ವಸತಿ ರಹಿತರಿಗಾಗಿ ವಸತಿ ಸೌಲಭ್ಯಕ್ಕೆ ಕಲ್ಪಿಸಿರುವ ಅನುದಾನ ಕಡಿತವಾಗಿದೆ. ಇದರಿಂದ ಸೂರಿಲ್ಲದೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ಸಂಕಷ್ಟದಲ್ಲಿ ಬದುಕುವ ಸ್ಥಿತಿ ಇದೆ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದ್ದರಿಂದ ರಾಂಪುರ ಗ್ರಾಮಕ್ಕೆ
ತೆರಳಬೇಕಾಗಿದೆ. ಜಿಲ್ಲಾ ಧಿಕಾರಿಗಳು ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತಾರಾ ಎಂಬುದು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಗೊತ್ತಾಗಲಿದೆ.
ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಣಕುಪ್ಪೆ ಗ್ರಾಮದಲ್ಲಿ ಜಿಲ್ಲಾ ಧಿಕಾರಿಗಳ ವಾಸ್ತವ್ಯದ ಹಿನ್ನೆಲೆಯಲ್ಲಿ ಒಂದು ವಾರ ಮೊದಲೇ ಕಂದಾಯ ಇಲಾಖೆಯಿಂದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ
ತಾಲೂಕು ಮಟ್ಟದ ಇಲಾಖಾ ಅ ಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಗ್ರಾಮದಲ್ಲಿ ಆಗಬೇಕಾದ ಕೆಲಸ, ವಾಸ್ತವ್ಯದ ಸಿದ್ಧತೆ ನಡೆಸಲಾಗುತ್ತಿ¨
ಬಿ.ಆರ್. ಆನಂದಮೂರ್ತಿ,
ಪ್ರಭಾರಿ ತಹಶೀಲ್ದಾರ್, ಮೊಳಕಾಲ್ಮೂರು
ಎಸ್. ರಾಜಶೇಖರ್
ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.